Good News: ಫೆ.4 ರಿಂದ ಹುಬ್ಬಳ್ಳಿ- ಪುಣೆ ವಿಮಾನ ಸೇವೆ ಆರಂಭ: ವಾರಕ್ಕೆರಡು ಬಾರಿ ಸಂಚಾರ

Published : Jan 12, 2023, 06:21 PM IST
Good News: ಫೆ.4 ರಿಂದ ಹುಬ್ಬಳ್ಳಿ- ಪುಣೆ ವಿಮಾನ ಸೇವೆ ಆರಂಭ: ವಾರಕ್ಕೆರಡು ಬಾರಿ ಸಂಚಾರ

ಸಾರಾಂಶ

ಕೇಂದ್ರ ಸರ್ಕಾರದ ವಿಮಾನಯಾನ ಸಂಸ್ಥೆಯು ನಾಡಿನ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಜನತೆಗೆ ಹೊಸ ವರ್ಷದ ಭಾರಿ ಕೊಡುಗೆಯೊಂದನ್ನು ನೀಡಿದೆ. ಹುಬ್ಬಳ್ಳಿಯಿಂದ ಪುಣೆಗೆ ಹೋಗುವವರಿಗೆ ಅನುಕೂಲ ಆಗುವಂತೆ ಫೆಬ್ರವರಿ 4ರಿಂದ ಹುಬ್ಬಳ್ಳಿ-ಪುಣೆ ನೇರವಾಗಿ ವಿಮಾನಯಾನ ಸೇವೆಯನ್ನು ಇಂಡಿಗೋ ಸಂಸ್ಥೆ ಒದಗಿಸಲು ಮುಂದಾಗಿದೆ.

ಹುಬ್ಬಳ್ಳಿ (ಜ.12): ಕೇಂದ್ರ ಸರ್ಕಾರದ ವಿಮಾನಯಾನ ಸಂಸ್ಥೆಯು ನಾಡಿನ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿ ಜನತೆಗೆ ಹೊಸ ವರ್ಷದ ಭಾರಿ ಕೊಡುಗೆಯೊಂದನ್ನು ನೀಡಿದೆ. ಹುಬ್ಬಳ್ಳಿಯಿಂದ ಪುಣೆಗೆ ಹೋಗುವವರಿಗೆ ಅನುಕೂಲ ಆಗುವಂತೆ ಫೆಬ್ರವರಿ 4ರಿಂದ ಹುಬ್ಬಳ್ಳಿ-ಪುಣೆ ನೇರವಾಗಿ ವಿಮಾನಯಾನ ಸೇವೆಯನ್ನು ಇಂಡಿಗೋ ಸಂಸ್ಥೆ ಒದಗಿಸಲು ಮುಂದಾಗಿದೆ. ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಅಧಿಕೃತವಾಗಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. 

ರಾಜ್ಯದಲ್ಲಿ ಹಲವು ವರ್ಷಗಳಿಂದ ಬೆಂಗಳೂರು- ಹುಬ್ಬಳ್ಳಿಗೆ ವಿಮಾನದ ಮೂಲಕ ಪ್ರಯಾಣ ಸೇವೆಯನ್ನು ಆರಂಭಿಸಲಾಗಿತ್ತು. ಇದರಿಂದ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಉದ್ಯೋಗಿಗಳು ಸೇರಿ ಎಲ್ಲ ವರ್ಗದವರಿಗೂ ಭಾರಿ ದೊಡ್ಡ ಪ್ರಮಾಣದಲ್ಲಿ ಅನುಕೂಲ ಆಗಿತ್ತು. ಇನ್ನು ಕಳೆದ ವರ್ಷ ನ.15 ರಂದು ಹುಬ್ಬಳ್ಳಿಯಿಂದ ನೇರವಾಗಿ ದೆಹಲಿಗೆ ವಿಮಾನಯಾನ ಸೇವೆ ಆರಂಭಿಸುವ ಮೂಲಕ ಉತ್ತರ ಕರ್ನಾಟಕ ಜನತೆಗೆ ದೊಡ್ಡ ಅನುಕೂಲವನ್ನೇ ಮಾಡಿಕೊಟ್ಟಿತ್ತು. ಈಗ ಹುಬ್ಬಳ್ಳಿಯಿಂದ 377 ಕಿ.ಮೀ. ದೂರದಲ್ಲಿರುವ ಪುಣೆ ನಗರಕ್ಕೆ ನೇರವಾಗಿ ವಿಮಾನಯಾನ ಸೇವೆಯನ್ನು ಆರಂಭಿಸಲಾಗುತ್ತಿದೆ.

Flight Rules : ಗಗನಸಖಿಯರ ಆಕರ್ಷಕ ಬ್ಯಾಗ್ ಒಳಹೊಕ್ಕಿ ನೋಡಿದಾಗ…

ಹುಬ್ಬಳ್ಳಿ ಪ್ರಯಾಣಿಕರಿಗೆ ಅನುಕೂಲ: ಈ ಬಗ್ಗೆ ಅಧಿಕೃತ ಮಾಹಿತಿಯನ್ನು ಹಂಚಿಕೊಮಡಿರುವ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು, ಹೊಸ ವರ್ಷದ ಹರ್ಷ ಹೆಚ್ಚಿಸಿಲು ಖುಷಿಯ ಸುದ್ದಿಯೊಂದು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಫೆಬ್ರವರಿ 4, 2023ರಿಂದ ಪುಣೆಗೆ  ಹುಬ್ಬಳ್ಳಿಯಿಂದ ನೇರ ವಿಮಾನ ಸೇವೆ ಆರಂಭವಾಗಲಿದೆ. ಇಂಡಿಗೋ ಸಂಸ್ಥೆಯ (IndiGo6E) ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಈ ಸೇವೆ ಆರಂಭಿಸುವ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಂದರ್ಭದಲ್ಲಿ ನಾನು  ಕೇಂದ್ರ ನಾಗರಿಕ ವಿಮಾನಯಾನ ಸಚಿವರಾದ ಶ್ರೀ ಜ್ಯೋತಿರಾದಿತ್ಯ ಎಂ ಸಿಂಧಿಯಾ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಈ ಸೇವೆಯಿಂದ ಹುಬ್ಬಳ್ಳಿ - ಧಾರವಾಡದಿಂದ ಪುಣೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿದಿದ್ದಾರೆ. 

ವಾರಕ್ಕೆ ಎರಡು ಬಾರಿ ಸೇವೆ ಆರಂಭ: ಹುಬ್ಬಳ್ಳಿಯಿಂದ ಪುಣೆ ನಗರಕ್ಕೆ ಆರಂಭದಲ್ಲಿ ವಾರಕ್ಕೆ ಎರಡು ಬಾರಿ ಮಾತ್ರ ವಿಮಾನಯಾನ  ಸೇವೆ ಲಭ್ಯವಿರಲಿದೆ.  ಪ್ರತಿ ಶನಿವಾರ ಹಾಗೂ ಭಾನುವಾರ ಈ ಕೆಳಗಿನಂತೆ ವಿಮಾನ ಹಾರಾಟ ನಡೆಸಲಿವೆ.  ಪ್ರತಿ ಶನಿವಾರ ಮತ್ತು ಭಾನುವಾರ ಹುಬ್ಬಳ್ಳಿಯಿಂದ  ಸಂಜೆ 6.30ಕ್ಕೆ  6ಇ 7727 ವಿಮಾನ ಹೊರಡಲಿದ್ದು ಸಂಜೆ 7.40ಕ್ಕೆ ಪುಣೆ ನಗರವನ್ನು (6E 7727 HBX PNQ 18:30 19:40) ತಲುಪಲಿದೆ. ಇನ್ನು ಪುಣೆಯಿಂದ ರಾತ್ರಿ 8 ಗಂಟೆಗೆ ಹೊರಡುವ 6ಇ 7716 ವಿಮಾನ ರಾತ್ರಿ 9.10 ಗಂಟೆಗೆ ಹುಬ್ಬಳ್ಳಿ ನಗರವನ್ನು (6E 7716 PNQ HBX 20:00 21:10) ತಲುಪಲಿದೆ. 

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ಮಾಡಿದ್ದು ಓರ್ವ ಉದ್ಯಮಿ...!

ಟಿಕೆಟ್‌ ಬುಕಿಂಗ್‌ ಸೇವೆಯೂ ಆರಂಭ:  ಇನ್ನು ಇಂಡಿಗೋ ವಿಮಾನಯಾನ ಸಂಸ್ಥೆಯಿಂದ ಹುಬ್ಬಳ್ಳಿ-ಪುಣೆ ನಗರಗಳ ನಡುವಿನ ವಿಮಾನಯಾನ ಸೇವೆಯನ್ನು ನೀಡುವ ಕುರಿತು ಅಧಿಕೃತವಾಗಿ ವೆಬ್‌ಸೈಟ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ. ಜೊತೆಗೆ, ವಿಮಾನದಲ್ಲಿ ಈ ನಗರಗಳ ನಡುವೆ ಪ್ರಯಾಣ ಮಾಡಲು ಟಿಕೆಟ್‌ ಬುಕಿಂಗ್‌ ಸೇವೆಯನ್ನೂ ಆರಂಭಿಸಿದೆ. 3,686ರೂ. ದರವನ್ನು ಒಂದು ಸೈಡ್‌ ಪ್ರಯಾಣಕ್ಕೆ ನಿಗದಿಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!