ಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪೊಟ್ಟಿಶ್ರೀರಾಮುಲು ನಗರದಲ್ಲಿ ನಡೆದಿದೆ.
ನೆಲ್ಲೂರು: ಹಾವು ಎಂದರೆ ಹೆದರಿ ಓಡುವವರೇ ಹೆಚ್ಚು. ಆದರೆ ಕೆಲವರು ಅಪಾಯಕಾರಿ ಹಾವಿನೊಂದಿಗೆ ಸರಸವಾಡುತ್ತಾರೆ. ಹೀಗೆ ಹಾವಿನೊಂದಿಗೆ ಆಟವಾಡಲು ಹೋದವನೋರ್ವ ಪ್ರಾಣ ಕಳೆದುಕೊಂಡಿದ್ದಾನೆ. ಹಾವಿನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಪ್ರಾಣ ಕಳೆದುಕೊಂಡ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಪೊಟ್ಟಿಶ್ರೀರಾಮುಲು ನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಮಣಿಕಂಠ ರೆಡ್ಡಿ ಎಂದು ಗುರುತಿಸಲಾಗಿದೆ. ಈತ ನಗರದಲ್ಲಿ ಜ್ಯೂಸ್ ಶಾಪ್ ಇರಿಸಿಕೊಂಡಿದ್ದ.
ನಗರದ ಆರ್‌ಟಿಸಿ (RTC) ಡಿಪೋ ಬಳಿ ಹಾವಾಡಿಗನೋರ್ವ ಹಾವಿನೊಂದಿಗೆ ಆಟವಾಡುತ್ತಿದ್ದಾನೆ ಎಂಬ ವಿಚಾರ ತಿಳಿದ ಮಣಿಕಂಠ ರೆಡ್ಡಿ (Manikata Reddy) ಕುತೂಹಲದಿಂದ ಅಲ್ಲಿಗೆ ತೆರಳಿದ್ದಾನೆ. ಹಾಗೆ ಹೋದವನೇ ಅಲ್ಲಿ ಸುಮ್ಮನಿರದೇ ಹಾವಾಡಿಗನ ಬಳಿಯಿಂದ ಹಾವನ್ನು ಕೇಳಿ ಪಡೆದು ಅದನ್ನು ಆತನ ಕುತ್ತಿಗೆಯ ಸುತ್ತಲೂ ಸುತ್ತಿ ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ಫೋಟೋ ತೆಗೆದು ಇನ್ನೇನು ಆತನ ಕುತ್ತಿಗೆಯಿಂದ ಹಾವನ್ನು ಆತ ಬಿಡಿಸಿ ತೆಗೆಯುತ್ತಿರುವ ವೇಳೆ ಹಾವಿಗೆನೆನಿಸಿತೊ ಅದು ತೆಗೆದು ಆತನಿಗೆ ಕಚ್ಚಿದೆ. ಕೂಡಲೇ ಸ್ಥಳೀಯರು ಆತನನ್ನು ಒಂಗೊಲ್‌ನಲ್ಲಿರುವ ರೀಮ್ಸ್ (RIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಆತ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದಾನೆ. ಘಟನೆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
ರಾಯಚೂರು: ಶಾಲೆಯ ನೀರಿನ ಟ್ಯಾಂಕ್‌ನಲ್ಲಿ ನಾಗರ ಹಾವು ಪ್ರತ್ಯಕ್ಷ, ಕಕ್ಕಾಬಿಕ್ಕಿಯಾದ ವಿದ್ಯಾರ್ಥಿಗಳು..!
ಸಾಮಾನ್ಯವಾಗಿ ಹಾವುಗಳು ತಾವಾಗಿ ಯಾರಿಗೂ ಏನು ಮಾಡಲು ಹೋಗುವುದಿಲ್ಲ. ಆದರೆ ತಮ್ಮ ಅಸ್ತಿತ್ವಕ್ಕೆ ಅಪಾಯವಾಗುತ್ತಿದೆ ಎಂಬುದು ಗೊತ್ತಾಗುತ್ತಿದ್ದಂತೆ ದಾಳಿ ಮಾಡುತ್ತವೆ. ಈ ವಿಚಾರ ತಿಳಿದಿದ್ದರೂ ಕೂಡ ಕೆಲವರು ಹಾವಿನೊಂದಿಗೆ ಸರಸವಾಡಲು ಹೋಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ. ಹೀಗೆ ಕಳೆದ ವರ್ಷ ಹಾವಿಗೆ ಮುತ್ತಿಕ್ಕಲು ಹೋದ ಯುವಕನನ್ನು ಪೊಲೀಸರು ಬಂಧಿಸಿದ್ದರು. ಮಹಾರಾಷ್ಟ್ರದ (Maharshtra) ಸಾಂಗ್ಲಿಯ (sangli) 22 ವರ್ಷದ ಪ್ರದೀಪ್ ಎಂಬಾತ ಹಾವಿಗೆ ಮುತ್ತಿಕ್ಕುವ ಸಾಹಸ ಮಾಡಿದ್ದ. ಬಳಿಕ ತನ್ನ ಈ ಸಾಹಸದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ. ವಿಡಿಯೋ ನೋಡಿ ಆತನ ಹಿಂದೆ ಬಿದ್ದ ಪೊಲೀಸರು ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ (Under the Wildlife Protection Act) ಈತನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಆಗುವ ಆಸೆಯಿಂದ ಈ ಸಾಹಸ ಮಾಡಿದ್ದ ಈತ ತಾನು ಹಾವಿಗೆ ಮುತ್ತಿಡುತ್ತಿರುವ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾಗೆ ಹಾಕಿದ್ದ.
ಹಾವಿಗೆ ಗುಂಡಿಕ್ಕಲು ಹೋಗಿ ಹೊರಟೋಯ್ತು ಪ್ರಾಣ
ಸಾಮಾನ್ಯವಾಗಿ ಮನುಷ್ಯರ ಹೊರತಾಗಿ ಹಾವುಗಳೇ ಆಗಲಿ ಇತರ ಪ್ರಾಣಿಗಳೇ ಆಗಲಿ ಪ್ರಚೋದನೆ ಇಲ್ಲದೇ ಯಾವುದೇ ಕಾರಣಕ್ಕೂ ಇತರ ಜೀವಿಗಳ ಮೇಲೆ ದಾಳಿ ಮಾಡುವುದಿಲ್ಲ. ಮಾಂಸಹಾರಿ ಪ್ರಾಣಿಗಳಾದರೂ ಅಷ್ಟೇ ಹಸಿದಿದ್ದಲ್ಲಿ ಮಾತ್ರ ದಾಳಿಗೆ ಮುಂದಾಗುತ್ತವೆ. ಅದೇ ಹೊಟ್ಟೆ ತುಂಬಿದ್ದಲ್ಲಿ ತಮ್ಮಿಷ್ಟದ ಪ್ರಾಣಿ ತಮ್ಮ ಮುಂದೆಯೇ ಸಾಗಿದರೂ ಕ್ಯಾರೇ ಎನ್ನದೇ ಕುಳಿತಿರುತ್ತವೆ. ಅದರಲ್ಲೂ ಹಾವುಗಳಂತೂ ತಮ್ಮ ಪಾಡಿಗೆ ತಾವಿರುತ್ತವೆ. ಆದರೆ ಇಲ್ಲೊಬ್ಬ, ಸುಮ್ಮನೆ ತನ್ನ ಪಾಡಿಗೆ ತಾನು ನೆಲದಲ್ಲಿ ಹರಿದಾಡುತ್ತಿದ್ದ ಹಾವಿಗೆ ಗುಂಡಿಕ್ಕಲು ಹೋಗಿದ್ದು, ಪರಿಣಾಮ ಆತನ ಜೀವವೇ ಹೋಗಿದೆ.
ಎಂಥಾ ಸೋಜಿಗವಿದು... ಹಾವಿನ ಮೇಲೆ ಕಪ್ಪೆಯ ಜಾರುಬಂಡಿ ಆಟ: ವೈರಲ್ ವಿಡಿಯೋ
ಟ್ವಿಟ್ಟರ್‌ನಲ್ಲಿ (Twitter) ಈ ವಿಡಿಯೋವನ್ನು ಇನ್ಸ್ಟಾಂಟ್ ಕರ್ಮ (Instant karma) ಎಂಬ ಪೇಜ್‌ನಿಂದ ಅಪ್‌ಲೋಡ್ ಮಾಡಲಾಗಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಹಾವು ಕಲ್ಲು ಮಣ್ಣು ಮಿಶ್ರಿತ ಮಡ್ಡು ರಸ್ತೆಯಲ್ಲಿ ಅಡ್ಡಲಾಗಿ ಹೆಡೆ ಎತ್ತಿ ನಿಂತಿದೆ. ಇದರ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಈತ ನಡೆಸಿದ ಗುಂಡಿನ ದಾಳಿಯಿಂದ ಹಾವು ಸ್ವಲ್ಪದರಲ್ಲೇ ಪಾರಾಗಿದೆ. ಈತ ಎರಡು ಬಾರಿ ಗುಂಡು ಹಾರಿಸಿದ್ದು, ಈ ವೇಳೆ ಎರಡೂ ದಾಳಿಯಿಂದಲೂ ತಪ್ಪಿಸಿಕೊಂಡ ಹಾವು ಹರಿದಾಡುತ್ತಾ ಇವನ ಬಳಿ ಬಂದು ಈತನಿಗೆ ಕಚ್ಚಿಯೇ ಬಿಟ್ಟಿದೆ. ಇತ್ತ ಇವನು ಹಾರಿಸಿದ ಗುಂಡು ಹಾವಿನ ಅತ್ತಿತ್ತ ಹಾರಿದ್ದು, ಹಾವು ಸ್ವಲ್ಪದರಲ್ಲಿ ತಪ್ಪಿಸಿಕೊಳ್ಳುವ ಜೊತೆ ಈತನಿಗೆ ತಕ್ಕ ಶಿಕ್ಷೆ (Punishment) ನೀಡಿದೆ. ವೀಡಿಯೋದ ಕೊನೆಯಲ್ಲಿ ಈತ ಜೋರಾಗಿ ಚೀರುವುದರ ಜೊತೆ ವಿಡಿಯೋ ಅಂತ್ಯವಾಗುತ್ತದೆ.