ಮಹಾರಾಷ್ಟ್ರದಲ್ಲಿ ಮುಂದುವರೆದ ರಾಜಕೀಯ ಹೈಡ್ರಾಮಾ | ಹೋಟೆಲ್ ಹಯಾತ್’ನಲ್ಲಿ ಶಿವಸೇನೆ, ಕಾಂಗ್ರೆಸ್-ಎನ್’ಸಿಪಿ ಸಭೆ| ವಿ ಆರ್ 162 ಹೆಸರಲ್ಲಿ ಗ್ರ್ಯಾಂಡ್ ಹಯಾತ್’ನಲ್ಲಿ ಒಗ್ಗಟ್ಟು ಪ್ರದರ್ಶನ| 162 ಶಾಸಕರ ಪರೇಡ್ ನಡೆಸಿದ ಮೈತ್ರಕೂಟ| ಸಭೆಗ ಹಾಜರಾದ ಮೂರು ಪಕ್ಷಗಳ ಪ್ರಮುಖ ನಾಯಕರು|
ಮುಂಬೈ(ನ.25): ಮಹಾರಾಷ್ಟ್ರದಲ್ಲಿ ರಾಜಕೀಯ ಹೈಡ್ರಾಮಾ ಮುಂದುವರೆದಿದ್ದು, ಶಿವಸೇನೆ, ಎನ್’ಸಿಪಿ-ಕಾಂಗ್ರೆಸ್ ಮೈತ್ರಿಕೂಟದ ಸಭೆ ಮುಂಬೈನ ಗ್ರ್ಯಾಂಡ್ ಹಯಾತ್ ಹೋಟೆಲ್’ನಲ್ಲಿ ನಡೆಯುತ್ತಿದೆ.
ಮೂರೂ ಪಕ್ಷಗಳ ಒಟ್ಟು 162 ಶಾಸಕರು ಸಭೆಗೆ ಹಾಜರಿದ್ದು, ಒಂದರ್ಥದಲ್ಲಿ ಗ್ರ್ಯಾಂಡ್ ಹೋಟೆಲ್’ನಲ್ಲಿ ಶಾಸಕರ ಪರೇಡ್ ನಡೆಯುತ್ತಿದೆ.
Mumbai: Shiv Sena-NCP-Congress MLAs assemble at Hotel Grand Hyatt. pic.twitter.com/7dmViA6uXF
— ANI (@ANI)
undefined
ಚಂಬಲ್ ಡಕಾಯಿತರು: ಬಿಜೆಪಿಗೆ ಸಂಜಯ್ ರಾವುತ್ ಬೈದರು!
ಈಗಾಗಲೇ ಗ್ರ್ಯಾಂಡ್ ಹಯಾತ್ ಹೋಟೆಲ್’ನಲ್ಲಿ ಮೂರೂ ಪಕ್ಷಗಳ ಪ್ರಮುಖ ನಾಯಕರು ಬಂದಿಳಿದಿದ್ದು, ಮೂರೂ ಪಕ್ಷಗಳ ಶಾಸಕರನ್ನು ಬಸ್’ನಲ್ಲಿ ಹೋಟೆಲ್’ಗೆ ಕರೆತರಲಾಯಿತು.
ವಿ ಆರ್ 162 ಹೆಸರಲ್ಲಿ ಸಭೆ ನಡೆಯುತ್ತಿದ್ದು, ಶಿವಸೇನೆಯ ಆದಿತ್ಯ ಠಾಕ್ರೆ, ಎನ್’ಸಿಪಿಯ ಸುಪ್ರಿಯಾ ಸುಳೆ ಹಗೂ ಇತರ ಪ್ರಮುಖ ನಾಯಕರು ಸಭೆಯ ಕೇಂದ್ರಬಿಂದುವಾಗಿ ಕಾಣಿಸಿಕೊಂಡಿದ್ದಾರೆ.
Mumbai: Shiv Sena's Uddhav Thackeray & Aaditya Thackeray arrive at at Hotel Grand Hyatt where Shiv Sena-NCP-Congress MLAs have assembled. pic.twitter.com/pVPbgU55QW
— ANI (@ANI)
ಮತ್ತೊಂದು ದಿನ ಫಡ್ನವೀಸ್ ಸರ್ಕಾರ ಸೇಫ್, ನಾಳೆ ಸುಪ್ರೀಂ ಅಂತಿಮ ತೀರ್ಪು!
ಒಟ್ಟಿನಲ್ಲಿ ಹೋಟೆಲ್ ಹಯಾತ್ ಸಭೆ ಬಿಜೆಪಿಗೆ ನೇರ ಸಂದೇಶ ಕಳುಹಿಸಿದ್ದು, ಬಹುಮತ ಸಾಬೀತುಪಡಿಸುವುದು ಅಷ್ಟು ಸುಲಭವಲ್ಲ ಎಂಬ ಸಂದೇಶ ಕೇಸರಿ ಪಕ್ಷಕ್ಕೆ ರವಾನಿಸಿದಂತಾಗಿದೆ.
Mumbai: Shiv Sena-NCP-Congress MLAs assemble at Hotel Grand Hyatt. pic.twitter.com/L006En4Qy5
— ANI (@ANI)