ಕೇಂದ್ರ ಸರ್ಕಾರ, ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದು, ಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಮಾಡಲು ನಿರ್ಧರಿಸಿದೆ.
ನವದೆಹಲಿ: ಕೇಂದ್ರ ಸರ್ಕಾರ, ರೈತರಿಗೆ ಬಂಪರ್ ಗಿಫ್ಟ್ ನೀಡಿದ್ದು, ಗೋಧಿ ಸೇರಿದಂತೆ ಪ್ರಮುಖ 6 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚು ಮಾಡಲು ನಿರ್ಧರಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ಹಂಗಾಮಿಗೆ ಮಾಡಲಾದ ಈ ಏರಿಕೆ ನಂತರ ಗೋಧಿಯ ಕನಿಷ್ಠ ಬೆಂಬಲ ಬೆಲೆಯನ್ನು 150 ರು. ಹೆಚ್ಚಿಸಿದೆ. ಈ ಮೂಲಕ ಗೋಧಿ ಕ್ವಿಂಟಾಲ್‌ಗೆ 2275 ರೂ.ನಿಂದ 2425 ರೂ.ಗೆ ಏರಿಕೆಯಾಗಿದೆ. ಇದರ ಜೊತೆಗೆ ಸಾಸಿವೆಗೆ 300ರು.ನಷ್ಟು ಕನಿಷ್ಟ ಬೆಂಬಲ ಬೆಲೆಹೆಚ್ಚಿಸಲಾಗಿದ್ದು, ಕ್ವಿಂಟಾಲ್‌ಗೆ 5950ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ಕುಸುಬೆ ದರವನ್ನು ಕ್ವಿಂಟಾಲ್‌ಗೆ 140 ರು. ಮಸೂರ್ ದಾಲ್ ಕ್ವಿಂಟಾಲ್‌ಗೆ 275, ಬಾರ್ಲಿ ದರ ಕ್ವಿಂಟಾಲ್‌ಗೆ 130 ರು., ಕಡಲೆ ದರ ಕ್ವಿಂಟಾಲ್‌ಗೆ 210 ರು.ನಷ್ಟು ಕನಿಷ್ಠ ಬೆಂಬಲ ಬೆಲೆ ಏರಿಕೆಯಾಗಿದೆ.
ಮಹಾರಾಷ್ಟ್ರ, ಜಾಖಂಡ್ ವಿಧಾನಸಭಾ ಚುನಾವಣೆಗಳು ಮತ್ತು ವಿವಿಧ ರಾಜ್ಯಗಳ 48 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ರೈತರಿಗೆ ಕೇಂದ್ರ ಈ ಸಿಹಿ ಸುದ್ದಿ ನೀಡಿದೆ.
ಉತ್ತರ ಪ್ರದೇಶದಲ್ಲಿ ಶುರುವಾಗಿದೆ ಭತ್ತದ ಖರೀದಿ; ಇಲ್ಲಿಯ MSP ದರ ಎಷ್ಟಿದೆ ?
ಧಾನ್ಯ | ಏರಿಕೆ | ಹೊಸ ದರ |
ಗೋಧಿ | ₹150 | ₹2425 |
ಸಾಸಿವೆ | ₹300 | ₹5950 |
ಕುಸುಬಿ | ₹140 | ₹5940 |
ಮಸೂರ್ ದಾಲ್ | ₹275 | ₹6700 |
ಬಾರ್ಲಿ | ₹130 | ₹1980 |
ಕಡಲೆ | ₹210 |
₹5650
|
ಗಣ್ಯರ ಭದ್ರತೆಯ ಹೊಣೆ ಎನ್ನೆಸ್ಸಿ ಬದಲು ಸಿಆರ್‌ಪಿಎಫ್ ಹೆಗಲಿಗೆ
ನವದೆಹಲಿ: ಹಾಲಿ ದೇಶವ್ಯಾಪಿ ಗಣ್ಯರಿಗೆ ಬಿಗಿ ಭದ್ರತೆ ಒದಗಿಸುತ್ತಿರುವ ಎನ್‌ಎಸ್‌ಜಿ ಕಮಾಂಡೋಗಳ ಸೇವೆಯನ್ನು ಮುಂದಿನ 2 ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹಿಂದಕ್ಕೆ ಪಡೆಯಲು ನಿರ್ಧರಿಸಲಾಗಿದೆ. ಜೊತೆಗೆ ಗಣ್ಯರಿಗೆ ಅಗತ್ಯ ಭದ್ರತೆ ವಹಿಸುವಂತೆ ಸಿಆರ್‌ಪಿಎಫ್‌ಗೆ ಸರ್ಕಾರ ಸೂಚಿಸಿದೆ. ಈ ಕ್ರಮದ ಮೂಲಕ ಮುಂದಿನ ದಿನಗಳಲ್ಲಿ ಎನ್‌ಎಸ್‌ಜಿ ಕಮಾಂಡೋಗಳನ್ನು ಉಗ್ರ ನಿಗ್ರಹಕ್ಕೆ ಮಾತ್ರವೇ ಬಳಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್, ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್, ಎನ್‌ಸಿ ಅಧ್ಯಕ್ಷ ಫಾರುಖ್ ಅಬ್ದುಲ್ಲಾ, ಡಿಪಿಎಪಿ ನಾಯಕ ಗುಲಾಂ ನಬೀ ಆಜಾದ್, ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ, ಛತ್ತೀಸ್‌ಗಢದ ಮಾಜಿ ಸಿಎಂ ರಮಣ್‌ಸಿಂಗ್, ಉತ್ತರಪ್ರದೇಶ ಸಿಎಂ ಯೋಗಿ, ಆಂಧ್ರ ಸಿಎಂ ನಾಯ್ಡುಗೆ ಎನ್‌ಎಸ್‌ಜಿ ಭದ್ರತೆ ನೀಡಲಾಗಿದೆ.
ಭತ್ತ ಖರೀದಿಸಿ 48 ಗಂಟೆಯಲ್ಲಿ ಹಣ ಪಾವತಿ, ಯುಪಿಯಲ್ಲಿ 4,000 ಕೇಂದ್ರ ಸ್ಥಾಪಿಸಿದ ಸಿಎಂ ಯೋಗಿ!
ಏಕನಾಥ ಶಿಂಧೆ ಮಹಾಯುತಿ ಸಿಎಂ ಅಭ್ಯರ್ಥಿ: ಬಿಜೆಪಿ ಸುಳಿವು
ಮುಂಬೈ: ಬಿಜೆಪಿ-ಶಿವಸೇನೆ (ಶಿಂಧೆ ಬಣ)- ಎನ್‌ಸಿಪಿ (ಅಜಿತ್ ಪವಾರ್) ಬಣಗಳನ್ನು ಒಳಗೊಂಡ ಮಹಾರಾಷ್ಟ್ರದ ಮಹಾಯುತಿ ಒಕ್ಕೂಟದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಸಿಎಂ ಏಕನಾಥ ಶಿಂಧೆ ಅವರೇ ಬಿಂಬಿತವಾಗುವ ಸಾಧ್ಯತೆ ಇದೆ. ಮಹಾ ವಿಕಾಸ್ ಅಘಾಡಿ ತನ್ನ ಸಿಎಂ ಅಭ್ಯರ್ಥಿ ಯಾರೆಂದು ಬಿಂಬಿಸಬೇಕು. ಚುನಾವಣೆ ಬಳಿಕ ಅವರಿಂದ ಯಾರೂ ಸಿಎಂ ಆಗದ ಕಾರಣ ಅಭ್ಯರ್ಥಿಯನ್ನು ಬಿಂಬಿಸುತ್ತಿಲ್ಲ. ಆದರೆ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಇಲ್ಲೇ ಕುಳಿತಿದ್ದಾರೆ ಎಂದು ಕಾರ್ಯಕ್ರಮವೊಂದರಲ್ಲಿ ಏಕನಾಥ ಶಿಂಧೆ ಅವರತ್ತ ಫಡ್ನವೀಸ್ ಬೊಟ್ಟುಮಾಡಿದ್ದಾರೆ. ಶಿಂಧೆ ಅವರನ್ನೇ ಮುಖ್ಯ ಮಂತ್ರಿ ಎಂದು ಬಿಂಬಿಸಿ ಹೆಚ್ಚು ಸೀಟುಗಳಲ್ಲಿ ಸ್ಪರ್ಧೆ ಮಾಡುವ ಒಲವು ಬಿಜೆಪಿಯಲ್ಲಿ ಇದ್ದಂತಿದೆ. ಇದಕ್ಕೆ ಇಂಬು ನೀಡುವಂತೆ ಹೊಂದಾಣಿಕೆಗೆ ಸಂಬಂಧಿಸಿದಂತೆ ಶಿಂಧೆ ತ್ಯಾಗ ಮಾಡಲು ಸಿದ್ಧರಿರಬೇಕು ಎಂದು ಬಿಜೆಪಿ ಅಧ್ಯಕ್ಷ ಚಂದ್ರಶೇಖರ್ ಬಾವನ್‌ಕುಲೆ ಹೇಳಿದ್ದಾರೆ.