ಆರ್ಯನ್ ಖಾನ್‌ಗೆ ಸಿಕ್ಕಿತ್ತು ಹೆಣ್ಣು, ಡ್ರಗ್ಸ್ ಫ್ರಿ ಟಿಕೆಟ್ ; ಅಧಿಕಾರಿ ಜೊತೆ ಸಮೀರ್ ನಡೆಸಿದ ಚಾಟ್ ಬಹಿರಂಗ!

By Suvarna NewsFirst Published May 19, 2023, 12:41 PM IST
Highlights

ಆರ್ಯನ್ ಖಾನ್‌ಗೆ ಒಟ್ಟು 27 ಲಕ್ಷ ರೂಪಾಯಿ ಮೌಲ್ಯದ ರೇವ್ ಪಾರ್ಟಿ ಟಿಕೆಟ್, ರಾತ್ರಿ ಕಳೆಯಲು ಹುಡುಗಿ, ಡ್ರಗ್ಸ್ ಉಚಿತವಾಗಿ ನೀಡಲಾಗಿತ್ತು. ಈ ಮೂಲಕ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಗೆ ಸೆಲೆಬ್ರೆಟಿಗಳನ್ನು ಸೆಳೆಯಲು ಪ್ಲಾನ್ ಮಾಡಲಾಗಿತ್ತು. ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.
 

ಮುಂಬೈ(ಮೇ.19): ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಆರ್ಯನ್ ಖಾನ್ ಬಂಧಿಸಿದ್ದ ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೇಡೆ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಇದರ ನಡುವೆ ಎನ್‌ಸಿಬಿ ಅಧಿಕಾರಿ ಜೊತೆ ಸಮೀರ್ ವಾಂಖೆಡೆ ನಡೆಸಿದ ವ್ಯಾಟ್ಸ್ಆ್ಯಪ್ ಚಾಟ್ ಬಹಿರಂಗಗೊಂಡಿದೆ.  ಈ ಚಾಟ್‌ನಲ್ಲಿ ಡ್ರಗ್ ಮಾಫಿಯಾ ಯಾವ ರೀತಿ ಕೆಲಸ ಮಾಡುತ್ತಿದೆ ಅನ್ನೋ ಮಾಹಿತಿ ಬಹಿರಂಗ ಪಡಿಸಲಾಗಿದೆ. ಇಷ್ಟೇ ಅಲ್ಲ ಈ ಮಾಫಿಯಾ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಬಳಸಿಕೊಂಡು ರೇವ್ ಪಾರ್ಟಿಗೆ ಸೆಲೆಬ್ರೆಟಿಗಳನ್ನು ಸೆಳೆಯುವ ಕುತಂತ್ರ ಹೇಗಿತ್ತು ಅನ್ನೋದು ಬಯಲಾಗಿದೆ. ಆರ್ಯನ್ ಖಾನ್ ಬಂಧಿಸಿದ ಎನ್‌ಸಿಬಿ ಉಪ ನಿರ್ದೇಶಕ ಗ್ಯಾನೇಶ್ವರ್ ಸಿಂಗ್ ಹಾಗೂ ಎನ್‌ಸಿಬಿ ಮುಖ್ಯಸ್ಥ ಸಮೀರ್ ವಾಂಖೇಡೆ ನಡೆಸಿದ ಈ ಚಾಟ್‌ನಲ್ಲಿ, ಆರ್ಯನ್ ಖಾನ್ ಒಂದು ರಾತ್ರಿಗೆ 27 ಲಕ್ಷ ರೂಪಾಯಿ ಮೌಲ್ಯದ ರೇವ್ ಪಾರ್ಟಿ ಟಿಕೆಟ್, ರಾತ್ರಿ ಕಳೆಯಲು ಹುಡುಗಿ ಹಾಗೂ ಡ್ರಗ್ಸ್ ಉಚಿತವಾಗಿ ನೀಡಲಾಗಿತ್ತು ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

ಆರ್ಯನ್‌ ಖಾನ್‌ಗೆ ಡ್ರಗ್ಸ್ ಕೇಸಿನಲ್ಲಿ ಕ್ಲೀನ್‌ಚಿಟ್‌ ಕೊಡಿಸಲು 25 ಕೋಟಿ ರೂಪಾಯಿ ಕೇಳಿದ ಆರೋಪ ಸಮೀರ್‌ ಮೇಲಿದೆ. ಇದರ ಜೊತೆಗೆ ಅಕ್ರಮ ಆಸ್ತಿ ಆರೋಪವೂ ಇದೆ. ಹೀಗಾಗಿ ಸಮೀರ್ ವಾಂಖೆಡೆ ಮೇಲೆ ತನಿಖೆ ಚುರುಕುಗೊಂಡಿದೆ. ಈ ತನಿಖೆಯ ನಡುವೆ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಸ್ಫೋಟಕ ಮಾಹಿತಿಗಳು ಬಹಿರಂಗವಾಗಿದೆ. 2021ರ ಅಕ್ಟೋಬರ್ ತಿಂಗಳಲ್ಲಿ ಸಮೀರ್ ವಾಂಖೆಡೆ ಹಾಗೂ ಗ್ಯಾನೇಶ್ವರ್ ಸಿಂಗ್ ನಡೆಸಿದ ವ್ಯಾಟ್ಸ್ಆ್ಯಪ್ ಚಾಟ್ ಡ್ರಗ್ಸ್ ಮಾಫಿಯಾ ಕತೆ ಹೇಳುತ್ತಿದೆ.

Latest Videos

ಆರ್ಯನ್‌ ಖಾನ್‌ ಡ್ರಗ್ಸ್‌ ಕೇಸ್‌: ಶಾರುಖ್‌ ಖಾನ್‌ ಬಳಿ 25 ಕೋಟಿ ಲಂಚ ಪಡೆಯಲು ಸಮೀರ್‌ ವಾಂಖೇಡೆ ಸಂಚು

ಮಹಾನಗರಗಳ, ಪ್ರವಾಸಿ ತಾಣಗಳ ಹೊರವಲಯದಲ್ಲಿ ಡ್ರಗ್ಸ್ ಮಾಫಿಯಾಗಳ ರೇವ್ ಪಾರ್ಟಿ ನಡೆಸುತ್ತದೆ. ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಕ್ರೂಸ್ ಶಿಪ್‌ನಲ್ಲಿ ಗೋವಾ ಕಡಲಿನಲ್ಲಿ ರೇವ್ ಪಾರ್ಟಿ ನಡೆಸಲಾಗಿತ್ತು. ಈ ಪಾರ್ಟಿಗೆ ಆರ್ಯನ್ ಖಾನ್‌ಗೆ ಡ್ರಗ್ಸ್ ಮಾಫಿಯಾ ಹಲವು ಉಚಿತ ಉಡುಗೊರೆ ನೀಡಿತ್ತು. ಆರ್ಯನ್ ಖಾನ್ ಮೂಲಕ ಇತರ ಸೆಲೆಬ್ರೆಟಿಗಳನ್ನು ಈ ಪಾರ್ಟಿಗೆ ಸೆಳೆಯುವ ಪ್ರಯತ್ನ ಇದಾಗಿತ್ತು. ಒಂದು ರಾತ್ರಿಗೆ ಆರ್ಯನ್ ಖಾನ್‌ಗೆ 27 ಲಕ್ಷ ರೂಪಾಯಿ ಮೌಲ್ಯದ ರೇವ್ ಪಾರ್ಟಿ ಟಿಕೆಟ್, ಡ್ರಗ್ಸ್, ರಾತ್ರಿ ಕಳೆಯಲು ಹುಡುಗಿಯರನ್ನು ನೀಡಲಾಗಿತ್ತು. ಆರ್ಯನ್ ಖಾನ್ ಮೂಲಕ ಯುವ ಸಮೂಹವನ್ನು ಈ ಡ್ರಗ್ಸ್ ಆಡಿಕ್ಟ್ ಮಾಡಿ ಉದ್ಯಮ ವೃದ್ಧಿಸುವ ಪ್ಲಾನ್ ಇದಾಗಿದೆ. ಹಲವು ಸಿನಿಮಾ ನಟ ನಟಿಯರು ಈ ರೀತಿಯ ರೇವ್ ಪಾರ್ಟಿಯಲ್ಲಿದ್ದಾರೆ. ಇದರ ಜೊತೆಗೆ ಉದ್ಯಮಿಗಳು, ಶ್ರೀಮಂತರ ಮಕ್ಕಳು ಈ ಪಾರ್ಟಿಯಲ್ಲಿ ಹಾಜರಿದ್ದಾರೆ. ಈ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿ ಹುಡುಗಿಯರ ಜೊತೆ ರಾತ್ರಿ ಕಳೆಯುವುದೇ ಮುಖ್ಯವಾಗಿದೆ ಎಂದು ವಾಂಖೆಡೆ ಹಾಗೂ ಗ್ಯಾನೇಶ್ವರ್ ಸಿಂಗ್ ವ್ಯಾಟ್ಸ್ಆ್ಯರ್ ಚಾಟ್ ನಡೆಸಿದ್ದಾರೆ.

ಈ ವ್ಯಾಟ್ಸ್ಆ್ಯಪ್ ಚಾಟ್‌ನಲ್ಲಿ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಹೇಗೆ ಸಿಲುಕಿದ್ದಾನೆ ಅನ್ನೋ ಮಾಹಿತಿಯನ್ನೂ ಸಮೀರ್ ವಾಂಖೆಡೆ ಬಯಲು ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಆರ್ಯನ್ ಖಾನ್ ಕೇಸ್ ಗಂಭೀರವಾಗುತ್ತಿದ್ದಂತೆ ಎಫ್ಐಎರ್ ಪ್ರತಿಯಲ್ಲಿ ಆರ್ಯನ್ ಮೇಲೆ ಗಂಭೀರ ಆರೋಪ ಮಾಡದಂತೆ, ದಾಖಲೆ ಸಲ್ಲಿಸದೆ ಬಿಡಿಸಿಕೊಂಡು ಬರಲು 25 ಕೋಟಿ ಲಂಚ ಕೇಳಲಾಗಿದೆ ಅನ್ನೋ ಆರೋಪ ಇದೀಗ ಸಮೀರ್ ಕೊರಳಿಗೆ ಸುತ್ತಿಕೊಂಡಿದೆ. ಇದನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಂಡಿರುವ ಸಿಬಿಐ, ವಾಂಖೇಡೆ ಆಸ್ತಿಪಾಸ್ತಿಗಳು ಹಾಗೂ ಮುಂಬೈ, ದಿಲ್ಲಿ, ರಾಂಚಿ ಹಾಗೂ ಕಾನ್ಪುರದ 29 ಸ್ಥಳಗಳಲ್ಲಿ ದಾಳಿ ನಡೆಸಿದೆ.

'ದೇಶಪ್ರೇಮಿಯಾಗಿರೋದಕ್ಕೆ ಸಿಕ್ಕ ಶಿಕ್ಷೆ..' ಸಿಬಿಐ ದಾಳಿಯ ಕುರಿತು ಸಮೀರ್‌ ವಾಂಖೆಡೆ ಬೇಸರ!

ಈ ಆರೋಪವನ್ನು ಸಮೀರ್ ಅಲ್ಲಗೆಳೆದಿದ್ದಾರೆ. ಇಷ್ಟೇ ಅಲ್ಲ ಕೋರ್ಟ್ ಮೆಟ್ಟಿಲೇರಿದ್ದಾರೆ. ಸಮೀರ್ ವಾಂಖೇಡೇ ಮೇಲಿನ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಒಂದೊಂದೆ ಮಾಹಿತಿಗಳು ಹೊರಬೀಳುತ್ತಿದೆ.

click me!