ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ ಬಾಲಕ, ಹುಬ್ಬಳ್ಳಿ ರೋಡ್‌ಶೋ ವೇಳೆ ಭದ್ರತಾ ವೈಫಲ್ಯ!

Published : Jan 12, 2023, 06:33 PM ISTUpdated : Jan 12, 2023, 06:47 PM IST
ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ ಬಾಲಕ, ಹುಬ್ಬಳ್ಳಿ ರೋಡ್‌ಶೋ ವೇಳೆ ಭದ್ರತಾ ವೈಫಲ್ಯ!

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಯ ರೋಡ್‌ಶೋ ವೇಳೆ ಭದ್ರತಾ ವೈಫಲ್ಯ ನಡೆದಿದೆ. ಕಾರಿನ ಮೂಲಕ ಸಾಗುತ್ತಿದ್ದ ಮೋದಿಗೆ ಹಾರ ಹಾಕಲು ಬಾಲಕನೋರ್ವ ಬ್ಯಾರಿಕೇಡ್ ಹಾರಿ ಬಂದ ಘಟನ ನಡೆದಿದೆ. ಬಾಲಕನಿಂದ ಮೋದಿ ಹಾರಪಡೆದರೆ, ಇತ್ತ ಬಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  

ಹುಬ್ಬಳ್ಳಿ(ಜ.12): ಯುಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಯುವಸಮೂಹಕ್ಕೆ ವಿವೇಕಾನಂದರ ಸಂದೇಶ ಸಾರಿದರು. ಆದರೆ ಈ ಕಾರ್ಯಕ್ರಮಕ್ಕೂ ಮೊದಲು ಮೋದಿ ರೋಡ್‌ಶೋ ಮೂಲಕ ಹುಬ್ಬಳ್ಳಿಯ ರೈಲ್ವೇ ಮೈದಾನಕ್ಕೆ ಆಗಮಿಸಿದ್ದರು. ಈ ವೇಳೆ ಭದ್ರತಾ ವೈಫಲ್ಯವಾಗಿದೆ. ಮೋದಿ ಕಾರಿನ ಬಾಗಿಲ ಬಳಿ ನಿಂತು ರಸ್ತೆ ಬದಿಯಲ್ಲಿ ನಿಂತಿದ್ದ ಜನರತ್ತ ಕೈಬೀಸುತ್ತಾ ಸಾಗಿದ್ದಾರೆ. ಇದೇ ವೇಳೆ ಬ್ಯಾರಿಕೇಡ್ ಹಾರಿ ಬಂದ 11 ವರ್ಷದ ಬಾಲಕ ಪ್ರಧಾನಿ ಮೋದಿಗೆ ಹಾರ ಹಾಕಲು ಮುಂದಾಗಿದ್ದಾನೆ. ಇದೇ ವೇಳೆ ಮೋದಿ ಭದ್ರತಾ ಸಿಬ್ಬಂದಿಗಳು ತಡೆದಿದ್ದಾರೆ. ಇತ್ತ ಮೋದಿ ಬಾಲಕನಿಂದ ಹಾರ ಪಡೆದರು. ಆದರೆ ಪೊಲೀಸರು ಬಾಲಕನ ವಶಕ್ಕೆ ಪಡೆದಿದ್ದಾರೆ. 

11 ವರ್ಷದ ಬಾಲಕ ಕುನಾಲ್ ಸುರೇಶ್ ಇದೀಗ ಪೊಲೀಸರ ವಿಚಾರಣೆ ಎದುರಿಸುತ್ತಿದ್ದಾರೆ. ಬಾಲಕನ ಜೊತೆಗೆ ಪೋಷಕರನ್ನೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ರೋಡ್ ಶೋ ನಡುವೆ ಈ ಘಟನೆ ನಡೆದಿರುವುದು ಇದೀಗ ಪೊಲೀಸರ ಭದ್ರತೆ ಕುರಿತು ಚರ್ಚೆಯಾಗುತ್ತಿದೆ. ರಸ್ತೆಯ ಇಕ್ಕೆಲಗಳಲ್ಲಿ ಪೊಲೀಸರ ನಿಯೋಜನೆ ಮಾಡಿದ್ದರೂ ಬಾಲಕ ಬ್ಯಾರಿಕೇಡ್ ಹಾರಿ ಬಂದಿದ್ದಾನೆ.

ಯುವ ಸಮೂಹಕ್ಕೆ ಕನ್ನಡದಲ್ಲೇ ಮೋದಿ ಸಂದೇಶ, ಹುಬ್ಬಳ್ಳಿ ಯವಜನೋತ್ಸವದಲ್ಲಿ ಪ್ರಧಾನಿ ಭಾಷಣ!

ಹೂವಿ ಹಾರ ಹಿಡಿದು ಮೋದಿಯತ್ತ ಓಡೋಡಿ ಬರುತ್ತಿರುವ ದೃಶ್ಯ ಸೆರೆಯಾಗಿದೆ. ತಕ್ಷಣವೇ ಪ್ರಧಾನಿ ಭದ್ರತಾ ಸಿಬ್ಬಂದಿಗಳು ಬಾಲಕನ ತಡೆದಿದ್ದಾರೆ. ಇಷ್ಟೇ ಅಲ್ಲ ಬಾಲಕನ ಮೋದಿಯತ್ತ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಆದರೆ ಪ್ರಧಾನಿ ಮೋದಿ ಬಾಲಕನ ಕೈಯಲ್ಲಿದ್ದ ಹೂವಿನ ಹಾರ ಪಡೆದರು. ಈ ದೃಶ್ಯ ವೈರಲ್ ಆಗಿದೆ. ಪ್ರಧಾನಿ ಭದ್ರತಾ ಅಧಿಕಾರಿಗಳು ಬಾಲಕನ ತಡೆದ ತಕ್ಷಣವೇ ಪೊಲೀಸರು ಬಾಲಕನ ವಶಕ್ಕೆ ಪಡೆದರು. 

ರೋಡ್ ಶೋನಲ್ಲಿ ಪ್ರಧಾನಿ ಮೋದಿ ಜನರ ಪ್ರೀತಿಗೆ ಧನ್ಯವಾದ ಅರ್ಪಿಸಿದರು. ಮೋದಿ ಸಾಗಿದ 8 ಕಿಲೋಮೀಟರ್ ರಸ್ತೆಯ ಎರಡೂ ಬದಿಗಳಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಇದರಿಂದ ಪೊಲೀಸರಿಗೆ ಜನರನ್ನು ನಿಯಂತ್ರಿಸುವುದು ಹರಸಾಹಸವಾಗಿತ್ತು. ಎರಡು ಕಡೆ ಮೋದಿ ಕಾರು ನಿಲ್ಲಿಸಿ ಜನರತ್ತ ತೆರಳಿದರು. ಜನರಿಗೆ ಕೈಬೀಸಿ ಧನ್ಯವಾದ ಅರ್ಪಿಸಿದರು. ಮೋದಿ ಮೋದಿ ಜಯಘೋಷಗಳು, ಮೋದಿ ಭಾವಚಿತ್ರ, ಪೈಟಿಂಗ್ಸ್ ಎಲ್ಲೆಡೆ ರಾರಾಜಿಸುತಿತ್ತು.

ಅಭಿಮಾನಿಗಳಿಂದ ಹೂಮಳೆಯ ಸ್ವಾಗತ, ಹುಬ್ಬಳ್ಳಿ ಜನರ ಪ್ರೀತಿಗೆ ಮೋದಿ ಪುಳಕ!

8 ಕಿಲೋಮೀಟರ್ ಪ್ರಧಾನಿ ಮೋದಿ ರೋಡ್ ಶೋ ನಡೆಸಿದರು. ಬಳಿಕ ಹುಬ್ಬಳ್ಳಿ ರೈಲ್ವೇ ಮೈದಾನಕ್ಕೆ ಆಗಮಿಸಿದ ಮೋದಿ, 26ನೇ ಯುವಜನೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ, ಮೂರು ಸಾವಿರ ಮಠ, ಸಿದ್ದಾರೂಢಮಠ ಇಂತಹ  ಅನೇಕ ಮಠಗಳ ಕ್ಷೇತ್ರಕ್ಕೆ ನನ್ನ ನಮಸ್ಕಾರಗಳು. ಇದು ರಾಣಿ ಚನ್ನಮ್ಮನ ನಾಡು, ರಾಯಣ್ಣನ ಬೀಡು ಎಂದರು. ಇನ್ನು ಕರ್ನಾಟಕದ ಈ ಭಾಗ ಸಂಸ್ಕೃತಿ, ಜ್ಞಾನಕ್ಕೆ ಹೆಸರುವಾಸಿಯಾಗಿದೆ.  ಪಂಡಿತ ಕುಮಾರ ಗಂದರ್ಭ, ಪಂಡಿತ್ ಬಸವರಾಜ ರಾಜಗೂರು, ಪಂಡಿತ ಮಲ್ಲಿಕಾರ್ಜುನ್ ಮನ್ಸೂರ್, ಭೀಮಸೇನ್ ಜೋಶಿ ಗಂಗೂಬಾಯಿ ಹಾನಗಲ್ ಅವರಿಗೆ ನನ್ನ ನಮನಗಳು ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದರು. 

ಇನ್ನು ಸ್ವಾಮಿ ವಿವೇಕಾನಂದರ ಜಯಂತಿ ಉತ್ಸವದಲ್ಲಿ ಇತ್ತೀಚೆಗೆ ಅಗಲಿದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮಿಜಿಗಳಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. ಇದು ಸಂತರ, ಸಂಗೀತಜ್ಞರನ್ನು, ಜ್ಞಾನಪೀಠ ಪುರಸ್ಕೃತರನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು,  ವೀರ ಯೋಧರ ನೀಡಿದ ನಾಡಿದು ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?