ರಾಷ್ಟ್ರಪತಿ ಮುರ್ಮು ಪಾದ ಮುಟ್ಟಿ ನಮಸ್ಕರಿಸಲು ಯತ್ನಿಸಿದ ಎಂಜಿನಿಯರ್ ಸಸ್ಪೆಂಡ್!

By Suvarna NewsFirst Published Jan 14, 2023, 5:17 PM IST
Highlights

ಹೆಲಿಕಾಪ್ಟರ್ ಮೂಲಕ ಬಂದಿಳಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸುವ ವೇಳೆ ಪಾದ ಮುಟ್ಟಿ ನಮಸ್ಕರಿಸಲು ಯತ್ನಿಸಿದ ಜ್ಯೂನಿಯರ್ ಎಂಜಿನಿಯರ್‌ನನ್ನು ಅಮಾನತು ಮಾಡಲಾಗಿದೆ.

ಜೈಪುರ(ಜ.14): ಸ್ಕೌಟ್ ಅಂಡ್ ಗೈಡ್ ಕಾರ್ಯಕ್ರಮಕ್ಕಾಗಿ ರಾಜಸ್ಥಾನದ ರೊಹೆಟ್ ಜಿಲ್ಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವಾಗತಿಸುವ ವೇಳೆ ಎಂಜಿನಿಯರ್ ಪಾದ ಮುಟ್ಟಿ ನಮಸ್ಕರಿಸುವ ಯತ್ನ ಮಾಡಿದ್ದರು. ಇದೀಗ ಈ ಸಾಹಸ ಮಾಡಿದ ಎಂಜಿನೀಯರನ್ನು ರಾಜಸ್ಥಾನ ಸರ್ಕಾರ ಅಮಾನತು ಮಾಡಿದೆ.  ಪ್ರಧಾನಿ, ರಾಷ್ಟ್ರಪತಿ, ರಾಜ್ಯಪಾಲರು ಸೇರಿದಂತೆ ಪ್ರಮುಖ ಸ್ಥಾನದಲ್ಲಿರುವ ಗಣ್ಯವ್ಯಕ್ತಿಗಳು ಆಗಮಿಸುವಾಗ ಅಥವಾ ಅವರ ಬಳಿ ತೆರಳಿದಾಗ ಕೆಲ ನಿಯಮಗಳನ್ನು ಪಾಲಿಸಬೇಕು. ಈ ವೇಳೆ ಗೌರವ ಸೂಚಕವಾಗಿ ಅಥವಾ ಅಭಿಮಾನದಿಂದ ನಿಯಮ ಮೀರಿದರೆ ದುಬಾರಿ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ರೊಹೆಟ್ ಜಿಲ್ಲೆಯಲ್ಲಿ ನಡೆದ ಈ ಘಟನೆಯೇ ಸಾಕ್ಷಿಯಾಗಿದೆ.

ಜನವರಿ 4 ರಂದು ದ್ರೌಪದಿ ಮುರ್ಮು ರೊಹೆಟ್ ಜಿಲ್ಲೆಗೆ ಆಗಮಿಸಿದ್ದರು. ಸ್ಕೌಡ್ ಅಂಡ್ ಗೈಡ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು. ಹೆಲಿಕಾಪ್ಟರ್ ಮೂಲಕ ಪಾಲಿಗೆ ಆಗಮಿಸಿದ ದ್ರೌಪದಿ ಮುರ್ಮು ಸ್ವಾಗತಿಸಲು ಕೆಲ ನಾಯಕರು, ಅಧಿಕಾರಿಗಳು ಹೆಲಿಪ್ಯಾಡ್‌ನಲ್ಲಿ ಹಾಜರಿದ್ದರು. ಈ ವೇಳೆ ಪಬ್ಲಿಕ್ ಹೆಲ್ತ್ ಎಂಜಿನೀಯರಿಂಗ್ ವಿಭಾಗದ ಮಹಿಳಾ ಜ್ಯೂನಿಯರ್ ಎಂಜಿನೀಯರ್ ಅಂಬಾ ಸಿಯೋಲ್ ಕೂಡ ಹೆಲಿಪ್ಯಾಡ್‌ನಲ್ಲಿ ಹಾಜರಿದ್ದರು.

ಬ್ಯಾರಿಕೇಡ್ ಹಾರಿ ಮೋದಿ ಕಾರಿನತ್ತ ನುಗ್ಗಿದ ಬಾಲಕ, ಹುಬ್ಬಳ್ಳಿ ರೋಡ್‌ಶೋ ವೇಳೆ ಭದ್ರತಾ ವೈಫಲ್ಯ!

ಹೆಲಿಕಾಪ್ಟರ್‌ನಿಂದ ಇಳಿದ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಸ್ವಾಗತಕ್ಕಾಗಿ ನಿಂತಿದ್ದ ನಾಯಕರು, ಅಧಿಕಾರಿಗಳು ಶಿಷ್ಠಾಚಾರ ಪ್ರಕಾರ ಸ್ವಾಗತ ಕೋರಿದ್ದರು. ಆದರೆ ಮಹಿಳಾ ರಾಷ್ಟ್ರಪತಿಯನ್ನು ನೋಡಿದ ಎಂಜಿನೀಯರ್ ಅಂಬಾ ಸಿಯೋಲ್ ಅಭಿಮಾನದಿಂದ ಪಾದ ಮುಟ್ಟಿ ನಮಸ್ಕರಿಸಲು ಯತ್ನಿಸಿದರು. ಈ ವೇಳೆ ದ್ರೌಪದಿ ಮುರ್ಮು ಭದ್ರತಾ ಸಿಬ್ಬಂದಿಗಳು ಎಂಜಿನಿಯರ್ ಪ್ರಯತ್ನವನ್ನು ತಡೆದಿದ್ದರು. 

ರಾಷ್ಟ್ರಪತಿ ದ್ರೌಪದಿ ಮುರ್ಮುಗೂ ಈ ಘಟನೆ ಇರಿಸು ಮುರಿಸು ತಂದಿತ್ತು. ಸಾವರಿಸಿಕೊಂಡ ಮಹಿಳಾ ಎಂಜಿನಿಯರ್ , ಮುರ್ಮು ಸ್ವಾಗತಿಸಿದರು. ಆದರೆ ಇದು ಭದ್ರತಾ ವೈಫಲ್ಯ ಎಂದು ಪರಿಗಣನೆಯಾಗಿತ್ತು. ನಿಯಮ 342 ಹಾಗೂ 958ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಧಾನಿ, ರಾಷ್ಟ್ರಪತಿಗಳು ಯಾವುದೇ ಸ್ಥಳಕ್ಕೆ ಆಗಮಿಸಿದ ವೇಳೆ ನಿಯಮ ಮೀರಿ ವರ್ತಿಸುವಂತಿಲ್ಲ. ಹೆಚ್ಚು ಹತ್ತಿರ ಹೋಗಿ ಸ್ವಾಗತಿಸುವಂತಿಲ್ಲ. ಹೀಗಾಗಿ ಎಂಜಿನೀಯರ್ ಸ್ವಾಗತ ನಿಯಮಕ್ಕೆ ವಿರುದ್ಧವಾಗಿತ್ತು. 

ಈ ಪ್ರಕರಣದ ವಿಚಾರಣೆ ನಡೆಸಿದ ರಾಜಸ್ಥಾನ ಸರ್ಕಾರ ಮಹಿಳಾ ಎಂಜಿನೀಯರ್‌ನ್ನು ಅಮಾನತು ಮಾಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಅಂಬಾ ಸಿಯೋಲ್ ಅವರನ್ನು ಅಮಾನತು ಮಾಡಲಾಗಿದೆ ಎಂದು ಆದೇಶ ಹೊರಡಿಸಿದೆ.

ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ ಕೇಸ್‌: ಫಿರೋಜ್‌ಪುರ ಎಸ್‌ಎಸ್‌ಪಿಗೆ ಸುಪ್ರೀಂ ಕೋರ್ಟ್‌ ತರಾಟೆ

ಪ್ರಧಾನಿ ಮೋದಿ ಹುಬ್ಬಳ್ಳಿ ಭೇಟಿ ವೇಳೆ ಭದ್ರತಾ ಲೋಪ
ಯುವಜನೋತ್ಸವ ಕಾರ್ಯಕ್ರಮಕ್ಕಾಗಿ ಹುಬ್ಬಳ್ಳಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರೋಡ್ ಶೋ ಮೂಲಕ ಕಾರ್ಯಕ್ರಮದತ್ತ ಸಾಗಿದ್ದರು ವೇಳೆ 10 ವರ್ಷದ ಬಾಲಕನೊಬ್ಬ ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಕ್ವಾರ್ಟಸ್‌ ಮುಂಭಾಗದಲ್ಲಿ ಭದ್ರತಾ ಬ್ಯಾರಿಕೇಡ್‌ ನಿಂದ ಜಿಗಿದು ಮೋದಿಗೆ ಹಾರ ಹಾಕಲು ತೆರಳಿದ ಘಟನೆ ನಡೆಯಿತು. ಇದೇ ವೇಳೆ ಸ್ಥಳದಲ್ಲಿದ್ದ ಎಸ್‌ಪಿಜಿ ಬಾಲಕನನ್ನು ತಡೆದರು. ಇಷ್ಟಾಗಿಯೂ ಬಾಲಕನ ಸಾಹಸ ನೋಡಿ ಸ್ವತಃ ಪ್ರಧಾನಿಗಳೇ ಕಾರಿನಿಂದಲೇ ಹಾರ ಸ್ವೀಕರಿಸಿ, ಅಂಗರಕ್ಷಕರ ಮೂಲಕ ಅದನ್ನು ಕಾರಿಗೆ ಹಾಕಿಸಿದರು. ಬಾಲಕನನ್ನು ಹುಬ್ಬಳ್ಳಿಯ ತೊರವಿಹಕ್ಕಲದ ಕುನಾಲ್‌ ಸುರೇಶ ಎಂದು ಗುರುತಿಸಲಾಗಿದೆ. ಆದರೆ, ಈ ಘಟನೆಯಿಂದಾಗಿ ಪ್ರಧಾನಿ ಅವರ ಭದ್ರತೆಯಲ್ಲಿ ಲೋಪ ವಿಚಾರವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿತ್ತು. ಬಾಲಕ ಹಾಗೂ ಆತನ ಪೋಷಕರನ್ನು ವಿಚಾರಣೆ ನೆಡಸಲಾಗಿದೆ.

click me!