
ನವದೆಹಲಿ(ಅ.19): ಮೂರು ವಾರಗಳಿಂದ ದೇಶದಲ್ಲಿ ಒಟ್ಟಾರೆ ಕೊರೋನಾ ಸೋಂಕಿತರು ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರಬಹುದು. ಆದರೆ ಚಳಿಗಾಲದಲ್ಲಿ ಕೊರೋನಾ ವೈರಸ್‌ನ ಎರಡನೇ ಅಲೆಯನ್ನು ತಳ್ಳಿ ಹಾಕಲಾಗದು ಎಂದು ನೀತಿ ಆಯೋಗದ ಸದಸ್ಯರೂ ಆಗಿರುವ ಕೊರೋನಾ ನಿರ್ವಹಣೆ ಸಮನ್ವಯ ಸಮಿತಿಯ ಮುಖ್ಯಸ್ಥ ವಿ.ಕೆ. ಪೌಲ್ ಹೇಳಿದ್ದಾರೆ.
ಯುರೋಪ್‌ನಲ್ಲಿ ಚಳಿಗಾಲದಲ್ಲಿ ಕೊರೋನಾ ಪ್ರಕರಣ ಹೆಚ್ಚಾಗಿವೆ. ಭಾರತದಲ್ಲೂ ಅದೇ ರೀತಿ ಆಗುವ ಸಾಧ್ಯತೆ ಇಲ್ಲ ಎಂದು ಹೇಳಲಾಗದು. ಅದು ಆಗಲೂಬಹುದು. ವೈರಸ್ ಕುರಿತು ನಾವಿನ್ನೂ ಕಲಿಕಾ ಹಂತದಲ್ಲಿದ್ದೇವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಅವರು ತಿಳಿಸಿದ್ದಾರೆ.
ದೇಶದಲ್ಲಿ ವೈರಸ್ ಗರಿಷ್ಠಕ್ಕೇರಿ ಇಳಿಯುತ್ತಿದೆ, ನಿಯಮ ಪಾಲಿಸಿದರೆ ಫೆಬ್ರವರಿಗೆ ನಿಯಂತ್ರಣ!
ಕೊರೋನಾಗೆ ಸಂಬಂಧಿಸಿದಂತೆ ಭಾರತ ಈಗ ಏನೋ ಸುಸ್ಥಿತಿಯಲ್ಲಿರಬಹುದು. ಆದರೆ ದಾರಿ ಇನ್ನೂ ಉದ್ದವಿದೆ. ಶೇ.90ರಷ್ಟುಮಂದಿ ಕೊರೋನಾ ಸೋಂಕಿಗೆ ತುತ್ತಾಗುವ ಅಪಾಯ ಇದ್ದೇ ಇದೆ ಎಂದು ಹೇಳಿದ್ದಾರೆ.
ದೇಶದ ಹಲವು ರಾಜ್ಯಗಳಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸ್‌ಗಢ, ಪಶ್ಚಿಮ ಬಂಗಾಳದಂತಹ ಐದು ರಾಜ್ಯಗಳು, 3-4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೆಚ್ಚುತ್ತಲೆ ಇದೆ. ಕೊರೋನಾ ವಿರುದ್ಧ ಒಮ್ಮೆ ಲಸಿಕೆ ಲಭ್ಯವಾದರೆ, ಪ್ರತಿಯೊಬ್ಬರಿಗೂ ನೀಡುವುದಕ್ಕೆ ಬೇಕಾಗುವಷ್ಟುಸಂಪನ್ಮೂಲ ಲಭ್ಯವಿದೆ. ಭಾರತದಲ್ಲಿ ತಕ್ಕಮಟ್ಟಿಗೆ ಸಾಕಷ್ಟುಕೋಲ್ಡ್ ಸ್ಟೋರೇಜ್ ಸೌಲಭ್ಯ ಇದೆ. ಅಗತ್ಯಬಿದ್ದರೆ ಅದನ್ನು ಹೆಚ್ಚಳ ಮಾಡಲು ಅವಕಾಶವೂ ಇದೆ ಎಂದಿದ್ದಾರೆ.
ಕೊರೋನಾ ಲಸಿಕೆ: ಗುಡ್ ನ್ಯೂಸ್ ಕೊಟ್ಟ ಸೆರಂ ಸಂಸ್ಥೆ!
ಭೀತಿ ಯಾಕೆ?
- ಚಳಿಗಾಲದಲ್ಲಿ ವೈರಸ್ ಹೆಚ್ಚು. ಜ್ವರ ಸಾಮಾನ್ಯ. ಕೋವಿಡ್ ಕೂಡ ಹೆಚ್ಚಬಹುದು
- ಉಸಿರಾಟ ತೊಂದರೆ ಇದ್ದವರಿಗೆ ಸಮಸ್ಯೆ ಹೆಚ್ಚು. ಜತೆಗೆ, ಮಾಲಿನ್ಯವೂ ಹೆಚ್ಚಾಗಿದೆ
- ಹಬ್ಬಕ್ಕೆ ಜನರ ಓಡಾಟ ಹೆಚ್ಚಬಹುದು. 2 ತಿಂಗಳಲ್ಲಿ ಮತ್ತಷ್ಟುಅನ್‌ಲಾಕ್ ಸಾಧ್ಯತೆ
- ಬ್ರಿಟನ್‌ನಲ್ಲಿ ಚಳಿಗಾಲ ಶುರುವಾದ ಮೇಲೆ ಕೊರೋನಾ ಸೋಂಕು ಶೇ.40 ಹೆಚ್ಚಿದೆ
- ಹಿಂದೆ ಸ್ಪಾನಿಷ್, ಏಷ್ಯನ್, ಹಾಂಕಾಂಗ್ ಫä್ಲ 6 ತಿಂಗಳ ಬಳಿಕ 2ನೇ ಅಲೆ ಎದ್ದಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ