ಸೀಟ್ ನಂ. 64: ರೈಲಲ್ಲಿ ಈಶ್ವರನಿಗೂ ಒಂದು ಸೀಟು ಮೀಸಲು!

Published : Feb 17, 2020, 10:47 AM IST
ಸೀಟ್ ನಂ. 64: ರೈಲಲ್ಲಿ ಈಶ್ವರನಿಗೂ ಒಂದು ಸೀಟು ಮೀಸಲು!

ಸಾರಾಂಶ

ಪ್ರಧಾನಿ ಮೋದಿ ಅವರಿಂದ ಚಾಲನೆ ಪಡೆಯಲ್ಪಟ್ಟ ರೈಲಿನಲ್ಲಿ ಈಶ್ವರನಿಗೂ ಒಂದು ಸೀಟು ಮೀಸಲು!|| ಸೀಟ್ ನಂಬರ್ 64 ದೇವರಿಗೆ ಮೀಸಲು

ವಾರಾಣಸಿ[ಫೆ.17]: ದೇವರಿಗೂ ರೈಲಿನಲ್ಲಿ ಸೀಟು ಮೀಸಲಾ? ಹೌದು, ಭಾನುವಾರ ಪ್ರಧಾನಿ ಮೋದಿ ಅವರಿಂದ ಚಾಲನೆ ಪಡೆಯಲ್ಪಟ್ಟಮಹಾಕಾಲ್‌ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಒಂದು ಸೀಟನ್ನು ಈಶ್ವರನಿಗೆ ಮೀಸಲಿಡಲಾಗಿತ್ತು.

ಜ್ಯೋತಿರ್ಲಿಂಗ ಧಾರ್ಮಿಕ ತಾಣಗಳಾದ ಉತ್ತರಪ್ರದೇಶದ ವಾರಾಣಸಿ, ಮಧ್ಯಪ್ರದೇಶದ ಉಜ್ಜಯಿನಿ ಮತ್ತು ಓಂಕಾರೇಶ್ವರ ನಡುವೆ ಸಂಪರ್ಕ ಕಲ್ಪಿಸುವ ಮಹಾ ಕಾಲ್‌ ಎಕ್ಸ್‌ಪ್ರೆಸ್‌ ಖಾಸಗಿ ರೈಲಿನ ಕೋಚ್‌ ನಂ. ಬಿ5ರ ಸೀಟು ಸಮಖ್ಯೆ 64 ಅನ್ನು ಈಶ್ವರನಿಗೆ ಸದಾ ಕಾಲ ಕಾಯ್ದಿರಿಸಲಾಗಿತ್ತು.

ಈ ಸೀಟಿನ ಮೇಲೇ ದೇಗುಲದ ಚಿತ್ರವನ್ನು ರಚಿಸುವ ಮೂಲಕ, ಜನರಲ್ಲಿ ಸೀಟಿನ ಕುರಿತು ಅರಿವು ಮೂಡಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

UP Election: ಕಾಂಗ್ರೆಸ್‌ಗೆ ಕೈ ಕೊಡ್ತಾರಾ ಅಖಿಲೇಶ್? ಮೈತ್ರಿ ಬಿರುಕಿನ ಸ್ಟೋರಿಗೆ ರೋಚಕ ಟ್ವಿಸ್ಟ್ ಕೊಟ್ಟ ಎಸ್‌ಪಿ ಬಾಸ್!
Super El Nino: ಚಳಿಗಾಲದಲ್ಲೂ ಬಿಸಿಲು! ಭಾರತದಲ್ಲಿ 15,800 ಜನರ ಸಾವಿನ ಎಚ್ಚರಿಕೆ?