'ಉಳಿದವರು ಕುಸಿದು ಕುಳಿತಾಗ, ಆಕೆ ಎದ್ದು ನಿಂತಳು': ಸೇನೆ ಸೇರಿದ ಹುತಾತ್ಮ ಯೋಧನ ಪತ್ನಿ..!

By Suvarna NewsFirst Published Jul 9, 2020, 3:38 PM IST
Highlights

ಹುತಾತ್ಮ ಪತಿಗೆ ಗೌರವಾರ್ಥವಾಗಿ ಸೇನೆಗೆ ಸೇರಿದ ಗೌರಿ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಪತಿ ಹುತಾತ್ಮರಾದರೂ, ಛಲದಿಂದ ಸೇನೆಗೆ ಸೇರಿದ ಇವರ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ನವದೆಹಲಿ(ಜು.09): ಪತಿ ದೇಶ ಸೇವೆಯಲ್ಲಿ ಹುತಾತ್ನನಾದಾಗ ಧೈರ್ಯಗುಂದದೆ ತಾನೂ ಸೇನೆ ಸೇರಿ ಪತಿಗೆ ಗೌರವ ಸಲ್ಲಿಸಿದ ಮಹಿಳೆ ಬಗ್ಗೆ ಇದೀಗ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ. ಈ ಬಗ್ಗೆ ಕೆಂದ್ರ ಸಚಿವೆ ಸ್ಮೃತಿ ಇರಾನಿ ಭಾವನಾತ್ಮಕ ಪೋಸ್ಟ್ ಶೇರ್ ಮಾಡಿದ್ದಾರೆ.

2017ರಲ್ಲಿ ಚೀನಾ-ಭಾರತ ಗಡಿಯಲ್ಲಿ ಬೆಂಕಿ ಅಪಘಾತದಲ್ಲಿ ಹುತಾತ್ಮರಾದ ಮೇಜರ್ ಪ್ರಸಾದ್ ಗಣೇಶ್ ಪತ್ನಿ ಗೌರಿ ಪ್ರಸಾದ್ ಮಹಾದಿಕ್ ಭಾರತೀಯ ಸೇನೆ ಸೇರುವ ಮೂಲಕ ಹುತಾತ್ಮರಾದ ತನ್ನ ಪತಿಗೆ ಗೌರವ ಸಲ್ಲಿಸಿದ್ದಾರೆ.

ಉಗ್ರರ ಗುಂಡಿನ ದಾಳಿ ನಡುವೆ ಭಾರತೀಯ ಯೋಧನ ಕೈಯ್ಯಲ್ಲಿ ಸುರಕ್ಷಿತ ಈ ಕಂದ!

ಪತಿಯ ಸಾವಿನ ನಂತರ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ದೇಶ ಸೇವೆಗೆ ನಿಲ್ಲುವುದಕ್ಕೆ ಗೌರಿ ನಿರ್ಧರಿಸಿದ್ದರು. ಅಧಿಕಾರಿಗಳ ತರಬೇತಿ ಕೇಂಣದ್ರದಲ್ಲಿ ತರಬೇತಿ ಪಡೆದ ನಂತರ ಗೌರಿ ಮಾರ್ಚ್ ತಿಂಗಳಲ್ಲಿ ಲೆಫ್ಟಿನೆಂಟ್ ಆಗಿ ಭಾರತೀಯ ಸೇನೆಗೆ ಸೇರಿದ್ದಾರೆ.

ನಾನೊಬ್ಬ ವಕೀಲೆ ಮತ್ತು ಕಂಪನಿಯೊಂದರ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದೆ. ಆರೆ ನನ್ನ ಪತಿ ಹುತಾತ್ಮರಾದಾಗ ಕೆಲಸಕ್ಕೆ ರಾಜೀನಾಮೆ ನೀಡಿ, ಸಶಸ್ತ್ರ ಪಡೆ ಸೇರಲು ಸಿದ್ಧತೆ ಆರಂಭಿಸಿದೆ. 

11 ಸಾವಿರ ಅಡಿ ಎತ್ತರದಲ್ಲಿರುವ ನೀಮು: ಕಾರ್ಗಿಲ್‌ ಯುದ್ಧ ವೇಳೆ ಪ್ರಮುಖ ಪಾತ್ರ ವಹಿಸಿದ್ದ ತಾಣ!

ನನ್ನ ಪತಿಗೆ ಗೌರವವಾಗಿ ಸೈನ್ಯಕ್ಕೆ ಸೇರಲು ನಾನು ದೃಢವಾಗಿ ನಿಶ್ಚಯಿಸಿದ್ದೆ ಮತ್ತು ಸೇನೆ ನನ್ನನ್ನು ಲೆಫ್ಟಿನೆಂಟ್ ಆಗಿ ನಿಯೋಜಿಸಿದೆ.  ನಾನು ಧರಿಸುವ ಸಮವಸ್ತ್ರ ನನ್ನದಲ್ಲ ನಮ್ಮದಾಗುತ್ತದೆ ಎಂದು ನುಡಿದಿದ್ದಾರೆ ಗೌರಿ.

ಲೆಫ್ಟಿನೆಂಟ್ ಗೌರಿ ಅವರ ಫೋಟೋ ಶೇರ್ ಮಾಡಿದ ಇರಾನಿ, ಅವರ ದೈರ್ಯ ಮತ್ತು ಸಾಹಸದ ಬಗ್ಗೆ ಮೆಚ್ಚಿ ಬರೆದಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಬರೆದು ಭಾರತೀಯ ಸ್ರ್ತೀಯ ದೈರ್ಯವನ್ನು ಕೊಂಡಾಡಿದ್ದಾರೆ.

ಮೋದಿ ರಹಸ್ಯ ಭೇಟಿ ಸೂತ್ರದಾರ ದೋವಲ್‌!

ಎಲ್ಲರೂ ಕುಸಿದು ಕುಳಿತಾಗ, ಆಕೆ ಎದ್ದು ನಿಂತರು ಎಂದು ಬರೆದುಕೊಂಡಿರುವ ಇರಾನಿ, ಆನ್‌ಲೈನ್‌ನಲ್ಲಿ ಕಂಡ ಈ ಸುದ್ದಿ ನೋಡಿ ಹೆಮ್ಮೆ ಎನಿಸಿತು. ನಿಜವಾದ ಭಾರತೀಯ ಸ್ರ್ತೀಯ ಸಾಮರ್ಥ್ಯ ತೋರಿಸಿಕೊಡಲು ಆಕೆ ಬದುಕಿದರು ಎಂದು ಬರೆದಿದ್ದಾರೆ.

2012ರಲ್ಲಿ ಸೇನೆ ಸೇರಿದ ಗಣೇಶ್ ಪ್ರಸಾದ್ ಬಿಹಾರದ ರೆಜಿಮೆಂಟ್‌ನಲ್ಲಿ 7ನೇ ಬೆಟಾಲಿಯನ್‌ನಲ್ಲಿ ನಿಯೋಜಿತರಾಗಿದ್ದರು. ತವಾಂಗ್‌ನಲ್ಲಿ ಕ್ಯಾಂಪ್‌ನಲ್ಲಿದ್ದಾಗ 2017 ಡಿಸೆಂಬರ್ 30ರಂದು ನಡೆದ ಬೆಂಕಿ ತಗುಲಿ ಹುತಾತ್ಮರಾಗಿದ್ದರು. ಇವರು 2015ರ ಫೆಬ್ರವರಿಯಲ್ಲಿ ವಿವಾಹಿತರಾಗಿದ್ದರು.

click me!