
ನವದೆಹಲಿ(ಜೂ.26): ದೇಶದಲ್ಲಿ 2ನೇ ಅಲೆ ವೇಳೆಗೆ ಕಾರಣವಾದ ಡೆಲ್ಟಾರೂಪಾಂತರಿ, ಒಟ್ಟು ಕೇಸಿನ ಪೈಕಿ ಶೇ.90ರಷ್ಟುಜನರಲ್ಲಿ ಸೋಂಕಿಗೆ ಕಾರಣವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ದೇಶದ 35 ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ 174 ಜಿಲ್ಲೆಗಳಲ್ಲಿ ಅಪಾಯಕಾರಿ ರೂಪಾಂತರಿಗಳು (ಡೆಲ್ಟಾಮತ್ತು ಡೆಲ್ಟಾಪ್ಲಸ್) ಪತ್ತೆಯಾಗಿದೆ. ಈ ಪೈಕಿ ಅತಿ ಹೆಚ್ಚು ಕೇಸುಗಳು ಮಹಾರಾಷ್ಟ್ರ, ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಳ ಮತ್ತು ಗುಜರಾತ್‌ನಲ್ಲಿ ಪತ್ತೆಯಾಗಿದೆ. 2021ರ ಮೇ ತಿಂಗಳಲ್ಲಿ ಒಟ್ಟು ಕೇಸಿನಲ್ಲಿ ಡೆಲ್ಟಾರೂಪಾಂತರಿ ಪಾಲು ಶೇ.10.31 ಇದ್ದರೆ, 2021ರ ವೇಳೆ ಶೇ.51ಕ್ಕೆ ಹೆಚ್ಚಳವಾಗಿದೆ ಎಂದು ತಿಳಿಸಿದೆ.
ರಾಮಬಾಣ:
ಇದೇ ವೇಳೆ ಕೊರೋನಾದ ವಿವಿಧ ತಳಿಗಳಾದ ಆಲ್ಫಾ, ಬೇಟಾ, ಗಾಮಾ ಮತ್ತು ಡೆಲ್ಟಾತಳಿಗಳ ಮೇಲೆ ಭಾರತದ ಕೋವಿಡ್ ಲಸಿಕೆಗಳಾದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಪರಿಣಾಮಕಾರಿ ಎಂದು ಸಾಬೀತಾಗಿದೆ ಎಂದು ಹೇಳಿದೆ.
2ನೇ ಅಲೆ ಮುಗಿದಿಲ್ಲ:
ದೇಶದ 75 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣ ಇನ್ನೂ ಶೇ.10ಕ್ಕಿಂತ ಹೆಚ್ಚಿದೆ. 92 ಜಿಲ್ಲೆಗಳಲ್ಲಿ ಶೇ.5-10ರಷ್ಟಿದೆ. ಹೀಗಾಗಿ ಎರಡನೇ ಅಲೆ ಇನ್ನೂ ಮುಗಿದಿಲ್ಲ ಎಂದು ಸರ್ಕಾರ ಹೇಳಿದೆ.
ಗರ್ಭಿಣಿಯರಿಗೂ ಲಸಿಕೆ:
ಗರ್ಭಿಣಿಯರೂ ಕೋವಿಡ್ ಲಸಿಕೆ ಪಡೆದುಕೊಳ್ಳಬಹುದಾಗಿದೆ. ಅದು ಅವರಿಗೂ ಅನುಕೂಲ ಮಾಡಿಕೊಡಲಿದೆ. ಶೀಘ್ರವೇ ಈ ಕುರಿತು ಮಾರ್ಗಸೂಚಿ ಬಿಡುಗಡೆ ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ