
ದೆಹಲಿ(ಡಿ.13) ಖಲಿಸ್ತಾನಿ ಉಗ್ರರ ದಾಳಿ ಎಚ್ಚರಿಕೆ ಬೆನ್ನಲ್ಲೇ ಲೋಕಸಭೆಯಲ್ಲಿ ಆತಂಕದ ವಾತಾರವಣ ಸೃಷ್ಟಿಯಾಗಿದೆ. ದೆಹಲಿ ಸಂಸತ್ ಭವನದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದ ನಡುವೆ ಭಾರಿ ಭದ್ರತಾ ವೈಫಲ್ಯ ನಡೆದಿದೆ. ಇಬ್ಬರು ಅಪರಿಚಿತರು ಸಂಸತ್ ಭವನಕ್ಕೆ ನುಗ್ಗಿ ದಾಳಿ ಮಾಡಿದ್ದಾರೆ. ಪ್ರೇಕ್ಷಕರ ಗ್ಯಾಲರಿಯಿಂದ ನುಗ್ಗಿದ ಇಬ್ಬರು ಅಪರಿಚಿತರು ಸದನದ ಒಳಗ್ಗೆ ನುಗ್ಗಿ ಟಿಯರ್ ಗ್ಯಾಸ್ ದಾಳಿ ನಡೆಸಿದ್ದರೆ. ಈ ಘಟನೆ ಸಂಬಂಧ ಯುವಕ ಹಾಗೂ ಯುವತತಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
2001ರಲ್ಲಿ ಸಂಸತ್ ಭವನದ ಮೇಲೆ ಉಗ್ರರ ದಾಳಿ ನಡೆದಿತ್ತು. 22ನೇ ವರ್ಷಾಚಣೆ ದಿನವೇ ಈ ದಾಳಿ ನಡೆದಿದೆ. ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಪಡೆದು ಪ್ರೇಕ್ಷಕರಾಗಿ ಸದನದ ಒಳಗೆ ಪ್ರವೇಶಿಸಿದ್ದರು. ಮೈಸೂರಿನವರು ಎಂದು ಪಾಸ್ ಪಡೆದುಕೊಂಡಿದ್ದರು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಇಬ್ಬರು ಅಪರಿಚಿತರು ಏಕಾಏಕಿ ಪ್ರೇಕ್ಷಕರ ಗ್ಯಾಲರಿಯಿಂದ ಸದನದೊಳಗ್ಗೆ ನುಗ್ಗಿ ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ. ಸ್ಪೀಕರ್ ಮುಂದಿರುವ 5ನೇ ಸಾಲಿನವರೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಸಾಗರ್ ಎಂಬ ಹೆಸರಿನಲ್ಲಿ ಪಾಸ್ ಪಡೆದಿದ್ದ ಅಮೀನ್ ಅನ್ನೋ ಯುವಕ ಹಾಗೂ ಕೌರ್ ಅನ್ನೋ ಯುವತಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದಾರೆ. ಸಾಗರ್ ಎಂಬ ಹೆಸರಿನಲ್ಲಿ ಪಾಸ್ ಪಡೆದಿದ್ದ ಅಮೀನ್ ಅನ್ನೋ ಯುವಕ ಹಾಗೂ ಕೌರ್ ಅನ್ನೋ ಯುವತಿ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದಾರೆ.
ವಿಧಾನಸೌಧ ಬಜೆಟ್ ಅಧಿವೇಶನದಲ್ಲಿ ಕುಳಿತ ಅನಾಮಿಕ ವ್ಯಕ್ತಿ: 15 ನಿಮಿಷವಾದರೂ ಗೊತ್ತಾಗಿಲ್ಲ
ಅಧಿವೇಶನ ನಡೆಯುತ್ತಿರುವ ನಡುವೆ ಸದನದೊಳಗೆ ನುಗ್ಗಿದ ಇಬ್ಬರು ಅಪರಿಚಿತರು ದಾಳಿ ನಡೆಸಿರುವುದು ಭಾರಿ ಆತಂಕ ಸೃಷ್ಟಿಸಿದೆ. ಈ ದಾಳಿಯಿಂದ ಅಧಿವೇಶನ ಮುಂದೂಡಲಾಗಿದೆ. ಇದೀಗ ಈ ದಾಳಿ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಸಂಸತ್ ಭವನದ ಮೇಲೆ ದಾಳಿ ನಡೆಸುವ ಎಚ್ಚರಿಕೆ ನೀಡಿದ್ದರು. ಡಿಸೆಂಬರ್ 13 ರಂದು ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದ. ಇದೀಗ ಡಿಸೆಂಬರ್ 13ರಂದೇ ಇಬ್ಬರು ಟಿಯರ್ ಗ್ಯಾಸ್ ದಾಳಿ ನಡೆಸಿದ್ದಾರೆ.
2001 ಡಿಸೆಂಬರ್ 13 ರಂದು ಸಂಸತ್ ಭವನದ ಮೇಲೆ ಭೀಕರ ಭಯೋತ್ಪಾದಕರ ದಾಳಿ ನಡೆದಿತ್ತು. ಐವರು ಉಗ್ರರು ಗುಂಡಿನ ದಾಳಿ ನಡೆಸುತ್ತಾ ಸಂಸತ್ ಭವನದ ಮೇಲೆ ದಾಳಿ ನಡೆಸಿದ್ದರು. ಲಷ್ಕರ್ ಇ ತೊಯ್ಬಾ ಹಾಗೂ ಜೈಷ್ ಎ ಮೊಹಮ್ಮದ್ ಸಂಘಟನೆ ಭಯೋತ್ಪಾದರು ದಾಳಿ ನಡೆಸಿದ್ದರು. ಲೋಕಸಭೆ ಹಾಗೂ ರಾಜ್ಯಸಭೆ ಕಲಾಪ 40 ನಿಮಿಷ ಮುಂದೂಡಲಾಗಿತ್ತು.
ಪ್ರಧಾನಿ ಮೋದಿಗೆ ಭಾರಿ ಭದ್ರತಾ ಲೋಪ: 7 ಪೊಲೀಸರ ಅಮಾನತು ಮಾಡಿದ ಸರ್ಕಾರ
ಕಾರಿನ ಮೂಲಕ ಸಂಸತ್ ಭವನ ಪ್ರವೇಶಿಸಿದ ಉಗ್ರರು ಗುಂಡಿನ ದಾಳಿ ಆರಂಭಿಸಿದ್ದರು. ಸಂಸತ್ ಭವನದ ಭದ್ರತಾ ಸಿಬ್ಬಂದಿ ಈ ದಾಳಿಯನ್ನು ಎದುರಿಸಿದ್ದರು. ಭೀಕರ ಗುಂಡಿನ ಕಾಳಗ ನಡೆದಿತ್ತು. ಈ ದಾಳಿಯಲ್ಲಿ 7 ಪೊಲೀಸರು, ಇಬ್ಬರು ಸಂಸತ್ ಭದ್ರತಾ ಸಿಬ್ಬಂದಿ ಹಾಗೂ ಓರ್ವ ಕಾರ್ಮಿಕ ಮೃತಪಟ್ಟಿದ್ದರು. ಭದ್ರತಾ ಸಿಬ್ಬಂದಿಗಳು, ಪೊಲೀಸರ ಪ್ರತಿದಾಳಿಯಲ್ಲಿ ಐವರು ಭಯೋತ್ಪಾದಕರು ಹತ್ಯೆಯಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ