ಅರುಣಾಚಲ ಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿದೆ: ಶಾಸಕನ ಸ್ಫೋಟಕ ಹೇಳಿಕೆ!

Published : Sep 05, 2020, 11:43 AM ISTUpdated : Sep 05, 2020, 02:21 PM IST
ಅರುಣಾಚಲ ಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿದೆ: ಶಾಸಕನ ಸ್ಫೋಟಕ ಹೇಳಿಕೆ!

ಸಾರಾಂಶ

ಭಾರತ, ಚೀನಾ ನಡುವೆ ಭಾರೀ ಸಂಘಟರ್ಷ| ಅರುಣಾಚಲ ಪ್ರದೇಶದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿದೆ| ಯುದ್ಧದ ಪರಿಸ್ಥಿತಿ ನಿರ್ಮಾಣದ ನಡುವೆಯೇ ಭಾರೀ ಸಂಚಲನ ಮೂಡಿಸಿದೆ ಶಾಸಕನ ಹೇಳಿಕೆ| 

ಇಟಾನಗರ(ಸೆ.05): ಅರುಣಾಚಲ ಪ್ರದೇಶದ ಹಳ್ಳಿಯ ಐವರು ಯುವಕರನ್ನ ಚೀನಾದ ಸೇನೆ ಅಪಹರಿಸಿದ್ದಾರೆಂದು ಇಲ್ಲಿನ ಕಾಂಗ್ರೆಸ್‌ ಶಾಸಕ ನಿನೊಂಗ್‌ ಎರಿಂಗ್‌ ಆರೋಪಿಸಿದ್ದಾರೆ. ಸದ್ಯ ಅವರ ಈ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.

ಟ್ವಿಟ್ಟರ್‌ನಲ್ಲಿ ಇಂತಹುದ್ದೊಂದು ಆರೋಪ ಮಾಡಿರುವ ಕಾಂಗ್ರೆಸ್‌ ಶಾಸಕ ನಿನೊಂಗ್‌ ಎರಿಂಗ್‌ 'ಅರುಣಾಚಲ ಪ್ರದೇಶದ ಮೇಲಿನ ಸುಬನ್‌ಸಿರಿ ಜಿಲ್ಲೆಯ ಐವರು ಯುವಕರನ್ನು ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ ಅಪಹರಿಸಿದೆ' ಎಂದಿದ್ದಾರೆ. ಅಲ್ಲದೇ  ಕೆಲ ತಿಂಗಳ ಹಿಂದೆ ಇಂತಹುದದ್ದೇ ಘಟನೆ ನಡೆದಿರುವುದಾಗಿಯೂ ಅವರು ತಿಳಿಸಿದ್ದಾರೆ. 

ಪ್ಯಾಂಗಾಂಗ್‌ನಲ್ಲಿ ಕಂಗೆಟ್ಟ ಚೀನಾ:, ಗಡಿಯಲ್ಲಿ ಭಾರೀ ಸಲಕರಣೆ ಜಮಾವಣೆ!

ಇನ್ನು ತಮ್ಮ ಈ ಟ್ವೀಟ್‌ಗೆ ಪ್ರಧಾನಿ ನರೇಂದ್ರ ಮೋದಿಯನ್ನು ಟ್ಯಾಗ್‌ ಮಾಡಿರುವ ನಿನೊಂಗ್‌ ಎರಿಂಗ್‌, ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿಗೆ ತಕ್ಕ ಪಾಠ ಕಲಿಸಬೇಕು ಎಂದೂ ಮನವಿ ಮಾಡಿದ್ದಾರೆ. ಲಡಾಖ್‌ನಲ್ಲಿ ಭಾರತ ಹಾಗೂ ಚೀನಾ  ನಡುವೆ ನಡೆಯುತ್ತಿರುವ ಘರ್ಷಣೆ ಹಿನ್ನೆಲೆ ಶಾಸಕ ನಿನೊಂಗ್‌ ಎರಿಂಗ್‌ ನೀಡಿದ ಹೇಳಿಕೆ ಭಾರೀ ಮಹತ್ವ ಪಡೆದಿದೆ. 

ಇನ್ನು ಕಳೆದ ಮಾರ್ಚ್‌ 19ರಂದು ಮೇಲಿನ ಸುಬನ್‌ಸಿರಿ ಜಿಲ್ಲೆಯ ಅಸಾಪಿಲ ಸೆಕ್ಟರ್‌ನಿಂದ ಚೀನಾ ಸೇನೆ 21 ವರ್ಷದ ಯುವಕನನ್ನ ಅಪಹರಿಸಿತ್ತು ಎಂದು ತಿಳಿದುಬಂದಿದೆ. ಸದ್ಯ ಲಡಾಕ್‌ ಗಡಿಯಲ್ಲಿ ಯುದ್ಧದ ಕಾರ್ಮೋಡ ಮೂಡಿದೆ. ಉಭಯ ದೇಶಗಳ ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದಾರೆ ಎನ್ನುವ ವರದಿಗಳು ಕೂಡ ಕೇಳಿಬರುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?