Latest Videos

ದಿಲ್ಲಿ-ಬೆಂಗಳೂರು ವಿಮಾನದಲ್ಲಿ ಬೆಂಕಿ: ತುರ್ತು ಭೂಸ್ಪರ್ಶ

By Kannadaprabha NewsFirst Published May 18, 2024, 11:35 AM IST
Highlights

ಏರಿಂಡಿಯಾದ ಎಐ807 ವಿಮಾನದಲ್ಲಿ ಈ ಅವಘಢ ಸಂಭವಿಸಿದ್ದು, 175 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ದುರಂತವೊಂದು ತಪ್ಪಿದಂತಾಗಿದೆ. ಶುಕ್ರವಾರ ಸಂಜೆ 6 ಗಂಟೆಗೆ ಟೇಕಾಫ್ ಆಗಿದ್ದ ವಿಮಾನ 6.40ರ ಹೊತ್ತಿಗೆ ದೆಹಲಿಯಲ್ಲಿ ಲ್ಯಾಂಡ್ ಮಾಡಲಾಯಿತು. 

ನವದೆಹಲಿ(ಮೇ.18): ದೆಹಲಿಯಿಂದ ಬೆಂಗಳೂರಿಗೆ ಹೊರಟಿದ್ದ ಏರ್‌ಇಂಡಿಯಾ ವಿಮಾನದ ಹವಾ ನಿಯಂತ್ರಣ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್ ಆಗಿದೆ.

ಏರಿಂಡಿಯಾದ ಎಐ807 ವಿಮಾನದಲ್ಲಿ ಈ ಅವಘಢ ಸಂಭವಿಸಿದ್ದು, 175 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದ್ದು, ದುರಂತವೊಂದು ತಪ್ಪಿದಂತಾಗಿದೆ. ಶುಕ್ರವಾರ ಸಂಜೆ 6 ಗಂಟೆಗೆ ಟೇಕಾಫ್ ಆಗಿದ್ದ ವಿಮಾನ 6.40ರ ಹೊತ್ತಿಗೆ ದೆಹಲಿಯಲ್ಲಿ ಲ್ಯಾಂಡ್ ಮಾಡಲಾಯಿತು ಎಂದು ಮೂಲಗಳು ಹೇಳಿವೆ. ಬಳಿಕ ಪ್ರಯಾಣಿಕರಿಗೆ ಬೆಂಗಳೂರಿಗೆ ತೆರಳಲು ಬೇರೆ ವ್ಯವಸ್ಥೆ ಮಾಡಲಾಯಿತು ಎಂದು ಏರ್‌ ಇಂಡಿಯಾ ಹೇಳಿದೆ.

ವಿಮಾನದ ಕಿಟಿಕಿ ಚಿಕ್ಕದಾಗಿ ಮತ್ತು ರೌಂಡ್ ಶೇಪ್‌ನಲ್ಲಿ ಮಾತ್ರ ಇರೋದು ಯಾಕೆ?

ಪುಣೆ ಏರ್‌ಪೋರ್ಟಲ್ಲಿ ಟ್ರಾಕ್ಟರ್‌ಗೆ ಏರ್‌ ಇಂಡಿಯಾ ವಿಮಾನ ಡಿಕ್ಕಿ

ಪುಣೆ ವಿಮಾನ ನಿಲ್ದಾಣದಿಂದ ದೆಹಲಿ ಕಡೆಗೆ ಹಾರಬೇಕಿದ್ದ ಏರ್‌ಇಂಡಿಯಾ ವಿಮಾನವು ಲಗೇಜ್‌ ತೆಗೆದುಕೊಂಡು ಹೋಗುವ ಟ್ರಾಕ್ಟರ್‌ ಟ್ರಾಲಿಗೆ ಡಿಕ್ಕಿ ಹೊಡೆದ ಪರಿಣಾಮ ವಿಮಾನದ ಟೇಕಾಫ್‌ಅನ್ನು ಸ್ಥಗಿತಗೊಳಿಸಲಾಗಿದೆ.
ಈ ಡಿಕ್ಕಿಗೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆದೇಶಿಸಿದ್ದು, ಈ ಘಟನೆಯಿಂದ 200 ಪ್ರಯಾಣಿಕರು 6 ಗಂಟೆಗಳ ಕಾಲ ವಿಮಾನನಿಲ್ದಾಣದಲ್ಲೇ ಕಾಯಬೇಕಾಯಿತು. ಆದ್ದರಿಂದ ಪ್ರಯಾಣಿಕರ ಟಿಕೆಟ್‌ ದರವನ್ನು ಮರು ಪಾವತಿ ಮಾಡಿ, ಅವರಿಗೆ ಪೂರಕವಾಗಿ ಬೇರೆ ವ್ಯವಸ್ಥೆ ಮಾಡಲಾಯಿತು ಎಂದು ಏರ್‌ಇಂಡಿಯಾ ತಿಳಿಸಿದೆ.

click me!