ಕೊವೊವ್ಯಾಕ್ಸ್ ಮೊದಲ ಬ್ಯಾಚ್ ಉತ್ಪಾದನೆ ಆರಂಭಿಸಿದ ಸೀರಂ..!

By Suvarna NewsFirst Published Jun 26, 2021, 10:10 AM IST
Highlights
  • ಕೊವೊವ್ಯಾಕ್ಸ್ ಮೊದಲ ಬ್ಯಾಚ್ ಉತ್ಪಾದನೆ ಆರಂಭಿಸಿದ ಸೀರಂ
  • 18 ವರ್ಷಕ್ಕಿಂತ ಕೆಳಗಿನವರಿಗೆ ಈ ಲಸಿಕೆ ಎಫೆಕ್ಟಿವ್

ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೊವೊವ್ಯಾಕ್ಸ್‌ನ ಕೋವಿಡ್ -19 ಲಸಿಕೆಯ ಮೊದಲ ಬ್ಯಾಚ್‌ನ ಉತ್ಪಾದನೆಯನ್ನು ಪ್ರಾರಂಭಿಸಿದೆ ಎಂದು ಘೋಷಿಸಿದೆ. ಇದನ್ನು ಸ್ಥಳೀಯವಾಗಿ ಕೊವೊವ್ಯಾಕ್ಸ್‌ ಬ್ರಾಂಡ್ ಹೆಸರಿನಲ್ಲಿ ತಯಾರಿಸಲಾಗುವುದು, ಇದನ್ನು ಹೊಸ ಮೈಲಿಗಲ್ಲು ಎಂದು ಸೀರಂ ಹೇಳಿದೆ

ಈ ವಾರ ಪುಣೆಯಲ್ಲಿ ತಯಾರಾಗುತ್ತಿರುವ ಮೊದಲ ಬ್ಯಾಚ್‌ನ ಕೊವೊವ್ಯಾಕ್ಸ್‌ ಪ್ರೊಡಕ್ಷನ್‌ಗೆ ಸಾಕ್ಷಿಯಾಗಲು ಖುಷಿಯಾಗುತ್ತದೆ. ಲಸಿಕೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರಯೋಗಗಳು ನಡೆಯುತ್ತಿವೆ ಎಂದು ಎಸ್‌ಐಐ ಸಿಇಒ ಆದರ್ ಪೂನವಾಲ್ಲಾ ಟ್ವಿಟರ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Covaxinನಲ್ಲಿ ಕರುವಿನ ಸೀರಂ? ಲಸಿಕೆ ತಯಾರಿಯಲ್ಲಿ ಇದರ ಬಳಕೆಯ ಸತ್ಯ ಹೀಗಿದೆ!

ಯುಎಸ್ ಬಯೋಟೆಕ್ನಾಲಜಿ ಕಂಪನಿ ನೊವೊವ್ಯಾಕ್ಸ್‌ನ ಪ್ರೋಟೀನ್ ಆಧಾರಿತ ಲಸಿಕೆ, ಎನ್‌ವಿಎಕ್ಸ್-ಕೋವಿ 2373, ಅದರ 3 ನೇ ಹಂತದ ಪ್ರಯೋಗದಲ್ಲಿ ಮಧ್ಯಮ ಮತ್ತು ತೀವ್ರ ರೋಗದ ವಿರುದ್ಧ 100% ರಕ್ಷಣೆ ಮತ್ತು 90.4% ಪರಿಣಾಮಕಾರಿತ್ವವನ್ನು ಪ್ರದರ್ಶಿಸಿದೆ.

Excited to witness the first batch of Covovax (developed by ) being manufactured this week at our facility in Pune. The vaccine has great potential to protect our future generations below the age of 18. Trials are ongoing. Well done team ! pic.twitter.com/K4YzY6o73A

— Adar Poonawalla (@adarpoonawalla)

ಇಲ್ಲಿಯವರೆಗೆ, ಭಾರತ್ ಬಯೋಟೆಕ್‌ನ ಕೊವಾಕ್ಸಿನ್, ಎಸ್‌ಐಐನ ಕೋವಿಶೀಲ್ಡ್ ಮತ್ತು ರಷ್ಯಾದ ಸ್ಪುಟ್ನಿಕ್ ವಿ ಎಂಬ ಮೂರು ಲಸಿಕೆಗಳಿಗೆ ಭಾರತ ಸರ್ಕಾರ ಒಪ್ಪಿಗೆ ನೀಡಿದೆ.

click me!