ಗಾಂಧೀಜಿ ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆಯಲ್ಲಿ 700 ಬಾಟಲಿ ಮದ್ಯ!

By Web DeskFirst Published Dec 2, 2019, 8:19 AM IST
Highlights

ಗಾಂಧೀಜಿ ಸ್ಥಾಪಿಸಿದ್ದ ಶಿಕ್ಷಣ ಸಂಸ್ಥೆಯಲ್ಲಿ 700 ಬಾಟಲಿ ಮದ್ಯ!| ಗಾಂಧೀಜಿ ಅವರು 1921ರಲ್ಲಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಶಿಕ್ಷಣ ಮತ್ತು ತತ್ವ ಸಿದ್ಧಾಂತಗಳನ್ನು ಸಾರಲು ಸ್ಥಾಪಿಸಿದ್ದ ರಾಷ್ಟ್ರೀಯ ಸಂಸ್ಥೆ 

ಅಹ್ಮದಾಬಾದ್‌[ಡಿ.02]: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಮದ್ಯಪಾನ ನಿಷೇಧಕ್ಕೆ ಆಂದೋಲನ ನಡೆಸಿದವರು. ದುರಾದೃಷ್ಟಅಂದರೆ ಗಾಂಧಿ ಅವರು ಸ್ಥಾಪಿಸಿದ್ದ ಗುಜರಾತ್‌ನಲ್ಲಿರುವ ಸಂಸ್ಥೆಯೊಂದರಲ್ಲಿ ಮದ್ಯದ ಬಾಟಲಿಗಳು ಪತ್ತೆಯಾಗಿವೆ!

ಗಾಂಧೀಜಿ ಅವರು 1921ರಲ್ಲಿ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಶಿಕ್ಷಣ ಮತ್ತು ತತ್ವ ಸಿದ್ಧಾಂತಗಳನ್ನು ಸಾರಲು ಸ್ಥಾಪಿಸಿದ್ದ ರಾಷ್ಟ್ರೀಯ ಸಂಸ್ಥೆ ಮೇಲೆ ದಾಳಿ ನಡೆಸಿದ ಪೊಲೀಸರು 700 ಮದ್ಯದ ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಇದು 5 ಲಕ್ಷ ರು. ಮೌಲ್ಯವುಳ್ಳದ್ದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜಯ್‌ ದಕ್ಸಿನಿ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಗುಜರಾತ್‌ ಸಂಪೂರ್ಣ ಮದ್ಯ ನಿಷೇಧಿತ ರಾಜ್ಯವಾಗಿದೆ. ಇಲ್ಲಿ ಮದ್ಯ ಮಾರಾಟ ಮತ್ತು ಸೇವನೆ ನಿಷಿದ್ಧ. ಆದರೂ ಗಾಂಧಿ ಅವರು ಸ್ಥಾಪಿಸಿದ್ದ ಸಂಸ್ಥೆಯಲ್ಲಿ ಮದ್ಯದ ಬಾಟಲಿಗಳು ದೊರಕಿದ್ದು, ಗಾಂಧೀಜಿ ಅವರಿಗೆ ಮಾಡಿದ ಅವಮಾನ ಎಂದು ಮುಖ್ಯಮಂತ್ರಿ ವಿಜಯ್‌ ರೂಪಾನಿ ಟೀಕಿಸಿದ್ದಾರೆ.

ಈ ಸಂಸ್ಥೆಯ ಕಾಲೋನಿಯಲ್ಲಿ ಗಾಂಧಿ ಕಾಲದಿಂದಲೂ ಹಲವಾರು ಕುಟುಂಬಗಳು ವಾಸಿಸುತ್ತಿವೆ. ಅಲ್ಲದೇ, ಇಲ್ಲಿ ವೃತ್ತಿಪರ ತರಬೇತಿಗಳಾದ ಖಾದಿ ಮತ್ತು ಹತ್ತಿ ನೇಯ್ಗೆಯನ್ನು ಕಲಿಸಲಾಗುತ್ತಿದೆ.

click me!