ಗ್ರಾಮದ ಗೋಡೆಗಳೇ ಇವರಿಗೆ ಲ್ಯಾಪ್‌ಟಾಪ್, ನೆಟ್ಟೂ ಬೇಡ, ಮೊಬೈಲೂ ಬೇಡ..!

By Suvarna NewsFirst Published Sep 5, 2020, 1:30 PM IST
Highlights

ಗ್ರಾಮದ ಬಡ ಮಕ್ಕಳಿಗೆ ಡಿಜಿಟಲ್ ರೂಪದ ಶಿಕ್ಷಣ ಕೊಡಲಾಗದ ಶಿಕ್ಷಕರು ಮಾಡಿದ್ರು ಹೊಸ ಐಡಿಯಾ..! ಈಗ ದಿನಪೂರ್ತಿ ಕಲಿಕೆ

ಕೊರೋನಾ ವೈರಸ್‌ನಿಂದ ಎಲ್ಲೆಡೆ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮುಖ್ಯವಾಗಿ ದುಡಿಯುವ ವರ್ಗದ ಜನ ವೇತನವಿಲ್ಲದೆ, ವೇತನ ಕಡಿತದ ತೊಂದರೆ ಅನುಭವಿಸುತ್ತಿದ್ದಾರೆ. 

ಇವೆಲ್ಲದರ ಮಧ್ಯೆ ಮಕ್ಕಳೂ ತೊಂದರೆ ಅನುಭವಿಸುವಂತಾಗಿದೆ. ಏನೇನೋ ಸಾಹಸ ಮಾಡಿ ಆನ್‌ಲೈನ್ ಶಿಕ್ಷಣದ ಮೊರೆ ಹೋಗುವಂತಾಗಿದೆ. ಆದರೆ ನಮ್ಮ ದೇಶದ ಬಹಳಷ್ಟು ಹಳ್ಳಿಗಳಲ್ಲಿ ವಿಡಿಯೋ ಕಾನ್ಫರೆನ್ಸ್‌ಗೆ ಬೇಕಾದ 4ಜಿ ನೆಟ್‌ವರ್ಕ್ ಬಿಡಿ 2ಜಿ ಸಿಗದಷ್ಟೂ ಕಷ್ಟವಿದೆ. ಇನ್ನು ಲ್ಯಾಪ್‌ಟಾಪ್ ಸ್ಮಾರ್ಟ್ ಫೋನ್ ಒದಗಿಸುವಷ್ಟು ಸ್ಥಿತಿವಂತರಲ್ಲದಿರುವವರೂ ಇದ್ದಾರೆ.

ಸಕ್ಸಸ್ ಆಯ್ತು ದ್ವಿತೀಯ ಪಿಯುಸಿ YouTube ಚಾನಲ್ : ನೀವು ಅನುಕೂಲ ಪಡೆಯಿರಿ

ಮಕ್ಕಳಿಗಷ್ಟೇ ಅಲ್ಲ ಬೇಸಿಕ್ ಫೋನ್ ಮಾತ್ರ ಬಳಸಿ ಅಭ್ಯಾಸವಿದ್ದ ಗ್ರಾಮದ ಅದೆಷ್ಟೋ ಶಿಕ್ಷಕರು ಆನ್‌ಲೈನ್ ಶಿಕ್ಷಣಕ್ಕೆ ಹೊಸಬರು. ಇನ್ನು ಡಿಜಿಟಲ್ ಕ್ಲಾಸ್ ಬಗ್ಗೆ ಅವರು ಕಲಿತರಷ್ಟೇ ಮಕ್ಕಳಿಗೆ ಕಲಿಸಲು ಸಾಧ್ಯ ಎನ್ನುವ ಸ್ಥಿತಿ ಇದೆ.

ಮಹಾರಾಷ್ಟ್ರದ ಸೋಲಾಪುರದ ನೀಲಂ ನಗರದ ಮರಾಟಿ ವಿದ್ಯಾಲಯ ತಾಂತ್ರಿಕ ಅಡಚಣೆಯಿಂದ ಮಕ್ಕಳು ಶಿಕ್ಷಣ ಪಡೆಯದಿರುವಂತಾಗಬಾರದೆಂದು ನಿರ್ಧರಿಸಿದ್ದಾರೆ. ಸ್ಥಳೀಯ ಕಲಾವಿದರ ನೆರವಿನಿಂದ ಗ್ರಾಮಾದ್ಯಂತ ಗೋಡೆಯಲ್ಲಿ ಮಕ್ಕಳ ಪಠ್ಯವನ್ನು ಚಿತ್ರೀಕರಿಸಿದ್ದಾರೆ.

 

ಡಿಜಿಟಲ್ ರೀತಿಯಲ್ಲಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಕ್ತರಲ್ಲ. ಹಾಗಾಗಿ ಮಕ್ಕಳಿಗೆ ಶಿಕ್ಷಣ ಕೊಡಿಸಲು ನಾವೇನಾದರೂ ಹೊಸತು ಯೋಚಿಸಲೇಬೇಕಿತ್ತು ಎಂದು ಶಿಕ್ಷಕ ರಾಮ್ ಗಾಯ್ಕ್‌ವಾಡ್ ತಿಳಿಸಿದ್ದಾರೆ.

ಮಕ್ಕಳು ಪ್ರತಿದಿನಿ ಬೇರೆ ಬೇರೆ ಗೋಡೆಯ ಬಳಿ ಸಣ್ಣ ಗುಂಪುಗಳಾಗಿ ಸೇರಿಕೊಳ್ಳುತ್ತಾರೆ. ಸಮಾಜಿಕ ಅಂತರವನ್ನೂ ಪಾಲಿಸುತ್ತಾರೆ. ಗಣಿತ, ಇಂಗ್ಲಿಷ್, ಮರಾಟಿ ಎಲ್ಲವನ್ನೂ ಗೋಡೆಯಲ್ಲೇ ಕಲಿಸಲಾಗುತ್ತಿದೆ.

ಈ ಗ್ರಾಮದ ಪ್ರತಿ ಮನೆಯಲ್ಲಿದ್ದಾರೆ ಶಿಕ್ಷಕರು!

ಅಮ್ಮ ಹಾಲು ತರಲು ಮನೆಯಿಂದ ಕಳುಹಿಸಿದಾಗ ನಾನು ಗಲ್ಲಿಯಲ್ಲಿ ನಡೆಯುತ್ತಾ ಗೋಡೆ ಪಾಠ ನೋಡುತ್ತಾ ಹೋಗುತ್ತೇನೆ ಎನ್ನುತ್ತಾನೆ 3 ವರ್ಷದ ವಿದ್ಯಾರ್ಥಿ. 

click me!