Aryan Khan Drug Case : ಶಾರುಖ್ ಪುತ್ರ ಇನ್ನು ಪ್ರತಿ ವಾರ NCB ಆಫೀಸ್ ಗೆ ಬರಬೇಕಾಗಿಲ್ಲ!

By Suvarna NewsFirst Published Dec 15, 2021, 4:49 PM IST
Highlights

ಪ್ರತಿ ಶುಕ್ರವಾರ ಮುಂಬೈ NCB ಕಚೇರಿಗೆ ಬರುವ ಅಗತ್ಯವಿಲ್ಲ
ಜಾಮೀನಿನ ಷರತ್ತಿನಲ್ಲಿ ಪ್ರಮುಖ ಬದಲಾವಣೆ
ಬಾಂಬೆ ಹೈ ಕೋರ್ಟ್ ನಿಂದ ಆದೇಶ

ಮುಂಬೈ (ಡಿ.15): ಮಾದಕ ದ್ರವ್ಯ ಪ್ರಕರಣ ಸಂಬಂಧ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ  (Shah Rukh Khan Son Aryan Khan) ಬಾಂಬೆ ಹೈ ಕೋರ್ಟ್ (Bombay High Court) ನಿರಾಳ ನೀಡಿದೆ. ಜಾಮೀನಿನಲ್ಲಿದ್ದ ಷರತ್ತನ್ನು ಮಾರ್ಪಡಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಗೆ ಸಲ್ಲಿಸಿದ್ದ ಮನವಿಯನ್ನು ಕೋರ್ಟ್ ಪುರಸ್ಕಾರ ಮಾಡಿದ್ದು, ಪ್ರತಿ ಶುಕ್ರವಾರ ಮುಂಬೈನ ಎನ್ ಸಿಬಿ (NCB) ಕಚೇರಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಿದೆ. ಬಾಂಬೆ ಹೈ ಕೋರ್ಟ್ ಗೆ ಕೆಲ ದಿನದ ಹಿಂದೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಮಾಡಿದ ಕೋರ್ಟ್, ಜಾಮೀನನ ಭಾಗವಾಗಿ ಪ್ರತಿ ಶುಕ್ರವಾರ ಅವರು ಮುಂಬೈನಲ್ಲಿರುವ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (Narcotics Control Bureau ) ಕಚೇರಿಗೆ ಹಾಜರಾಗುವ ಅಗತ್ಯವಿಲ್ಲ ಎಂದು ತಿಳಿಸಿದೆ. ಮುಂಬೈನ ಕ್ರೂಸ್ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಅಕ್ಟೋಬರ್ 3 ರಂದು ಬಂಧನಕ್ಕೆ ಒಳಗಾಗಿದ್ದ ಆರ್ಯನ್ ಖಾನ್ ಗೆ ಅಕ್ಟೋಬರ್ 30 ರಂದು ಬಾಂಬೆ ಹೈ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿತ್ತು.


ಜಾಮೀನು ನೀಡುವ ಸಂದರ್ಭದಲ್ಲಿ ಆರ್ಯನ್ ಖಾನ್ ಪ್ರತಿ ಶುಕ್ರವಾರ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ಗಂಟೆಯ ನಡುವೆ ಮುಂಬೈನ ಎನ್ ಸಿಬಿ ಕಚೇರಿಗೆ ಹಾಜರಾಗಬೇಕು ಎಂದು ತಿಳಿಸಿತ್ತು. ಅದರಂತೆ ಆರ್ಯನ್ ಖಾನ್, ನವೆಂಬರ್ 5, 12, 19, 26 ಮತ್ತು ಡಿಸೆಂಬರ್ ತಿಂಗಳ 3 ಹಾಗೂ 10 ರಂದು ಎನ್ ಸಿಬಿ ಮುಂದೆ ಹಾಜರಾಗಿದ್ದರು. ಜಾಮೀನಿನಲ್ಲಿದ್ದ ಷರತ್ತಿನ್ನು ಸಡಿಲ ಮಾಡುವಂತೆ ಆರ್ಯನ್ ಖಾನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಎನ್ ಡಬ್ಲ್ಯು ಸಾಂಬ್ರೇ (N W Sambre) ನೇತೃತ್ವದ ಏಕ ಸದಸ್ಯ ಪೀಠ, ಷರತ್ತಿನಲ್ಲಿ ಬದಲಾವಣೆ ತಂದಿದೆ.


"ಅರ್ಜಿ ಸಲ್ಲಿಸಿರುವ ಆರ್ಯನ್ ಖಾನ್ ಕಚೇರಿಗೆ ಆಗಮಿಸಬೇಕಾದ ಹಂತದಲ್ಲಿ 72 ಗಂಟೆಗಳ ಮುಂಚಿತವಾಗಿ ಎನ್ ಸಿಬಿ ನೋಟೀಸ್ ನೀಡಬೇಕು. ಬಳಿಕ ಅವರು ದೆಹಲಿಯ ಎನ್ ಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು' ಎಂದು ನ್ಯಾಯಮೂರ್ತಿ ಸಾಂಬ್ರೇ ಹೇಳಿದ್ದಾರೆ. ಮುಂಬೈನಿಂದ ಹೊರಗೆ ಪ್ರಯಾಣಿಸುವ ವೇಳೆ ಪ್ರತಿ ಬಾರಿಯೂ ಅವರು ಎನ್ ಸಿಬಿಗೆ ಮಾಹಿತಿ ನೀಡಬೇಕು ಎನ್ನುವ ಷರತ್ತಿನಲ್ಲಿಯೂ ಕೂಡ ಕೋರ್ಟ್ ಬದಲಾವಣೆ ತಂದಿದೆ.

Life coach for Aryan Khan: ಶಾರೂಖ್‌ ಮಗನಿಗೆ ಜೀವನ ಪಾಠ ಹೇಳಲು ಲೈಫ್‌ ಕೋಚ್ ನೇಮಕ
ದೆಹಲಿಗೆ ತೆರಳಿ ಅವರು ತಮ್ಮ ಹೇಳಿಕೆಯನ್ನು ನೀಡುವ ವೇಳೆ, ಅರ್ಜಿದಾರನಾಗಿರುವ ಆರ್ಯನ್ ಖಾನ್ ತನ್ನ ಪ್ರವಾಸದ ಮಾಹಿತಿಯನ್ನು ಎನ್ ಸಿಬಿಗೆ ಒದಗಿಸಬೇಕಿಲ್ಲ.  ಆದರೆ, ಮುಂಬೈನ ಹೊರಗಡೆ ಬೇರೆ ಕಾರಣಗಳಿಗೆ ಪ್ರಯಾಣ ನಡೆಸಬೇಕಾದ ಸಂದರ್ಭದಲ್ಲಿ ಎನ್ ಸಿಬಿಗೆ ಅವರು ಮಾಹಿತಿ ನೀಡಬೇಕು ಎಂದು ಆದೇಶದಲ್ಲಿ ನ್ಯಾಯಮೂರ್ತಿ ಸಾಂಬ್ರೇ ತಿಳಿಸಿದ್ದಾರೆ. ಮುಂಬೈನ ಎನ್ ಸಿಬಿ ಕಚೇರಿಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಕಕ್ಷಿದಾರ ಆರ್ಯನ್ ಖಾನ್ ಈ ಪ್ರಕರಣದಲ್ಲಿ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಎಸ್ಐಟಿ ತನಿಖೆಗೂ ಅಗಮಿಸಿ ತಮ್ಮ ಹೇಳಿಕೆಯನ್ನು ಅವರು ದಾಖಲಿಸಿದ್ದಾರೆ. ಹಾಗೇನಾದರೂ ಆರ್ಯನ್ ಖಾನ್ ಗೆ ಎನ್ ಸಿಬಿಯ ಎಸ್ ಐಟಿ ತಂಡ ದೆಹಲಿಗೆ ಆಗಮಿಸುವಂತೆ ಸಮನ್ಸ್ ನೀಡಿದ್ದಲ್ಲಿ ಖಂಡಿಆ ಹಾಜರಾಗುತ್ತಾರೆ. ಪ್ರತಿ ಬಾರಿ ಅವರು ಮುಂಬೈನ ಎನ್ ಸಿಬಿ ಕಚೇರಿಗೆ ಆಗಮಿಸಿದಾಗಲೆಲ್ಲಾ ಸಾಕಷ್ಟು ಜನಜಂಗುಳಿ ಇರುತ್ತದೆ. ಅವರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಗುತ್ತದೆ ಎಂದು ಆರ್ಯನ್ ಖಾನ್ ಪರ ವಕೀಲ ಅಮಿತ್ ದೇಸಾಯಿ (Amit Desai) ಕೋರ್ಟ್ ಗೆ ತಿಳಿಸಿದ್ದಾರೆ.

Drugs Case| ಆರ್ಯನ್‌ನಿಂದ ವ್ಯಾಪಾರಕ್ಕಾಗಿ ಡ್ರಗ್ಸ್‌ ಸಂಗ್ರಹಕ್ಕೆ ಸಾಕ್ಷ್ಯ ಇಲ್ಲ!
ಇದೇ ವೇಳೆ ಎನ್ ಸಿಬಿ ಪರ ವಕೀಲ ಶ್ರೀರಾಮ್ ಶಿರ್ ಸಾತ್ (Shreeram Shirsat), ಜಾಮೀನು ಷರತ್ತಿನಲ್ಲಿ ಬದಲಾವಣೆ ಮಾಡಲು ಎನ್ ಸಿಬಿಗೆ ಯಾವುದೇ ಸಮಸ್ಯೆ ಇಲ್ಲ. ಮುಂಬೈ ಅಥವಾ ದೆಹಲಿಯ ಎನ್ ಸಿಬಿ ಕಚೇರಿಗೆ ಆಗಮಿಸುವಂತೆ ಸಮನ್ಸ್ ನೀಡಿದಲ್ಲಿ ಕಡ್ಡಾಯವಾಗಿ ಅವರು ಹಾಜರಾಗಬೇಕು ಎಂದು ಕೋರ್ಟ್ ಗೆ ಹೇಳಿದ್ದಾರೆ.

click me!