ಸ್ಕೂಟಿಯಲ್ಲಿ ಸಾಗುತ್ತ ನಡುರಸ್ತೆಯಲ್ಲಿ ಸ್ನಾನ: ಮಜಾ ನೋಡಿದ ವಾಹನ ಸವಾರರು

Published : May 19, 2023, 12:53 PM ISTUpdated : May 19, 2023, 12:55 PM IST
ಸ್ಕೂಟಿಯಲ್ಲಿ ಸಾಗುತ್ತ ನಡುರಸ್ತೆಯಲ್ಲಿ ಸ್ನಾನ:  ಮಜಾ ನೋಡಿದ ವಾಹನ ಸವಾರರು

ಸಾರಾಂಶ

ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್‌ಗಾಗಿ ಜೋಡಿಯೊಂದು ನಡುರಸ್ತೆಯಲ್ಲಿ ಚಲಿಸುವ ಸ್ಕೂಟಿಯಲ್ಲಿ ಕುಳಿತು ಸ್ನಾನ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಥಾಣೆ: ಇದು ಸಾಮಾಜಿಕ ಜಾಲತಾಣ ಯುಗವಾಗಿದ್ದು, ಭಿನ್ನ ವಿಭಿನ್ನ ಕಂಟೆಂಟ್ ಸೃಷ್ಟಿಸಿದಷ್ಟು ನೋಡುವವರು ಹೆಚ್ಚು. ಜೊತೆಗೆ ಇದು ಇಂದು ಆದಾಯದ ಮೂಲವೂ ಆಗಿರುವುದರಿಂದ ವಿಭಿನ್ನ ರೀತಿಯ ವೀಡಿಯೋ ಮಾಡುವುದಕ್ಕಾಗಿ ಯುವ ಸಮೂಹ ಇನ್ನಿಲ್ಲದ ಸಾಹಸ ಮಾಡುತ್ತದೆ. ಬರೀ ತಾವು ಸಾಹಸ ಮಾಡುವ ಭರದಲ್ಲಿ ಕೆಲವರು ಸಾರ್ವಜನಿಕ ಪ್ರದೇಶ ಎಂಬುದನ್ನು ಕೂಡ ನೋಡದೇ ಇರರಿಗೆ ಕೂಡ ತೊಂದರೆ ನೀಡುತ್ತಾರೆ. ಅದೇ ರೀತಿ ಇಲ್ಲೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ವೀವ್ಸ್‌ಗಾಗಿ ಜೋಡಿಯೊಂದು ನಡುರಸ್ತೆಯಲ್ಲಿ ಚಲಿಸುವ ಸ್ಕೂಟಿಯಲ್ಲಿ ಕುಳಿತು ಸ್ನಾನ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಜನರು ಕೂಡ ಈ ಜೋಡಿಯ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ವೀಡಿಯೋದಲ್ಲಿ ಕಾಣಿಸುವಂತೆ ಯುವಕ ಸ್ಕೂಟರ್ ಬಿಡುತ್ತಿದ್ದರೆ, ಯುವತಿ ಬೈಕ್‌ ಹಿಂದೆ ಒಂದು ಬಕೆಟ್ ನೀರು ಹಿಡಿದುಕೊಂಡು ಕುಳಿತಿದ್ದು,ಒಂದು ಮಗ್ ನೀರನ್ನು ತನ್ನ ತಲೆಗೂ ಇನ್ನೊಂದು ಮಗ್ ನೀರನ್ನು ಮುಂದೆ ಕೂತ ಯುವಕನ ತಲೆಗೂ ಹೊಯ್ದು ಲೂಸ್‌ಗಳ ತರ ಆಡ್ತಿದ್ದು, ಇವರನ್ನು  ಇತರ ವಾಹನ ಸವಾರರು ಏನಿದು ವಿಚಿತ್ರ ಎಂಬಂತೆ ನೋಡುತ್ತಿದ್ದಾರೆ. ಸಿಗ್ನಲ್ ಬಿದ್ದಾಗ ಈ ಜೋಡಿ ಮೈವರೆಸಿಕೊಂಡಂತೆ ಮಾಡುತ್ತಿದ್ದು, ಇವರ ವಿಚಿತ್ರ ವರ್ತನೆಯನ್ನು ಯಾರೂ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ.

ಭಯಂಕರ ಪ್ರೇಮಿ ಇವ: ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಗೆಳತಿಗೆ ಭಾರತೀಯನ ಸರ್‌ಪ್ರೈಸ್‌

WeDeserveBetterGovt.🇮🇳(@ItsAamAadmi) ಎಂಬ ಪೇಜ್‌ನಿಂದ 25 ಸೆಕೆಂಡ್‌ಗಳ ವೀಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ವೀಡಿಯೋ ಪೋಸ್ಟ್ ಮಾಡಿದವರು ನೀಡಿದ ಮಾಹಿತಿಯಂತೆ ಇದು ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸ್‌ನಗರದಲ್ಲಿ ಘಟನೆ ನಡೆದಿದೆ. ಅವರು ಈ ವೀಡಿಯೋವನ್ನು ಮಹಾರಾಷ್ಟ್ರ ಡಿಜಿಪಿ (
@DGPMaharashtra) ಹಾಗೂ ಥಾಣೆ ನಗರ ಪೊಲೀಸರಿಗೂ (@ThaneCityPolice) ಟ್ಯಾಗ್ ಮಾಡಿದ್ದು, ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಇದು ಉಲ್ಲಾಸ್‌ನಗರ, ಮನೋರಂಜನೆಯ ಹೆಸರಿನಲ್ಲಿ ಎಂಥಹಾ ಅವಿವೇಕದಿಂದ ವರ್ತಿಸಲಾಗುತ್ತಿದೆ. ಉಲ್ಲಾಸ್‌ನಗರದ ವಾಹನ ಸಂದಣಿಯಿಂದ ಕೂಡಿದ  ಸೆಕ್ಷನ್ 17 ಸಿಗ್ನಲ್ ಇದು,  ಈ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ. 

ಇಂಟರ್‌ನೆಟ್‌ ಸೆನ್ಸೇಷನ್ ಬಾಬಾ ಜಾಕ್ಸನ್‌ ಜೊತೆ ಪೊಲೀಸ್‌ ಪೇದೆಯ ಬಿಂದಾಸ್ ಡಾನ್ಸ್‌

ಈ ವೀಡಿಯೋಗೆ ಮರಾಠಿಯಲ್ಲಿ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ನೀವು ನೀಡಿದ ಮಾಹಿತಿಯನ್ನು ಟ್ರಾಫಿಕ್ ನಿಯಂತ್ರಣ ಕೊಠಡಿಗೆ ವರ್ಗಾಯಿಸಲಾಗಿದೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಠಾಣೆ ಪೊಲೀಸರು ಹೇಳಿದ್ದಾರೆ. 


ಆಹ ಆಹಾ... ಹಾವಿಗೆ ಮುತ್ತಿಕ್ಕಿದ ಯುವಕ: ವೈರಲ್ ವೀಡಿಯೋ

ನಾವೆಲ್ಲಾ ಹಾವು ನೋಡಿ ಹಾವು ಹಾವು ಅಂತ ಬೊಬ್ಬೆ ಹೊಡೆದು ಓಡಲು ಶುರು ಮಾಡುತ್ತೇವೆ. ಆದ್ರೆ  ಇಲ್ಲೊಬ್ಬ ಆಹ ಆಹಾ ಎಂದು ಹಾವಿಗೆ ಮುತ್ತಿಕ್ಕಿದ್ದಾನೆ. ಇದರ ವಿಡಿಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಈ ಹಿಂದೆಯೂ ಅನೇಕರು ಈ ರೀತಿ  ಮಾಡಿ ಅಪಾಯ ಮೈಮೇಲೆ ಎಳೆದುಕೊಂಡಿದ್ದರು. ಆದರೂ ಕೆಲ ಯುವಕರಿಗಿನ್ನು ಬುದ್ದಿ ಬಂದಂತೆ ಕಾಣುತ್ತಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಒಂದು ಲೈಕ್ಸ್, ಕಾಮೆಂಟ್‌ಗಾಗಿ ಕೆಲವರು ಹಾವು ಹಲ್ಲಿ ಮುಂತಾದ ಮೂಕ ಪ್ರಾಣಿಗಳ ಹಿಂದೆ ಬಿದ್ದು ಅವುಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಕೆಲ ತಿಂಗಳ ಹಿಂದೆ ಯುಟ್ಯೂಬ್‌ ವಿಡಿಯೋಗಾಗಿ ಹಾವನ್ನು ಹಿಡಿದು ಮನೆಯಲ್ಲಿ ಇರಿಸಿಕೊಂಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಅಸ್ಸಾಂನಿಂದ ವರದಿಯಾಗಿತ್ತು. ಇದೇ ರೀತಿಯ ಹಲವು ಘಟನೆಗಳು ನಡೆಯುತ್ತಲೇ ಇವೆ.  ಅದೇ ರೀತಿ ಈಗ ಯುವಕನೋರ್ವ ಹಾವಿನ ಹೆಡೆಗೆ ಹಿಂದಿನಿಂದ ಮುತ್ತಿಕ್ಕಿದ್ದು, ಇದರ ವೀಡಿಯೋ ಈಗ  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗೆಳೆಯರ ಜೊತೆ ಟ್ರಿಪ್ ಹೋಗಿದ್ದ ಬೆಂಗಳೂರು ನಿವಾಸಿ ಗೋವಾ ನೈಟ್ ಕ್ಲಬ್ ದುರಂತದಲ್ಲಿ ಮೃತ
PUBG ಗೇಮ್​ನಿಂದ 6ನೇ ಮಗುವಿನತ್ತ ಪಯಣ: ಅಕ್ರಮವಾಗಿ ಭಾರತಕ್ಕೆ ಬಂದಿದ್ದಾಕೆ ಮತ್ತೊಮ್ಮೆ ಗರ್ಭಿಣಿ!