ಈ ಕಾರ್ಯಚರಣೆ ವೇಳೆ ಸ್ಥಳೀಯ ARZ ಎನ್‌ಜಿಒ ಸಂಸ್ಥೆ ಭಾಗಿಯಾಗಿತ್ತು. ಉಗಾಂಡದ ದಲ್ಲಾಳಿಯೊಬ್ಬ ಮಹಿಳೆಯರಿಗೆ ಸರ್ವಿಸ್ ಸೆಕ್ಟರ್‌ನಲ್ಲಿ ಕೆಲಸ ಕೊಡಿಸೋದಾಗಿ ಆಮಿಷವೊಡ್ಡಿ ತಮ್ಮ ದೇಶದಿಂದ ಮಹಿಳೆಯರು ಮತ್ತು ಯುವತಿಯರನ್ನು ಗೋವಾಗೆ ಕರೆದುಕೊಂಡು ಬರುತ್ತಿದ್ದನು.
ಪಣಜಿ: ಗೋವಾ ಪೊಲೀಸರು (Goa Police) ಶನಿವಾರ ರಾತ್ರಿ ಇಂಟರ್‌ನ್ಯಾಷನಲ್ ಸೆಕ್ಸ್ ರಾಕೆಟ್ (International Sex racket) ಜಾಲವನ್ನು ಬೇಧಿಸಿದ್ದಾರೆ. ಇಲ್ಲಿ ಆಫ್ರಿಕಾದಿಂದ ಮಹಿಳೆಯರನ್ನು (African) ಕರೆತಂದು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ದಾಳಿ ವೇಳೆ ಪೊಲೀಸರು ಉಗಾಂಡ ಮೂಲದ ಇಬ್ಬರು ಮಹಿಳೆಯರು ವಶಕ್ಕೆ ಪಡೆದುಕೊಂಡಿದ್ದು, ಓರ್ವ ವಿದೇಶಿ ಬೋಕರ್‌ನನ್ನು ಬಂಧಿಸಿದ್ದಾರೆ. 31 ವರ್ಷದ ಉಗಾಂಡಾದ ಜೊಜೊ ಎನ್ಕಿಂಟು ವಿದೇಶಿ ಬ್ರೋಕರ್ (Foreign Agent). ತಮ್ಮ ದೇಶದ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತಿದೆ ಎಂದು ಉಗಾಂಡ ಮಹಿಳೆಯೊಬ್ಬರು ರಾಯಭಾರಿ ಕಚೇರಿಗೆ ದೂರು ಸಲ್ಲಿಸಿದ್ದರು. ಮಹಿಳೆ ನೀಡಿದ ದೂರಿನ ಅನ್ವಯ ಮಾಂಡ್ರೆಮ್ ಪೊಲೀಸರು ದಾಳಿ ನಡೆಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಅಕ್ಷತ್ ಕೌಶಲ್ ಮಾಹಿತಿ ನೀಡಿದ್ದಾರೆ.
ಈ ಕಾರ್ಯಚರಣೆ ವೇಳೆ ಸ್ಥಳೀಯ ARZ ಎನ್‌ಜಿಒ ಸಂಸ್ಥೆ ಭಾಗಿಯಾಗಿತ್ತು. ಉಗಾಂಡದ ದಲ್ಲಾಳಿಯೊಬ್ಬ ಮಹಿಳೆಯರಿಗೆ ಸರ್ವಿಸ್ ಸೆಕ್ಟರ್‌ನಲ್ಲಿ ಕೆಲಸ ಕೊಡಿಸೋದಾಗಿ ಆಮಿಷವೊಡ್ಡಿ ತಮ್ಮ ದೇಶದಿಂದ ಮಹಿಳೆಯರು ಮತ್ತು ಯುವತಿಯರನ್ನು ಗೋವಾಗೆ ಕರೆದುಕೊಂಡು ಬರುತ್ತಿದ್ದನು. ಗೋವಾಗೆ ಬರುತ್ತಿದ್ದಂತೆ ಅವರ ಪಾಸ್‌ಪೋರ್ಟ್, ವೀಸಾ ತಮ್ಮ ವಶಕ್ಕೆ ಪಡೆದು ಬಲವಂತವಾಗಿ ವೇಶ್ಯಾವಾಟಿಕೆ ತಳ್ಳುತ್ತಿದ್ದನು.
undefined
ಆಟೋ ಚಾಲಕನ ಮಗಳು ಗೀತಾ ಸೆಕ್ಸ್ ರಾಕೆಟ್ ನಡೆಸುವ ಕ್ವೀನ್ ಆಗಿದ್ದು ಹೇಗೆ?
ಕೊಲೆ ಬೆದರಿಕೆ ಹಾಕಿ ವೇಶ್ಯಾವಾಟಿಕೆಗೆ
ವೇಶ್ಯಾವಾಟಿಕೆಗೆ ಒಪ್ಪದಿದ್ದರೆ ಮಹಿಳೆರಿಗೆ ಕೊಲೆ ಬೆದರಿಕೆ ಹಾಕುತ್ತಿದ್ದರು. ದಲ್ಲಾಳಿ ಗ್ರಾಹಕರನ್ನು ಆನ್‌ಲೈನ್ ಗಳ ಮೂಲಕ ಸೆಳೆಯಲಾಗುತ್ತಿತ್ತು. ಬೀಚ್‌ಗಳಲ್ಲಿ ಮಹಿಳೆಯರನ್ನು ನಿಲ್ಲಿಸಿ ಅವರ ಮೂಲಕವೂ ಗ್ರಾಹರನ್ನು ಸೆಳೆಯಲಾಗುತ್ತಿತ್ತು. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ ಮತ್ತು ಅನೈತಿಕ ಸಂಚಾರ (ತಡೆಗಟ್ಟುವಿಕೆ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಗೋವಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಾಳಿ ವೇಳೆ ರಕ್ಷಣೆ ಮಾಡಿರುವ ಮಹಿಳೆಯರನ್ನು ಉಗಾಂಡಕ್ಕೆ ಕಳುಹಿಸಲಾಗುತ್ತೆ ಎಂದು ವರದಿಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ದಂಧೆಯಲ್ಲಿ ಭಾಗಿಯಾಗಿದ್ದ ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
2023ರಲ್ಲಿ ಕೀನ್ಯಾ ಮೂಲದ ಯುವತಿಯರ ರಕ್ಷಣೆ
2023ರಲ್ಲಿಯೂ ಗೋವಾ ಪೊಲೀಸರು ಅಂತರಾಷ್ಟ್ರೀಯಮಟ್ಟದ ಸೆಕ್ಸ್ ದಂಧೆಯನ್ನು ಭೇದಿಸಿದ್ದರು. ಸ್ಥಳೀಯ ಎನ್‌ಜಿಓ ಸಂಸ್ಥೆಯೊಂದರ ಮಾಹಿತಿ ಮೇರೆಗೆ ದಾಳಿ ನಡೆಸಿದ್ದ ಪೊಲೀಸರು ಕೀನ್ಯಾ ಮೂಲದ ಯುವತಿಯರನ್ನು ರಕ್ಷಣೆ ಮಾಡಿದ್ದರು. ಮಸಾಜ್ ಪಾರ್ಲರ್, ಹೋಟೆಲ್‌ಗಳಲ್ಲಿ ಕೆಲಸ ಕೊಡಿಸೋದಾಗಿ ಆಮಿಷ ನೀಡಿ ವಿದೇಶದಿಂದ ಯುವತಿಯರನ್ನು ಗೋವಾಗೆ ಕರೆದುಕೊಂಡು ಬರಲಾಗುತ್ತಿತ್ತು. ಗೋವಾಕ್ಕೆ ಬರುತ್ತಿದ್ದಂತೆ ಅವರಿಂದ ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡು ವೇಶ್ಯಾವಾಟಿಕೆ ವ್ಯವಹಾರಕ್ಕೆ ದೂಡಲಾಗುತ್ತಿತ್ತು.
ಸೆಕ್ಸ್ ರಾಕೆಟ್‌ನಲ್ಲಿ ಸಿಕ್ಕಾಕೊಂಡ ಯುವತಿಯಿಂದ ಶಾಕಿಂಗ್ ಮಾಹಿತಿ ಬಹಿರಂಗ, ಪ್ರಮುಖ ಬಿಜೆಪಿ ನಾಯಕ ಅರೆಸ್ಟ್!
ಕೆಲ ಯುವತಿಯರು ಗೋವಾದಿಂದ ಬೆಂಗಳೂರಿಗೆ ಶಿಫ್ಟ್!
ರಕ್ಷಣೆಗೊಳಗಾಗಿದ್ದ ಕೀನ್ಯಾದ ಇಬ್ಬರು ಮಹಿಳೆಯರು ತಾವು ಏಜೆಂಟ್ ಮೂಲಕ ಗೋವಾಕ್ಕೆ ಬಂದಿರೋದಾಗಿ ಹೇಳಿಕೊಂಡಿದ್ದರು. ಇಲ್ಲಿಗೆ ಬಂದ ನಂತರ ಪಾಸ್‌ಪೋರ್ಟ್ ಮತ್ತು ವೀಸಾ ಪಡೆದು ದಂಧಗೆ ತಳ್ಳಲಾಗಿತ್ತು ಎಂದು ಅಂದಿನ ಎಸ್‌ಪಿ ನಿಧಿನ್ ವಲ್ಸನ್ ಪ್ರಕರಣದ ಕುರಿತು ಮಾಹಿತಿ ನೀಡಿದ್ದರು. ಕೆಲವು ಯುವತಿಯರನ್ನು ಗೋವಾದಿಂದ ಬೆಂಗಳೂರಿಗೆ ರವಾನೆ ಮಾಡಲಾಗಿದೆ ಎಂದು ಎನ್‌ಜಿಓ ವರದಿ ಮಾಡಿತ್ತು. ಈ ವರದಿ ಬಳಿಕ ಎಸ್‌ಡಿಪಿಒ ಜೀವಬ ದಳವಿ, ಅಂಜುನಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಶಾಲ್ ದೇಸಾಯಿ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಕೀನ್ಯಾ ಯುವತಿಯರನ್ನ ರಕ್ಷಣೆ ಮಾಡಲಾಗಿತ್ತು.