ಶಾರುಖ್ ಖಾನ್ ಮತ್ತು ಅನಂತ್ ಅಂಬಾನಿ ವಿಡಿಯೋ ವಿವಾದ: BNS ಸೆಕ್ಷನ್ 356 ಅಡಿಯಲ್ಲಿ ಕಾನೂನು ಕ್ರಮದ ಎಚ್ಚರಿಕೆ

Published : Nov 26, 2026, 01:47 PM IST
shah rukh khan legal notice influencer anant ambani viral video

ಸಾರಾಂಶ

ನಟ ಶಾರುಖ್ ಖಾನ್ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದಾರೆ. ಉದ್ಯಮಿ ಅನಂತ್ ಅಂಬಾನಿ ಜೊತೆಗಿನ ಶಾರುಖ್ ಖಾನ್ ಅವರ ಸಂಭಾಷಣೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ

ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವಿರುದ್ಧ ಕಾನೂನು ಸಮರಕ್ಕೆ ಇಳಿದಿದ್ದಾರೆ. ಉದ್ಯಮಿ ಅನಂತ್ ಅಂಬಾನಿ ಜೊತೆಗಿನ ಶಾರುಖ್ ಖಾನ್ ಅವರ ಸಂಭಾಷಣೆಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ವಿಡಿಯೋಗೆ ಸಂಬಂಧಿಸಿದಂತೆ ಸುಳ್ಳು ಮತ್ತು ಮಾನಹಾನಿಕರ ಆರೋಪಗಳನ್ನು ಮಾಡಲಾಗಿದೆ ಎಂದು ನಟನ ಕಾನೂನು ತಂಡ ಆಕ್ಷೇಪ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲ, ಸಂಬಂಧಪಟ್ಟ ಇನ್‌ಫ್ಲುಯೆನ್ಸರ್‌ಗೆ ಲೀಗಲ್ ನೋಟಿಸ್ ಕೂಡ ಕಳುಹಿಸಿದೆ.

ಏನಿದು ಶಾರುಖ್ ಖಾನ್ ಮತ್ತು ಅನಂತ್ ಅಂಬಾನಿ ನಡುವಿನ ವೈರಲ್ ವಿಡಿಯೋ?

ಆಧ್ಯಾತ್ಮಿಕ ಗುರು ಸದ್ಗುರು ಅವರೊಂದಿಗಿನ ಭೇಟಿಯ ಸಂದರ್ಭದಲ್ಲಿ ಉದ್ಯಮಿ ಅನಂತ್ ಅಂಬಾನಿ ಹಾಗೂ ಶಾರುಖ್ ಖಾನ್ ಪರಸ್ಪರ ಮಾತನಾಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಈ ವಿಡಿಯೋವನ್ನು ಆಧರಿಸಿ ಸುವಿಗ್ಯ ಶರ್ಮಾ (Suvigya Sharma) ಎಂಬ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಇನ್‌ಸ್ಟಾಗ್ರಾಂನಲ್ಲಿ ರೀಲ್ ಒಂದನ್ನು ಹಂಚಿಕೊಂಡಿದ್ದರು.

ಈ ರೀಲ್‌ನಲ್ಲಿ ಶಾರುಖ್ ಖಾನ್ ಅವರಿಗೆ ಮಾತನಾಡದಂತೆ, ಸುಮ್ಮನಿರುವಂತೆ ಸೂಚಿಸಲಾಗಿದೆ ಎಂಬರ್ಥದ ಆರೋಪ ಮಾಡಲಾಗಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಾಕಷ್ಟು ಚರ್ಚೆಗಳು ಆರಂಭವಾಗಿದ್ದವು. ಆದರೆ, ಈ ಆರೋಪವನ್ನು ಶಾರುಖ್ ಖಾನ್ ಅವರ ಕಾನೂನು ತಂಡ ಸಂಪೂರ್ಣವಾಗಿ ತಳ್ಳಿಹಾಕಿದೆ.

ನವೆಂಬರ್ 23ರಂದು ಲೀಗಲ್ ನೋಟಿಸ್ ಜಾರಿ

ನವೆಂಬರ್ 23ರಂದು ಕಳುಹಿಸಲಾದ ಕಾನೂನು ನೋಟಿಸ್‌ನಲ್ಲಿ ವೈರಲ್ ವಿಡಿಯೋದ ಕ್ಯಾಪ್ಷನ್ ಮತ್ತು ಅದರಲ್ಲಿರುವ ಹೇಳಿಕೆಗಳು ತಪ್ಪು ಅರ್ಥ ಕಲ್ಪಿಸುವಂತಿವೆ ಎಂದು ಶಾರುಖ್ ಖಾನ್ ಅವರ ತಂಡ ತಿಳಿಸಿದೆ. ಈ ಕಂಟೆಂಟ್ ಉದ್ದೇಶಪೂರ್ವಕವಾಗಿ ಸಂಭಾಷಣೆಯ ಸಂದರ್ಭವನ್ನು ತಿರುಚಿದ್ದು, ನಟನ ಗೌರವ ಮತ್ತು ಸಾರ್ವಜನಿಕ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ಆರೋಪಿಸಲಾಗಿದೆ.

ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 356ರ ಅಡಿಯಲ್ಲಿ ಮಾನಹಾನಿ ವಿಚಾರವನ್ನೂ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಸಾರ್ವಜನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ಹಾಗೂ ಹಾನಿಕಾರಕ ಹೇಳಿಕೆಗಳನ್ನು ಹರಡುವುದು ಸರಿಯಲ್ಲ ಎಂದು ಕಾನೂನು ತಂಡ ಎಚ್ಚರಿಸಿದೆ.

48 ಗಂಟೆಗಳ ಗಡುವು; ಇನ್‌ಫ್ಲುಯೆನ್ಸರ್‌ಗೆ 5 ಸೂಚನೆಗಳು

ಶಾರುಖ್ ಖಾನ್ ಅವರ ಕಾನೂನು ತಂಡ ಇನ್‌ಫ್ಲುಯೆನ್ಸರ್‌ಗೆ 48 ಗಂಟೆಗಳ ಗಡುವು ನೀಡಿದ್ದು, ಈ ಅವಧಿಯಲ್ಲಿ ಐದು ಪ್ರಮುಖ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ವಿವಾದಕ್ಕೆ ಕಾರಣವಾಗಿರುವ ಇನ್‌ಸ್ಟಾಗ್ರಾಂ ರೀಲ್ ಅನ್ನು ತಕ್ಷಣವೇ ಅಳಿಸಬೇಕು.

ವಿಡಿಯೋಗೆ ಸಂಬಂಧಿಸಿದ ತಪ್ಪು ಮತ್ತು ವಿವಾದಾತ್ಮಕ ಹೇಳಿಕೆಗಳನ್ನು ಮತ್ತಷ್ಟು ಹಂಚಿಕೊಳ್ಳಬಾರದು.

ವಿಡಿಯೋದ ಕ್ಯಾಪ್ಷನ್ ಹಾಗೂ ಸಂಬಂಧಿತ ಹೇಳಿಕೆಗಳನ್ನು ಅಳಿಸಬೇಕು ಅಥವಾ ಸರಿಪಡಿಸಬೇಕು.

ಮೂಲ ವಿಡಿಯೋ ದೃಶ್ಯಗಳು ಮತ್ತು ಪೋಸ್ಟ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು.

ಕೈಗೊಂಡ ಕ್ರಮಗಳ ಬಗ್ಗೆ 48 ಗಂಟೆಗಳ ಒಳಗೆ ಲಿಖಿತವಾಗಿ ದೃಢೀಕರಣ ನೀಡಬೇಕು.

ಶಾರುಖ್ ಖಾನ್‌ಗೆ ತಿರುಗೇಟು ನೀಡಿದ ಇನ್‌ಫ್ಲುಯೆನ್ಸರ್!

ಇತ್ತ ಲೀಗಲ್ ನೋಟಿಸ್ ಸ್ವೀಕರಿಸಿದ ಬಳಿಕ ಸುವಿಗ್ಯ ಶರ್ಮಾಕೂಡ ಮತ್ತೊಂದು ವಿಡಿಯೋ ಹಂಚಿಕೊಂಡು ಶಾರುಖ್ ಖಾನ್ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ಹೇಳಿಕೆಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಅಡಿಯಲ್ಲಿ ಬರುವ ಟೀಕೆಗಳಾಗಿವೆ ಎಂಬ ವಾದವನ್ನು ಮುಂದಿಟ್ಟಿದ್ದಾರೆ.

"ಹಾಗಾದರೆ, ಶಾರುಖ್ ಖಾನ್ ಅವರನ್ನು ಸುಮ್ಮನಿರುವಂತೆ ಹೇಳಿದ ವ್ಯಕ್ತಿ ಅವರನ್ನು ಅವಮಾನಿಸಿಲ್ಲವೇ? ಅಥವಾ ತಮಗೆ ಅವಮಾನವಾಗಿದೆ ಎಂದು ಹೇಳುವ ಧೈರ್ಯ ಶಾರುಖ್ ಖಾನ್ ಅವರಿಗೆ ಇಲ್ಲವೇ? ಆದರೆ ನಾವು ಮಾತ್ರ ಅವರಿಗೆ ಅವಮಾನ ಮಾಡಿದ್ದೇವೆ ಎಂದು ಹೇಳಲಾಗುತ್ತಿದೆ" ಎಂಬರ್ಥದಲ್ಲಿ ಇನ್‌ಫ್ಲುಯೆನ್ಸರ್ ಪ್ರತಿಕ್ರಿಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ಕಿ ಬದಲು 8 ಬಗೆಯ ಸಿರಿಧಾನ್ಯಗಳ ಇಡ್ಲಿ ಮಾರಿ ತಿಂಗಳಿಗೆ ₹7.5 ಲಕ್ಷ ಆದಾಯ! ಕೇವಲ ₹50,000ದಲ್ಲಿ ಶುರುವಾದ ಸಕ್ಸಸ್ ಕಥೆ!
ದೂರಾದ ಆತಂಕ: ಅಗ್ನಿವೀರರಿಗೆ ಹೆಚ್ಚುವರಿ ಅವಕಾಶ