ಮಕ್ಕಳ ಎದುರು ಲೈಂಗಿಕ ಕ್ರಿಯೆ ಮಾಡುವುದು, ಬೆತ್ತಲಾಗಿ ನಿಲ್ಲುವುದು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದಂತೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೊಚ್ಚಿ: ಮಕ್ಕಳ ಎದುರು ಲೈಂಗಿಕ ಕ್ರಿಯೆ ಮಾಡುವುದು, ಬೆತ್ತಲಾಗಿ ನಿಲ್ಲುವುದು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದಂತೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ವ್ಯಕ್ತಿಯೋರ್ವ ತನ್ನ ವಿರುದ್ಧ ದಾಖಲಾಗಿದ್ದ ಪೋಕ್ಸೋ ಕೇಸ್ ಮತ್ತು ಬಾಲಾಪರಾಧಿ ಕಾಯ್ದೆ ಕೇಸ್ ರದ್ದುಗೊಳಿಸುವಂತೆ ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ಪೀಠ, ಕೋಣೆ ಬಾಗಿಲು ಹಾಕಿಕೊಳ್ಳದೆ, ಬೆತ್ತಲಾಗಿ ಲೈಂಗಿಕ ಕ್ರಿಯೆ ಮಾಡುವಾಗ ಮಕ್ಕಳು ಒಳಗೆ ಬಂದರೆ ಅದು ಮಕ್ಕಳ ತಪ್ಪಲ್ಲ. ಮಕ್ಕಳ ಎದುರು ಬೆತ್ತಲಾಗಿ ನಿಲ್ಲುವುದು ಸಹ ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದಂತೆ. ಹೀಗಾಗಿ ಅವು ಪೋಕ್ಸೋ, ಕಾಯ್ದೆ ಅಡಿ ಶಿಕ್ಷಾರ್ಹ ಅಪರಾಧವಾಗಲಿದೆ ಎಂದು ಅಭಿಪ್ರಾಯಪಟ್ಟಿತು.
ಪೋಕ್ಸೋ ಕೇಸ್ ಏಕೆ: ಅರ್ಜಿದಾರ ವ್ಯಕ್ತಿಯು ಬಾಲಕನ ತಾಯಿಯೊಂದಿಗೆ ಕೋಣೆ ಬಾಗಿಲು ಹಾಕದೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ. ಈ ವೇಳೆ ಬಾಲಕ ಒಳಗೆ ಪ್ರವೇಶಿಸಿದ್ದನ್ನು ಕಂಡು ಕ್ರೋಧಗೊಂಡು ಬಾಲಕನಿಗೆ ಥಳಿಸಿದ್ದ. ಹೀಗಾಗಿ ಆತನ ವಿರುದ್ಧ ಕೇಸ್ ದಾಖಲಾಗಿತು. ಜೊತೆಗೆ ಥಳಿಸಿದ್ದಕ್ಕೆ ಬಾಲಕನ ತಾಯಿ ಆಕ್ಷೇಪಿಸಿರಲಿಲ್ಲ.
'ಸರ್ ಐ ಲವ್ ಯು ಹೇಳು, ಕಿಸ್ ಕೊಡು ಅಂತಾರೆ'; 3ನೇ ತರಗತಿ ಬಾಲಕಿಗೆ ಲೈಂಗಿಕ ಕಿರುಕುಳ, ಕಾಮುಕ ಶಿಕ್ಷಕಬಂಧನ
ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 6 ಸಾವು, 14 ಜನ ಆಸ್ಪತ್ರೆಗೆ ದಾಖಲು
ಸಿವಾನ್/ಸರಣ್: ಬಿಹಾರದ ಸಿವಾನ್ ಹಾಗೂ ಸರಣ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಬುಧವಾರ ಕನಿಷ್ಠ 6 ಜನ ಸಾವನ್ನಪ್ಪಿದ್ದು, 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿವಾನ್ ಜಿಲ್ಲೆಯಲ್ಲಿ ನಾಲ್ವರು ಮತ್ತು ಸರಣ್ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ನಕಲಿ ಮದ್ಯ ಸೇವನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, 2 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. 2016 ರಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ನಿಷೇಧ ಹೇರಲಾಗಿತ್ತು. ಆದರೂ ನಿಷೇಧದ ಬಳಿಕ ಇದುವರೆಗೂ ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನರು ನಕಲಿ ಮದ್ಯ ಸೇವಿಸಿ ಸಾವನ್ನಪ್ಪಿದ್ದಾರೆ.
ಮಾಲ್ಡೀವ್ಸ್‌ನಲ್ಲಿ ಆರ್ಥಿಕ ಬಿಕ್ಕಟ್ಟು: ವಿವಿಧ ಇಲಾಖೆಗೆ ನೇಮಿಸಿದ್ದ 228 ಜನ ವಜಾ
ಮಾಲೆ: ಭಾರತದ ಜೊತೆ ಸಂಬಂಧ ಕೆಡಿಸಿಕೊಂಡ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿರುವ ಮಾಲ್ಡೀವ್ಸ್, ಇದೀಗ ವೆಚ್ಚ ಕಡಿತದ ಭಾಗವಾಗಿ ವಿವಿಧ ಇಲಾಖೆಗೆ ನೇಮಕ ಮಾಡಿದ್ದ 288 ಜನರನ್ನು ವಜಾ ಮಾಡಿದೆ. ಈ ಬಗ್ಗೆ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಜು ಟ್ವಿಟ್ ಮಾಡಿದ್ದು, 'ಸರ್ಕಾರದ ಮೇಲಿನ ವೆಚ್ಚದ ಹೊರೆಯನ್ನು ಇಳಿಸಲು ಮುಂದಿನ 15 ದಿನಗಳಲ್ಲಿ ವಿವಿಧ ಇಲಾಖೆಗಳಿಗೆ ನೇಮಕ ಮಾಡಿದ್ದ 228 ಮಂದಿಯನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಇದರಲ್ಲಿ 7 ರಾಜ್ಯದ ಮಂತ್ರಿಗಳು, 43 ಉಪ ಮಂತ್ರಿಗಳು, 109 ಹಿರಿಯ ರಾಜಕೀಯ ನಿರ್ದೇಶಕರು, 69 ರಾಜಕೀಯ ನಿರ್ದೇಶಕರು ಸೇರಿದ್ದಾರೆ.
ಚುನಾವಣೆ ರ್‍ಯಾಲಿ ವೇಳೆ ಕಾರ್ಯಕರ್ತೆಗೆ ಲೈಂಗಿಕ ಕಿರುಕುಳ ನೀಡಿದ ಹರ್ಯಾಣ ಕಾಂಗ್ರೆಸ್ ನಾಯಕ! ವಿಡಿಯೋ ವೈರಲ್