* ದೇಶಾದ್ಯಂತ ಕೊರೋನಾ ಲಸಿಕೆಯ ಅಭಾವ ಉದ್ಭವ
* ಆಗಸ್ಟ್ ವೇಳೆಗೆ ಮಾಸಿಕ 18 ಕೋಟಿ ಡೋಸ್ ಉತ್ಪಾದನೆಯ ಭರವಸೆ
* ಕೇಂದ್ರ ಸರ್ಕಾರಕ್ಕೆ ಸೀರಂ, ಭಾರತ್ ಬಯೋಟೆಕ್ ಭರವಸೆ
ನವದೆಹಲಿ(ಮೇ.13): ದೇಶಾದ್ಯಂತ ಕೊರೋನಾ ಲಸಿಕೆಯ ಅಭಾವ ಉದ್ಭವವಾಗಿರುವ ಬೆನ್ನಲ್ಲೇ, ಆಗಸ್ಟ್ ತಿಂಗಳ ವೇಳೆಗೆ ಮಾಸಿಕ 18 ಕೋಟಿ ಲಸಿಕೆಯ ಡೋಸ್‌ಗಳನ್ನು ಉತ್ಪಾದಿಸಿ ನೀಡುವುದಾಗಿ ಕೇಂದ್ರ ಸರ್ಕಾರಕ್ಕೆ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್ ಮತ್ತು ಹೈದ್ರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಗಳು ಭರವಸೆ ನೀಡಿವೆ ಎಂದು ಮೂಲಗಳು ತಿಳಿಸಿವೆ.
ಸೀರಂ ಮತ್ತು ಭಾರತ್ ಬಯೋಟೆಕ್‌ಗೆ ಜೂನ್, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಲಸಿಕೆ ಉತ್ಪಾದನೆಯ ಯೋಜನೆಯನ್ನು ತಿಳಿಸುವಂತೆ ಕೇಂದ್ರ ಆರೋಗ್ಯ ಇಲಾಖೆ ಮತ್ತು ಭಾರತೀಯ ಔಷಧ ನಿಯಂತ್ರಣ ಸಂಸ್ಥೆ ಸೂಚನೆ ನೀಡಿದ್ದವು. ಇದಕ್ಕೆ ಉತ್ತರಿಸಿರುವ ಸೀರಂ ಸಂಸ್ಥೆ ಆಗಸ್ಟ್ ತಿಂಗಳೊಳಗಾಗಿ 10 ಕೋಟಿ ಡೋಸ್ ಉತ್ಪಾದಿಸುವುದಾಗಿ ತಿಳಿಸಿದೆ.
undefined
ಇನ್ನು ಭಾರತ್ ಬಯೋಟೆಕ್ ಸಂಸ್ಥೆ ಜುಲೈನಲ್ಲಿ ಲಸಿಕೆ ಉತ್ಪಾದನೆ ಸಾಮರ್ಥ್ಯವನ್ನು 3.32 ಕೋಟಿ ಡೋಸ್‌ಗೆ ಹೆಚ್ಚಿಸಲಾಗುತ್ತದೆ. ಬಳಿಕ ಆಗಸ್ಟ್ ಒಳಗೆ ಮಾಸಿಕ 7.8 ಕೋಟಿ ಡೋಸ್‌ಗಳನ್ನು ಉತ್ಪಾದಿಸುವುದಾಗಿ ತಿಳಿಸಿವೆ.
ಅಲ್ಲದೆ ಸೆಪ್ಟೆಂಬರ್ ತಿಂಗಳಲ್ಲೂ ಇಷ್ಟೇ ಪ್ರಮಾಣದ ಡೋಸ್‌ಗಳನ್ನು ಉತ್ಪಾದಿಸುವುದಾಗಿ ಕೇಂದ್ರ ಸರ್ಕಾರಕ್ಕೆ ತಿಳಿಸಿವೆ ಎಂದು ಮೂಲಗಳು ತಿಳಿಸಿವೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona