The Kerala Story ಮೀರಿಸುವಂತಿದೆ ಪಂಜಾಬ್‌ ಸ್ಟೋರಿ: ಮಹಿಳೆಯರ ಮಾರಾಟ, ಅನೈತಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಹಿಂಸೆ

By BK AshwinFirst Published May 22, 2023, 12:51 PM IST
Highlights

ಭಾರತದಲ್ಲಿ ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯಕ್ಕೆಂದು ಪಂಜಾಬ್‌ನ ಕಪುರ್ತಲಾ ಮೂಲದ ಮಹಿಳೆಯೊಬ್ಬರು ಒಮಾನ್‌ಗೆ ತೆರಳಿದ್ದು, ಅಲ್ಲಿ ಭಯಾನಕ ಅನುಭವ ಹೊಂದಿದ್ದಾರೆ.

ನವದೆಹಲಿ (ಮೇ 22, 2023): ಇತ್ತೀಚೆಗೆ ಬಿಡುಗಡೆಯಾದ ದಿ ಕೆರಳ ಸ್ಟೋರಿ ಚಿತ್ರ ಅನೇಕ ಜನರ ಕಣ್ತೆರೆಸುವಂತಿದೆ. ನಿಜ ಜೀವನದಲ್ಲೂ ಇಂತಹ ಘಟನೆ ನಡೆದಿದ್ದು, ಇದನ್ನು ಆಧರಿಸಿಯೇ ಚಿತ್ರ ಮಾಡಲಾಗಿದೆ ಎಂದು ನಿರ್ದೇಕ ಹಾಗೂ ನಿರ್ಮಾಪಕರು ಹೇಳಿದ್ದಾರೆ. ಅದೇ ರೀತಿ, ಈಗ ಪಂಜಾಬ್‌ ಸ್ಟೋರಿಯನ್ನು ನೋಡಿ. ಆದರೆ, ಇದು ಸಿನಿಮಾ ಅಲ್ಲ. ಮಹಿಳೆಯ ಕಣ್ಣೀರಿನ ಕತೆ. 

ವಿದೇಶಕ್ಕೆ ಹೋಗಿ ಹಣ ಮಾಡ್ಬೇಕು ಅನ್ನೋದು ಹಲವರ ಆಸೆಯಾಗಿರುತ್ತದೆ. ಇದೇ ರೀತಿ, ಭಾರತದಲ್ಲಿ ತನ್ನ ಕುಟುಂಬಕ್ಕೆ ಉತ್ತಮ ಭವಿಷ್ಯಕ್ಕೆಂದು ಪಂಜಾಬ್‌ನ ಕಪುರ್ತಲಾ ಮೂಲದ ಮಹಿಳೆಯೊಬ್ಬರು ಒಮಾನ್‌ಗೆ ತೆರಳಿದ್ದು, ಅಲ್ಲಿ ಭಯಾನಕ ಅನುಭವ ಹೊಂದಿದ್ದಾರೆ. ಸಹಾಯಕ್ಕೆ ಯಾರೂ ಸಿಗದೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಸಿಲುಕಿದ್ದಳು. ಅದರೂ, ಅದೃಷ್ಟವಶಾತ್‌ ಅಲ್ಲಿಂದ ಬಚಾವಾಗಿ ಭಾರತಕ್ಕೆ ಬಂದಿದ್ದಾಳೆ. ರಾಜ್ಯಸಭಾ ಸದಸ್ಯ ಸಂತ ಬಲ್ಬೀರ್ ಸಿಂಗ್ ಸೀಚೆವಾಲ್ ಅವರು ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದ್ದು, ಅವರ ಸಹಾಯದಿಂದ ಸುರಕ್ಷಿತವಾಗಿ ಮರಳಿದ್ದಾಳೆ. 

ಇದನ್ನು ಓದಿ: ಹಣೆ ಮೇಲೆ ಗಂಡನ ಹೆಸರನ್ನು ಹಚ್ಚೆ ಹಾಕಿಸಿಕೊಂಡ ಬೆಂಗಳೂರು ಮಹಿಳೆ: ಇದ್ಯಾವ ಸೀಮೆ ಪ್ರೀತಿ ಎಂದ ನೆಟ್ಟಿಗರು!

ಆದರೆ, ಅನೇಕ ಪಂಜಾಬ್‌ನ ಮಹಿಳೆಯರು ನನ್ನಷ್ಟು ಅದೃಷ್ಟಶಾಲಿಯಲ್ಲ. ಇದೇ ರೀತಿ, ಅನೇಕರು ಆ ದೇಶದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಆ ಮಹಿಳೆ ಹೇಳಿಕೊಂಡಿದ್ದಾರೆ. ಪಂಜಾಬ್ ಮಹಿಳೆಯರನ್ನು ಗೃಹ ಸೇವಕಿ’ ಅಥವಾ ‘ಕೇರ್ ಟೇಕರ್’ ಕೆಲಸಕ್ಕಾಗಿ ಅಲ್ಲಿನ ಸ್ಥಳೀಯರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಆಕೆ ಹೇಳಿದ್ದಾರೆ. ಪಂಜಾಬ್‌ನ ಇತರ 35 ಅವಿವಾಹಿತ/ವಿವಾಹಿತ ಮಹಿಳೆಯರನ್ನು ಭಾರತದ ಟ್ರಾವೆಲ್ ಏಜೆಂಟ್‌ಗಳ ವಂಚನೆಗಳಿಂದ ಈಗ ಗಲ್ಫ್ ದೇಶದಲ್ಲಿ ಸಿಕ್ಕಿಬಿದ್ದಿದ್ದಾರೆ. ಅವರು ಉಳಿವಿಗಾಗಿ ಅನೈತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಬಲವಂತಪಡಿಸಲಾಗಿದೆ ಎಂದೂ ಆಕೆ ತಿಳಿಸಿದ್ದಾರೆ. ಇದೇ ರೀತಿ, ಇನ್ನೂ ಹೆಚ್ಚಿನ ಮಹಿಳೆಯರಿದ್ದಾರೆ ಅನ್ನೋದು ಆಕೆಯ ಆರೋಪ.
 
ಈ ಎಲ್ಲಾ ದುರ್ಬಲ ಮಹಿಳೆಯರನ್ನು ಅಲ್ಲಿಗೆ ಕಳಿಸಿದ ನಂತರ ಥಳಿಸಿ ಬೆದರಿಕೆ ಹಾಕಲಾಗುತ್ತದೆ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಒತ್ತಾಯಿಸಲಾಗುತ್ತದೆ.. ಮತ್ತು ವಿರೋಧಿಸುವವರಿಗೆ ದಿನಗಟ್ಟಲೆ ಹಸಿವಿನಿಂದ ಇಡುತ್ತಾರೆ ಎಂದೂ ಆಕೆ ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಇದೆಂತ ಕಾಲ ಬಂತಪ್ಪಾ? ಜನ ಸಾಮಾನ್ಯರು ಬಳಸೋ ಹಗ್ಗದ ಮಂಚಕ್ಕೂ ಇಷ್ಟೊಂದು ಬೆಲೆ!
ತನ್ನ ಪತಿಯ ಸಮ್ಮುಖದಲ್ಲಿ ತನ್ನ ಕಷ್ಟವನ್ನು ವಿವರಿಸಿದ ಆಕೆ ತನ್ನ ತಾಯಿಯ ಚಿಕ್ಕಮ್ಮ ಈ ವರ್ಷ ಮಾರ್ಚ್ 16 ರಂದು ಸುಳ್ಳು ಉದ್ಯೋಗದ ನೆಪದಲ್ಲಿ ಮಸ್ಕತ್‌ಗೆ ಕಳುಹಿಸಿದ್ದಳು ಎಂದು ಆಕೆ ತನ್ನ ನೋವು ತೋಡಿಕೊಂಡಿದ್ದಾರೆ. ಒಮಾನ್‌ ಆಸ್ಪತ್ರೆಯಲ್ಲಿ 'ಕೇರ್ ಟೇಕರ್' ಆಗಿ ಕೆಲಸ ಮಾಡಿ ಉತ್ತಮ ಹಣ ಗಳಿಸಬಹುದೆಂದು ಹೇಳಿದರು. ಅಶಿಕ್ಷಿತಳಾಗಿರೋ ಈಕೆಯನ್ನು ಪ್ರವಾಸಿ ವೀಸಾದಲ್ಲಿ ಅಲ್ಲಿಗೆ (ಗಲ್ಫ್) ಕಳುಹಿಸಲಾಗಿತ್ತು. ಆಕೆಯ ಚಿಕ್ಕಮ್ಮ 70,000 ರೂ.ಗಳನ್ನು ವಸೂಲಿ ಮಾಡಿದ್ದು, ನಂತರ ಮಸ್ಕತ್‌ನಲ್ಲಿರುವ ಇತರ ಏಜೆಂಟ್‌ಗಳೊಂದಿಗೆ ಸೇರಿ ಅಲ್ಲಿನ ಕೆಲವು ಸ್ಥಳೀಯರಿಗೆ 1.50 ಲಕ್ಷ ರೂ.ಗೆ ಮಾರಾಟ ಮಾಡಿದ್ದಾರೆ ಎಂದು ನೊಂದ ಮಹಿಳೆ ಹೇಳಿದ್ದಾರೆ. 

“ಮಾರ್ಚ್ 16 ರಂದು ನಾನು ಅಲ್ಲಿಗೆ ಬಂದಿಳಿದಾಗ, ಅಲ್ಲಿನ ಏಜೆಂಟ್‌ಗಳು ನನ್ನ ಪಾಸ್‌ಪೋರ್ಟ್ ಮತ್ತು ಫೋನ್ ಕಿತ್ತುಕೊಂಡರು ಮತ್ತು ನನ್ನನ್ನು ಒಂದು ಕೋಣೆಯಲ್ಲಿ ಲಾಕ್ ಮಾಡಲಾಯಿತು. ನನಗೆ ಊಟ ಕೊಡಲಿಲ್ಲ. ನಂತರ ಪಂಜಾಬ್‌ನ ಇತರ 35 ಮಹಿಳೆಯರನ್ನೂ ಅಲ್ಲಿ ಲಾಕ್ ಮಾಡಲಾಗಿದೆ ಎಂದು ನಾನು ಕಂಡುಕೊಂಡೆ. ನಾನು ಅವರೊಂದಿಗೆ ಸಹಿಸಿಕೊಂಡಿದ್ದೆ. ಕೇರ್ ಟೇಕರ್ ಕೆಲಸಕ್ಕಾಗಿ ನನ್ನನ್ನು ಆಸ್ಪತ್ರೆಗೆ ಕಳುಹಿಸುವಂತೆ ನಾನು ಏಜೆಂಟರನ್ನು ಕೇಳಿದಾಗ, ಅವರು ನನ್ನನ್ನು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಒತ್ತಾಯಿಸಲು ಪ್ರಾರಂಭಿಸಿದರು ಮತ್ತು ನಾನು ಅದನ್ನು ವಿರೋಧಿಸಿದೆ ಮತ್ತು ಸಂಪೂರ್ಣವಾಗಿ ನಿರಾಕರಿಸಿದೆ. ಈ ಹಿನ್ನೆಲೆ ಅವರು ನನ್ನನ್ನು ನಿರ್ದಯವಾಗಿ ಥಳಿಸಿದರು ಎಂದು ಆಕೆ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: 3ನೇ ಮಗುವಿಗೆ ಜನ್ಮ ನೀಡಿದ ಮಾರ್ಕ್‌ ಜುಕರ್‌ಬರ್ಗ್‌ ಪತ್ನಿ: ತುಂಬಾ ಕಷ್ಟಪಡ್ತಿದ್ದೀರಾ ಎಂದು ಕಾಲೆಳೆದ ನೆಟ್ಟಿಗರು

ಅಲ್ಲದೆ, ತನ್ನ ಚಿಕ್ಕಮ್ಮನಿಗೆ ಒಮ್ಮೆ ಕರೆ ಮಾಡಿ ಕೇಳಿದಾಗ, ಅಲ್ಲಿನ ಏಜೆಂಟರು ನಿನ್ನನ್ನು ಏನು ಕೇಳಿದರೂ ಮಾಡು ಎಂದು ಹೇಳಿದರು. ನನ್ನಂತೆ ಪಂಜಾಬ್‌ನ ಇನ್ನೂ 35 ಮಹಿಳೆಯರು ಒಂದೇ ದೋಣಿಯಲ್ಲಿ ಪ್ರಯಾಣಿಸುತ್ತಿದ್ದಾರೆ. ಮಸ್ಕತ್‌ನಲ್ಲಿ ಸಿಕ್ಕಿಬಿದ್ದಿರುವ ಈ ಮಹಿಳೆಯರಿಗೆ ಅವರು ಸಾಯದಂತೆ ದಿನಕ್ಕೆ ಒಂದು ಸಣ್ಣ ಊಟವನ್ನು ನೀಡಲಾಗುತ್ತದೆ ಎಂದೂ ಹೇಳಿದರು. ಇನ್ನು, ಪಂಜಾಬ್ ಸರ್ಕಾರ ರಾಜ್ಯದಲ್ಲಿ ಇಂತಹ ವಂಚನೆಗಳ ವಿರುದ್ಧ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಬೇಕು ಎಂದೂ ಆಕೆ ಮನವಿ ಮಾಡಿಕೊಂಡಿದ್ದಾರೆ. 
 
ತನ್ನ ಐದು ವರ್ಷದ ಮಗಳ ಭವಿಷ್ಯವನ್ನು ಕಾಪಾಡಲು ಮಸ್ಕತ್‌ಗೆ ಹೋಗಿರುವುದಾಗಿ ಆಕೆ ಹೇಳಿದ್ದಾರೆ. “ನಾವು ಕಪುರ್ತಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ನನ್ನ ಪತಿ ಟ್ಯಾಕ್ಸಿ ಡ್ರೈವರ್ ಆಗಿದ್ದು, ನಮಗೆ ಜೀವನ ಸಾಗಿಸುವುದು ಕಷ್ಟವಾಗಿತ್ತು.’’ ಈ ಹಿನ್ನೆಲೆ ಹಣ ಸಿಗುವ ಉದ್ದೇಶದಿಂದ ಅಲ್ಲಿಗೆ ಹೋದೆ’’ ಎಂದೂ ತನ್ನ ಕುಟುಂಬದ ಕಷ್ಟವನ್ನು ಹೇಳಿಕೊಂಡಿದ್ದಾರೆ. 

ಇದನ್ನೂ ಓದಿ: ಭೂಮಿ ನಡುಗುತ್ತಿದ್ದರೂ ನ್ಯೂಸ್ ಓದುವುದು ನಿಲ್ಲಿಸದ ಪಾಕ್ ಟಿವಿ ಆ್ಯಂಕರ್!

click me!