
ನಾಗಲ್ಯಾಂಡ್: ನಾಗಲ್ಯಾಂಡ್‌ನ ಸಚಿವರಾಗಿರುವ ತೇಮ್ನೆನ್ ಇಮ್ನಾ ಸಾಮಾಜಿಕ ಜಾಲತಾಣ ಅದರಲ್ಲೂ ಟ್ವಿಟ್ಟರ್‌ನಲ್ಲಿ ಸದಾ ಚಟುವಟಿಕೆಯಿಂದ ಇದ್ದು ಏನಾದರೊಂದು ಪೋಸ್ಟ್‌ಗಳನ್ನು ಆಗಾಗ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಅವರು ಒಂದು ಪುಟ್ಟ ಬಾಲಕನ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಜವಾಬ್ದಾರಿ ಹೊರಲು ವಯಸ್ಸು ಮುಖ್ಯ ಅಲ್ಲ ಎಂಬುದನ್ನು ಈ ವೀಡಿಯೋ ಸಾರಿ ಹೇಳುತ್ತಿದೆ.
ನಮ್ಮಲ್ಲಿ ಅನೇಕರಿದ್ದಾರೆ. 30 ದಾಟಿದರು ಯಾವುದೇ ಜವಾಬ್ದಾರಿಯ ಚಿಂತೆ ಇಲ್ಲದೇ ಎಲ್ಲಾ ಭಾರವನ್ನು ಇನ್ನು ಪೋಷಕರ ಮೇಲೆಯೇ ಹಾಕಿ ಆರಾಮವಾಗಿ ದಿನ ದೂಡುವ ಅನೇಕರು ನಮ್ಮ ಮಧ್ಯೆ ಇದ್ದಾರೆ. ಹೀಗಿರುವಾಗ ಈ ಪುಟ್ಟ ಬಾಲಕ (Little Boy) ಎಳೆವೆಯಲ್ಲೇ ತೋರಿದ ಜವಾಬ್ದಾರಿಯುತ ವರ್ತನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಾಗಾದ್ರೆ ಆ ವೀಡಿಯೋದಲ್ಲಿ ಏನಿದೆ ನೋಡಿ..
ಸ್ಕೂಟಿಯಲ್ಲಿ ಸಾಗುತ್ತ ನಡುರಸ್ತೆಯಲ್ಲಿ ಸ್ನಾನ: ಮಜಾ ನೋಡಿದ ವಾಹನ ಸವಾರರು
ವೀಡಿಯೋದಲ್ಲಿ ಏನಿದೆ.
ಸುಂಟರಗಾಳಿಯಂತೆ ಜೋರಾಗಿ ಗಾಳಿ ಬೀಸುತ್ತಿದ್ದು, ಗಾಳಿಯ ರಭಸಕ್ಕೆ ಸಿಲುಕಿ ಎಲ್ಲವೂ ತರಗೆಲೆಗಳಂತೆ ದೂರ ದೂರ ತೇಲಿ ಹೋಗುತ್ತಿವೆ. ಈ ವೇಳೆ ಪುಟ್ಟ ಬಾಲಕ ತನ್ನ ತಾಯಿಯ ಜೊತೆ ತಮ್ಮ ಪುಟ್ಟದಾದ ಬೀದಿ ಬದಿಯ ಶಾಪ್‌ನಲ್ಲಿ ನಿಂತಿದ್ದಾನೆ. ಗಾಳಿ ವಿಪರೀತವಾಗಿ ಬೀಸುತ್ತಿರುವುದರಿಂದ ಏನು ಅಗದಿರಲಿ ಎಂದು ಆತನ ತಾಯಿ ಪ್ಲಾಸ್ಟಿಕ್ ಕವರ್‌ಗಳಿಂದ ಅಂಗಡಿಯನ್ನು ಮುಚ್ಚುತ್ತಿದ್ದರೆ ಬಾಲಕನೂ ಸಹ ಇದಕ್ಕೆ ಸಹಾಯ ಮಾಡುತ್ತಾನೆ. ಬಾಲಕನನ್ನೇ ಹಾರಿಸಿಕೊಂಡೋಗೂವಷ್ಟು ವೇಗವಾಗಿ ಗಾಳಿ ಬೀಸುತ್ತಿದ್ದರೆ ಪುಟ್ಟ ಬಾಲಕ ಹಾರುತ್ತಿರುವ ತನ್ನ ಅಂಗಡಿಯ ಪ್ಲಾಸ್ಟಿಕ್ ಪರದೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ತನ್ನ ತಾಯಿಗೆ ಅದನ್ನು ಭದ್ರಗೊಳಿಸಲು ನೆರವಾಗುತ್ತಾನೆ. ಅಷ್ಟೇ ಅಲ್ಲ ಈ ಗಾಳಿಗೆ ಆತನ ಪುಟ್ಟ ಶಾಪ್ ಮುಂದಿದ್ದ ಕುರ್ಚಿಯೊಂದು ಹಾರಿ ದೂರ ಹೋಗಿದ್ದು, ಬಾಲಕ ಅದನ್ನು ಕೂಡ ತೆಗೆದುಕೊಂಡು ಬಂದು ತನ್ನ ಅಂಗಡಿ ಮುಂದೆ ಇಡುತ್ತಾನೆ. ಈ ವಿಡಿಯೋ ಅನೇಕೆ ಮನ ಗೆದ್ದಿದ್ದು, ಪುಟ್ಟ ಬಾಲನ ಸಮಯಪ್ರಜ್ಞೆ, ಜವಾಬ್ದಾರಿಯುತ ವರ್ತನೆಗೆ ಅನೇಕರು ಆತನನ್ನು ಕೊಂಡಾಡಿದ್ದಾರೆ.
ತೆಂಗಿನ ಗರಿಯ ಪೊರಕೆ ಮಾಡುವ ಸುಲಭ ವಿಧಾನ: ಅಜ್ಜಿಯ ವೀಡಿಯೋ ಸಖತ್ ವೈರಲ್
31 ಸೆಕೆಂಡ್‌ಗಳ ಈ ವೀಡಿಯೋವನ್ನು ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ ( Temjen Imna Along) ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಜವಾಬ್ದಾರಿಯನ್ನು ಅರಿಯುವುದಕ್ಕೆ ವಯಸ್ಸು ಮುಖ್ಯವಾಗುವುದಿಲ್ಲ, ಒದಗಿ ಬರುವ ಸನ್ನಿವೇಶವೇ ಸಾಕು ಎಂದು ಅವರು ಬರೆದುಕೊಂಡಿದ್ದಾರೆ. ಇವರ ಈ ಮಾತಿಗೆ ಅನೇಕರು ಹೌದೌದು ಎಂದು ತಲೆದೂಗಿದ್ದಾರೆ. ಕೆಲವು ಸಂದರ್ಭಗಳು ಬದುಕಿನ ಪಾಠವನ್ನು ಎಳವೆಯಲ್ಲೇ ಕಲಿಸಿಬಿಡುತ್ತವೆ ಎಂದು ಒಬ್ಬರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಈ ಮಾತು ನಿಜಕ್ಕೂ ಸತ್ಯ ಸನ್ನಿವೇಶಗಳು ಘಟನೆಗಳು ಬದುಕುವುದಕ್ಕೆ ಕಲಿಸುತ್ತವೆ ಜವಾಬ್ದಾರಿ ಕಲಿಸುತ್ತವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆ ಬಾಲಕನಿಗೆ ದೇವರು ಒಳ್ಳೆಯದು ಮಾಡಲು ಪುಟ್ಟ ವಯಸ್ಸಿನಲ್ಲೇ ಎಷ್ಟು ಬುದ್ಧಿವಂತ ಈ ಬಾಲಕ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ