ಬಿಹಾರದಲ್ಲೊಬ್ಬ ರೋಡ್ ರೋಮಿಯೋ: ಫೋನ್‌ನಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಗೆ ಮುತ್ತಿಕ್ಕಿ ಪರಾರಿ

Published : Mar 14, 2023, 04:19 PM IST
ಬಿಹಾರದಲ್ಲೊಬ್ಬ ರೋಡ್ ರೋಮಿಯೋ: ಫೋನ್‌ನಲ್ಲಿ ಮಾತಾಡ್ತಾ ನಿಂತಿದ್ದ ಮಹಿಳೆಗೆ ಮುತ್ತಿಕ್ಕಿ ಪರಾರಿ

ಸಾರಾಂಶ

ಸ್ತೆ ಬದಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಮಹಿಳೆಯೊಬ್ಬರಿಗೆ ಕಾಮುಕನೋರ್ವ ಓಡಿಬಂದು ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುತ್ತಿಕ್ಕಿದ ಆಘಾತಕಾರಿ ಘಟನೆ ಬಿಹಾರದ ಜಮುಯಿಯಲ್ಲಿ (Jamui) ನಡೆದಿದೆ.

ಪಾಟ್ನಾ: ರಸ್ತೆ ಬದಿ ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದ ಮಹಿಳೆಯೊಬ್ಬರಿಗೆ ಕಾಮುಕನೋರ್ವ ಓಡಿಬಂದು ಮಹಿಳೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುತ್ತಿಕ್ಕಿದ ಆಘಾತಕಾರಿ ಘಟನೆ ಬಿಹಾರದ ಜಮುಯಿಯಲ್ಲಿ (Jamui) ನಡೆದಿದೆ. ಈ ಕಾಮುಕನ ಅವಾಂತರ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದು ಈ ಸೀರಿಯಲ್ ಕಿಸ್ಸರ್ ಬಂಧನಕ್ಕೆ ಆಗ್ರಹಿಸಿದ್ದಾರೆ. 

ಹೀಗೆ ರೋಡ್ ರೋಮಿಯೋನಿಂದ ಕಿರುಕುಳಕ್ಕೊಳಗಾದ ಮಹಿಳೆ ಸ್ಥಳೀಯ ಆರೋಗ್ಯ ಕಾರ್ಯಕರ್ತೆಯಾಗಿದ್ದು(health worker), ಅವರು ಜಮುಯಿಯ ಸದರ್ ಆಸ್ಪತ್ರೆಯ ಹೊರಗೆ ರಸ್ತೆಯಲ್ಲಿ ನಿಂತುಕೊಂಡು ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಈ ಘಟನೆ ನಡೆದಿದೆ.  ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಯತ್ನಿಸಿದರಾದರೂ ಸಾಧ್ಯವಾಗಿಲ್ಲ ಕಾಮುಕ ಆಕೆಯನ್ನು ಒತ್ತಾಯಪೂರ್ವಕವಾಗಿ ಸುಧೀರ್ಘವಾಗಿ ಚುಂಬಿಸಿ ಅಲ್ಲಿಂದ ಓಡಿ ಹೋಗಿದ್ದಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ (Social Media)ವೈರಲ್ ಆಗುತ್ತಿದ್ದಂತೆ ಈ ರೋಡ್ ರೋಮಿಯೋನನ್ನು ಕೂಡಲೇ ಬಂಧಿಸುವಂತೆ ಜನ ಆಗ್ರಹಿಸಿದ್ದಾರೆ. 

ಈ ಅನಾಹುತದ ಸಣ್ಣ ನಿರೀಕ್ಷೆಯನ್ನು ಮಾಡಿರದ ಮಹಿಳೆ ಆತನಿಂದ ಬಿಡಿಸಿಕೊಳ್ಳಲು ಒದ್ದಾಡುವುದನ್ನು ಕಾಣಬಹುದು.  ಘಟನೆ ಬಗ್ಗೆ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಈ ರೋಡ್‌ ರೋಮಿಯೋಗಾಗಿ ಬಲೆ ಬೀಸಿದ್ದಾರೆ.  ಈ ಬಗ್ಗೆ ಸುದ್ದಿಸಂಸ್ಥೆ ಆಜ್‌ತಕ್‌ನೊಂದಿಗೆ ಮಾತನಾಡಿದ ಮಹಿಳೆ 'ಅವನು ಆಸ್ಪತ್ರೆಯ ಆವರಣಕ್ಕೆ ಏಕೆ ಬಂದನೆಂದು ನನಗೆ ತಿಳಿದಿಲ್ಲ. ನನಗೆ ಆ ಮನುಷ್ಯನ ಪರಿಚಯವೂ ಇಲ್ಲ. ನಾನು ಅವನಿಗೆ ಏನು ಮಾಡಿದೆ? ಅವನು ನನ್ನ ಮೇಲೆ ಹೀಗೆ ದೌರ್ಜನ್ಯವೆಸಗಿದಾಗ ನಾನು ವಿರೋಧಿಸಿ ಆಸ್ಪತ್ರೆಯ ಸಿಬ್ಬಂದಿಯನ್ನು ಕರೆದಿದ್ದೇನೆ. ಆದರೆ ಅಷ್ಟರಲ್ಲಾಗಲೇ ಆ ಖದೀಮ ತಪ್ಪಿಸಿಕೊಂಡಿದ್ದಾನೆ ಎಂದು ಹೇಳಿದರು. 

ಕಿಸ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದ IAS ಅಧಿಕಾರಿ ಅಥರ್ ಅಮೀರ್, ಪತ್ನಿ ಮೆಹರೀನ್!

ಚಲಿಸುವ ಸ್ಕೂಟಿಯಲ್ಲಿ ಜೋಡಿಯ ಕಿಸ್ಸಿಂಗ್‌: ಆಕ್ಷೇಪಿಸಿದ್ದ ಯುವಕನ ಬರ್ಬರ ಹತ್ಯೆ

ಇತ್ತೀಚೆಗೆ ರಾಷ್ಟ್ರ ರಾಜಧಾನಿಗೆ ಸಮೀಪವಿರುವ ಗಾಜಿಯಾಬಾದ್‌ ಅಪರಾಧ ರಾಜಧಾನಿಯಾಗಿ ಬದಲಾಗುತ್ತಿದ್ದು, ದಿನೇ ದಿನೇ ಇಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ಜೋಡಿಯೊಂದು ಚಾಲನೆ ವೇಳೆಯೇ ಸಾರ್ವಜನಿಕ ಸ್ಥಳದಲ್ಲಿ ಪರಸ್ಪರ ಕಿಸ್ ಮಾಡುತ್ತಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಆರೋಪಿ ತನ್ನ ಸ್ನೇಹಿತರನ್ನು ಕರೆಸಿ ಯುವಕನನ್ನು ಥಳಿಸಿ ಕೊಂದ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.  

7 ವರ್ಷದ ವಿರಾಟ್ ಮಿಶ್ರಾ (Virat Mishra)ಕೊಲೆಯಾದ ಯುವಕ. ಸಹಿದಾಬಾದ್‌ನಲ್ಲಿ ಈ ಕೊಲೆ ಪ್ರಕರಣ ನಡೆದಿದೆ. ಸಹಿದಾಬಾದ್‌ನ (Sahibabad) ರಸ್ತೆಯಲ್ಲಿ ಸ್ಕೂಟಿಯಲ್ಲಿ ತಿರುಗಾಡುತ್ತಿದ್ದ ಜೋಡಿಯೊಂದು ಸಾರ್ವಜನಿಕ ಸ್ಥಳ ಎಂಬುದನ್ನು ಕೂಡ ಗಣನೆಗೆ ತೆಗೆದುಕೊಳ್ಳದೇ ಸ್ಕೂಟಿ ಚಾಲನೆಯಲ್ಲಿದ್ದಾಗಲೇ ಪರಸ್ಪರ ಕಿಸ್ ಮಾಡಿಕೊಂಡು ಅಸಭ್ಯವಾಗಿ ವರ್ತಿಸಿದ್ದಾರೆ. ಇದನ್ನು ಗಮನಿಸಿದ ವಿರಾಟ್ ಮಿಶ್ರಾ ಮುಜುಗರಕ್ಕೀಡಾಗಿದ್ದು,  ಇದು ಜನವಸತಿ ಪ್ರದೇಶ, ಇಲ್ಲಿ ಹೀಗೆ ಅಸಭ್ಯವಾಗಿ ವರ್ತಿಸದಂತೆ ಆ ಜೋಡಿಗೆ ತಾಕೀತು ಮಾಡಿದ್ದಾರೆ.  ಇದರಿಂದ ಸಿಟ್ಟಿಗೆದ್ದ ಯುವಕ ತನ್ನ ಸ್ನೇಹಿತರನ್ನು ಕರೆಸಿ ವಿರಾಟ್ ಮಿಶ್ರಾಗೆ ಥಳಿಸಿ ಕೊಲೆ ಮಾಡಿದ್ದಾರೆ. 

60 ಕಳೆದ ಮೇಲೆ ಅರಳು ಮರಳಾ.... ಕಮಲಾ ಹ್ಯಾರಿಸ್ ಗಂಡನನ್ನು ಚುಂಬಿಸಿದ ಅಧ್ಯಕ್ಷ ಬೈಡೆನ್ ಪತ್ನಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು