Latest Videos

'ಯಾವಾಗ ಆಕ್ರಮಿತ ಕಾಶ್ಮೀರವನ್ನು ಖಾಲಿ ಮಾಡ್ತೀರಿ..?' ಕಾಶ್ಮೀರ ವಿಚಾರದಲ್ಲಿ ಪಾಕ್‌ಗೆ ಜೈಶಂಕರ್‌ ಖಡಕ್‌ ವಾರ್ನಿಂಗ್‌!

By Santosh NaikFirst Published May 5, 2023, 7:53 PM IST
Highlights

ಬಹುಶಃ ಇಂಥದ್ದೊಂದು ಧೈರ್ಯ ಭಾರತದ ಯಾವ ವಿದೇಶಾಂಗ ಸಚಿವರೂ ಮಾಡಿದ್ದಿಲ್ಲ. ಪಾಕಿಸ್ತಾನದ ವಿದೇಶಾಂಗ ಸಚಿವರ ಮುಂದೆಯೇ ನಿಮ್ಮ ದೇಶ ಭಯೋತ್ಪಾದನೆಯನ್ನು ಪ್ರೀತಿಸುವ ರಾಷ್ಟ್ರ. ಭಯೋತ್ಪಾದನೆ ಬಗ್ಗೆ ನಿಮ್ಮ ಜೊತೆ ಮಾತನಾಡುವ ಅಗತ್ಯವಿಲ್ಲ ಎಂದು ಜೈಶಂಕರ್‌ ಹೇಳುವಾಗ ಅವರ ಬಗ್ಗೆ ಹೆಮ್ಮೆ ಮೂಡುವುದು ಖಂಡಿತ.

ನವದೆಹಲಿ (ಮೇ.5): 'ಜಮ್ಮು ಮತ್ತು ಕಾಶ್ಮೀರ ಹಿಂದೆಯೂ ಭಾರತದ ಭಾಗವಾಗಿತ್ತು, ಮುಂದೆಯೂ ಭಾರತದ ಭಾಗವಾಗಿರಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ..', 'ಭಯೋತ್ಪಾದನೆಯಿಂದ ಸಂತ್ರಸ್ಥರಾದವರು, ಭಯೋತ್ಪಾದನೆ ಮಾಡುವ ವ್ಯಕ್ತಿಗಳ ಜೊತೆ ಭಯೋತ್ಪಾದನೆಯ ಬಗ್ಗೆ ಚರ್ಚಿಸಲು ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ..', 'SCO ಸದಸ್ಯ ರಾಷ್ಟ್ರದ ವಿದೇಶಾಂಗ ಸಚಿವರಾಗಿ, ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಅದೇ ರೀತಿಯಲ್ಲಿ ನೋಡಿಕೊಳ್ಳಲಾಗುತ್ತದೆ. ಅದಕ್ಕಿಂತ ವಿಶೇಷವಾದ ಗೌರವವನ್ನು ನೀಡಲಾಗೋದಿಲ್ಲ..' ಹೀಗೆ ಜೈಶಂಕರ್‌ ಸಿಡಿಗುಂಡಿನಂತೆ ಮಾತನಾಡುತ್ತಿದ್ದರೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೋ ಜರ್ದಾರಿ ಮುಖದಲ್ಲಿ ಬೆವರಿಳಿಯುವ ಲಕ್ಷಣ ಕಾಣುತ್ತಿತ್ತು. ಒಟ್ಟಾರೆ ಎಸ್‌ಸಿಒ (ಶಾಂಘೈ ಸಹಕಾರ ಸಂಸ್ಥೆ) ಸಭೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಪಾಕಿಸ್ತಾನದ ಚಳಿ ಬಿಡಿಸಿದರೆ, ಬಿಲಾವಲ್‌ ಭುಟ್ಟೋಗೆ ಗಂಟಲು ಆರಿದಂತಾಗುತ್ತಿತ್ತು. ಇದೇ ವೇಳೆ ಪಾಕಿಸ್ತಾನ ಹಾಗೂ ಚೀನಾ ನಿರ್ಮಾಣ ಮಾಡುತ್ತಿರುವ ಎಕಾನಾಮಿಕ್‌ ಕಾರಿಡಾರ್‌ ಬಗ್ಗೆಯೂ ಮಾತನಾಡಿದ ಜೈಶಂಕರ್‌, 'ಸಂಪರ್ಕ ಎಂದಿಗೂ ದೇಶದ ಪ್ರಗತಿಗೆ ಒಳ್ಳೆಯದು.  ಆದರೆ ಇದು ಯಾವುದೇ ದೇಶದ ಪ್ರಾದೇಶಿಕ ಸಮಗ್ರತೆ ಮತ್ತು ರಾಜ್ಯಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುವ ಪ್ರಯತ್ನ ಮಾಡಬಾರದು ಎಂದು ಹೇಳಿದರು.

ಎಸ್‌ಸಿಓ ಸದಸ್ಯ ರಾಷ್ಟ್ರದ ವಿದೇಶಾಂಗ ಸಚಿವರಾಗಿ, ಬಿಲಾವಲ್ ಭುಟ್ಟೋ-ಜರ್ದಾರಿ ಅವರನ್ನು ಬೇರೆಯವರನ್ನು ನೋಡಿಕೊಳ್ಳುವ ರೀತಿಯಲ್ಲಿಯೇ ನೋಡಿಕೊಳ್ಳುತ್ತೇವೆ.  ಪಾಕಿಸ್ತಾನದ ಆಧಾರಸ್ತಂಭವಾಗಿರುವ ಭಯೋತ್ಪಾದನಾ ಉದ್ಯಮದ ಪ್ರವರ್ತಕ, ಸಮರ್ಥಕ ಮತ್ತು ವಕ್ತಾರರಾಗಿ ಇವರು ಗುರುತಿಸಿಕೊಂಡಿದ್ದಾರೆ. ಆದರೆ, ಅವರು ಇರುವ ಹುದ್ದೆಯನ್ನು ನೋಡಿ ಎಸ್‌ಸಿಒ ಸಭೆಗೆ ಕರೆಯಲಾಯಿತು ಎಂದ ಜೈಶಂಕರ್ ಹೇಳಿದ್ದಾರೆ. ಭಯೋತ್ಪಾದನೆಯಿಂದ ತೊಂದರೆಗೆ ಒಳಗಾದವರು ಭಯೋತ್ಪಾದನೆ ಮಾಡುವ ವ್ಯಕ್ತಿಗಳ ಜೊತೆ ಭಯೋತ್ಪಾದನೆಯ ಬಗ್ಗೆ ಚರ್ಚಿಸಲು ಒಟ್ಟಿಗೆ ಕುಳಿತುಕೊಳ್ಳುವುದಿಲ್ಲ. ಭಯೋತ್ಪಾದನೆಯಿಂದ ಹಾನಿಗೆ ಒಳಗಾದವರು ಅವರನ್ನು ರಕ್ಷಣೆ ಮಾಡಿಕೊಳ್ಳಲು ಸಮರ್ಥರಿದ್ದಾರೆ. ಇಲ್ಲಿಗೆ ಬಂದು, ನಾವೂ ಕೂಡ ನಿಮ್ಮಂಥೆ ಒಂದೇ ದೋಣಿಯಲ್ಲಿದ್ದೇವೆ ಎಂದು ಕಪಟ ಪದಗಳನ್ನು ಬೋಧಿಸಲು ಬರಬಾರದು ಎಂದು ಜೈಶಂಕರ್‌ ಹೇಳಿದರು. ಇಲ್ಲಿಯೇ ಮತ್ತೊಮ್ಮ ಸ್ಪಷ್ಟವಾಗಿ ಹೇಳಿ ಬಿಡುತ್ತೇನೆ, ಜಮ್ಮು ಕಾಶ್ಮೀರ ಹಿಂದೆಯೂ ಭಾರತದ ಭಾಗವಾಗಿತ್ತು. ಮುಂದೆಯೂ ಭಾರತದ ಭಾಗವಾಗಿಯೇ ಇರಲಿದೆ. ಇದರಲ್ಲಿ ಯಾವುದೇ ಅನುಮಾನಗಳು ಬೇಡ ಎಂದರು.

'ಅವರು ಭಯೋತ್ಪಾದನಾ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇಂದು ಏನಾಯಿತು ಎಂಬುದರ ಕುರಿತು ನಾನು ಗುಂಡು ಹಾರಿಸಿಲು ಬಯಸೋದಿಲ್ಲ. ಆದರೆ  ಈ ವಿಷಯದಲ್ಲಿ ನಾವೆಲ್ಲರೂ ಸಮಾನವಾಗಿ ಆಕ್ರೋಶಗೊಂಡಿದ್ದೇವೆ. ಭಯೋತ್ಪಾದನೆಯ ವಿಷಯದಲ್ಲಿ, ಪಾಕಿಸ್ತಾನದ ವಿಶ್ವಾಸಾರ್ಹತೆ ಅದರ ವಿದೇಶೀ ವಿನಿಮಯ ಮೀಸಲುಗಿಂತಲೂ ವೇಗವಾಗಿ ಕುಸಿಯುತ್ತಿದೆ ಎಂದು ಜೈಶಂಕರ್‌ ಕಿಡಿಕಾರಿದರು.

ಪಾಕಿಸ್ತಾನದಿಂದ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹಲವು ವರ್ಷಗಳಿಂದ ಗೊಂದಲದಲ್ಲಿದೆ. ಯಾವುದೇ ಮಾತುಕತೆಗಾಗಿ ಇಸ್ಲಾಮಾಬಾದ್ ಹಿಂದಿನ ಭಾರತದ ಜಮ್ಮು ಮತ್ತು ಕಾಶ್ಮೀರಕ್ಕೆ ಆರ್ಟಿಕಲ್ 370 ಅನ್ನು ಮರುಸ್ಥಾಪಿಸಲು ಪ್ರಯತ್ನ ಮಾಡುತ್ತಿದೆ. ಆದರೆ, ನೀವು ಎದ್ದು ಈಗ ಕಾಫಿ ಕುಡಿಯಿರಿ. ಯಾಕೆಂದರೆ, ಅದು ಮತ್ತೊಂದು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಭಯೋತ್ಪಾದನೆ ಅನ್ನೋದು ಸಾಮಾನ್ಯ ವಿಚಾರ ಎನ್ನುವ ಯೋಚನೆಯನ್ನೇ ಮಾಡಬೇಡಿ ಪಾಕಿಸ್ತಾನಕ್ಕೆ ಎಚ್ಚರಿಸಿದ್ದಾರೆ.

| "I said they (Pakistan) have nothing to do with G20. I will also say that they have nothing to do with Srinagar. There is only one issue to discuss on Kashmir which is when does Pakistan vacate its illegal occupation of Pakistan Occupied Kashmir," says EAM Dr S… pic.twitter.com/Mx7Xg2UQsE

— ANI (@ANI)

ಶೇಕ್‌ಹ್ಯಾಂಡ್ ಇಲ್ಲ, ನಮಸ್ತೆ ಮಾತ್ರ: ಪಾಕ್ ವಿದೇಶಾಂಗ ಸಚವರಿಗೆ ಭಾರತ ನೀಡಿದ ಸ್ವಾಗತ ವೈರಲ್!

ಅವರಿಗೆ (ಪಾಕಿಸ್ತಾನ) ಜಿ 20 ಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನಾನು ಹಿಂದೆಯೇ ಹೇಳಿದ್ದೇನೆ. ಅವರಿಗೂ ಶ್ರೀನಗರಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳುತ್ತೇನೆ. ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಜೊತೆ ಚರ್ಚಿಸಲು ಒಂದೇ ಒಂದು ವಿಷಯ ಬಾಕಿ ಇದೆ. ಅದೇನೆಂದರೆ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ತನ್ನ ಅಕ್ರಮ ಪ್ರವೇಶವನ್ನು ಯಾವಾಗ ಖಾಲಿ ಮಾಡುತ್ತದೆ ಅನ್ನೋದೊಂದೇ' ಎಂದು ಜೈಶಂಕರ್‌ ಗುಡುಗಿದ್ದಾರೆ.

ರಾಜಕೀಯ ಮಾಡಬೇಡಿ, ಸುಡಾನ್ ಕನ್ನಡಿಗರ ಸುರಕ್ಷತೆಗೆ ಆತಂಕ ವ್ಯಕ್ತಪಡಿಸಿದ ಸಿದ್ದುಗೆ ಜೈಶಂಕ್ ತಿರುಗೇಟು

click me!