Fact Check: ರಬ್ಬರ್ ಬ್ಯಾಂಡಿನಂತೆ ಕಾಂಡೋಮ್ ಹಾಕ್ಕೊಂಡವಳು JNU ವಿದ್ಯಾರ್ಥಿನಿಯೇ?

By Web DeskFirst Published Nov 22, 2019, 12:01 PM IST
Highlights

ಹುಡುಗಿಯೊಬ್ಬಳು ಮದ್ಯದ ಬಾಟಲಿ ಹಿಡಿದು ಕುಳಿತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ಇವರು ಜೆಎನ್‌ಯುವಿನ ವಿದ್ಯಾರ್ಥಿನಿ ಎನ್ನಲಾಗುತ್ತಿದೆ. ಇದು ನಿಜಾನಾ? ಇಲ್ಲಿದೆ ಸುದ್ದಿ ಹಿಂದಿನ ವಾಸ್ತವ

ನವದೆಹಲಿ[ನ.22]: ಹಾಸ್ಟೆಲ್‌ ಶುಲ್ಕ ಏರಿಕೆ, ವಸ್ತ್ರ ಸಂಹಿತಿ ಜಾರಿ ವಿರೋಧಿಸಿ ಜವಹಾರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸತತ ಒಂದು ವಾರಗಳಿಂದ ವ್ಯಾಪಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ ಹುಡುಗಿಯೊಬ್ಬಳು ಮದ್ಯದ ಬಾಟಲಿ ಹಿಡಿದು ಕುಳಿತಿರುವ ಫೋಟೋವನ್ನು ಪೋಸ್ಟ್‌ ಮಾಡಿ, ಇವರು ಜೆಎನ್‌ಯುವಿನ ವಿದ್ಯಾರ್ಥಿ. ಮದ್ಯದ ಬಾಟಲಿ ಹೊರತಾಗಿ ಆಕೆಯ ಕೈಯಲ್ಲಿ 2 ಸಿಗರೇಟ್‌ ಪ್ಯಾಕುಗಳಿವೆ. ಒಂದು ಸಿಗರೇಟು ಪ್ಯಾಕಿನ ಬೆಲೆ 300 ರು. ಇಂಥ ವಿದ್ಯಾರ್ಥಿಗಳು ಹಾಸ್ಟಲ್‌ ಶುಲ್ಕವನ್ನು ಏರಿಸಿದ್ದಕ್ಕೆ ಪ್ರತಿಭಟಿಸುತ್ತಿದ್ದಾರೆ ಎಂದು ವ್ಯಂಗ್ಯವಾಗಿ ಬರೆದು ಟ್ವೀಟ್‌ ಮಾಡಲಾಗಿದೆ. ಇದು 400 ಬಾರಿ ರೀಟ್ವೀಟ್‌ ಆಗಿದೆ.

ಶಾಹೀನ್‌ಬಾಗ್ ಹಿಂಭಾಗದಲ್ಲಿ ಕಾಂಡೋಮ್‌ಗಳ ರಾಶಿ

 

The liquor bottle in her hand apart.. This JNU junkie has 2 packs of "Classic" on the table as she smokes one...Each pack costs 300 bucks.. And these castards are whining about fee hike?... https://t.co/ZgKaLbvB60 pic.twitter.com/sA8pVpEEqF

— Ravinar (@RavinarIN)

ಮತ್ತೊಂದೆಡೆ ಹುಡುಗಿಯೊಬ್ಬಳು ಕಾಂಡಮ್‌ ಅನ್ನು ರಬ್ಬರ್‌ ಬೆಂಡಾಗಿ ಬಳಸಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ಜೆಎನ್‌ಯು ಅಧೋಗತಿಯನ್ನು ಇದಕ್ಕಿಂತ ಚೆನ್ನಾಗಿ ವಿವರಿಸಲು ಸಾಧ್ಯವಿಲ್ಲ’ ಎನ್ನಲಾಗಿದೆ. ಇವೆರಡೂ ಫೋಟೋದಲ್ಲಿರುವವರು ಜೆಎನ್‌ಯುನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಎಂದು ಹೇಳಲಾಗಿದೆ.

ವೈರಲ್ ಚೆಕ್ ಸುದ್ದಿಗಳಿಗಾಗು ಇಲ್ಲಿ ಕ್ಲಿಕ್ಕಿಸಿ

ಇದು ನಿಜವೇ ಎಂದು ಆಲ್ಟ್‌ನ್ಯೂಸ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇವೆರಡೂ ಫೋಟೋಗಳೂ ಜೆಎನ್‌ಯುಗೆ ಸಂಬಂಧಿಸಿದವಲ್ಲ ಎಂದು ತಿಳಿದುಬಂದಿದೆ.

ಮೊದಲನೇ ಫೋಟೋವನ್ನು ಬ್ಲಾಗ್‌ವೊಂದರಲ್ಲಿ 2016ರಲ್ಲಿ ಪೋಸ್ಟಮಾಡಲಾಗಿದ್ದು, ಅದರಲ್ಲಿ ‘ಇವತ್ತಿನ ಹುಡುಗಿಯರು’ ಎಂದಷ್ಟೇ ಬರೆಯಲಾಗಿದೆ ಹೊರತು ಬೇರಾವುದೇ ಮಾಹಿತಿ ಇಲ್ಲ. ಇನ್ನು ಎರಡನೆಯ ಫೋಟೋವನ್ನು 2017ರಲ್ಲಿ ಟ್ವೀಟ್‌ ಮಾಡಲಾಗಿತ್ತು. ಹೀಗೆ ಇಂಟರ್‌ನೆಟ್‌ನಲ್ಲಿ ಲಭ್ಯವಿರುವ ಫೋಟೋಗಳನ್ನು ಪೋಸ್ಟ್‌ ಮಾಡಿ ಜೆಎನ್‌ಯು ವಿದ್ಯಾರ್ಥಿಗಳೆಂದು ಸುಳ್ಳುಸುದ್ದಿ ಹರಡಲಾಗುತ್ತಿದೆ.

click me!