ಎಸ್ಸಿ, ಎಸ್ಟಿಗೆ ಕೆನೆಪದರ ನೀತಿ ಅನ್ವಯವಿಲ್ಲ: ಕೇಂದ್ರ

Published : Aug 07, 2026, 08:44 AM IST
bhojshala complex supreme court order

ಸಾರಾಂಶ

ಎಸ್‌ಸಿ, ಎಸ್ಟಿ ಸಮುದಾಯದ ಮೀಸಲಾತಿಗೆ ಕೆನೆಪದರ ನೀತಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿರುವ ಸರ್ಕಾರ, ತನ್ನ ವಾದಕ್ಕೆ ಪೂರಕವಾಗಿ ಹಿಂದಿನ ಸಾಂವಿಧಾನಿಕ ಪೀಠದ ತೀರ್ಪನ್ನು ಉಲ್ಲೇಖಿಸಿದೆ.

ನವದೆಹಲಿ (ಆ.7): ಕೆನೆಪದರ ನೀತಿಯು, ಎಸ್‌ಸಿ, ಎಸ್ಟಿ ಸಮುದಾಯದ ಮೀಸಲಿಗೆ ಅನ್ವಯವಾಗದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ. ಈ ಮೂಲಕ ಎಸ್ಸಿ, ಎಸ್ಟಿ ಮೀಸಲು ವೇಳೆ ಕೆನೆಪದರ ತತ್ವ ಅನ್ವಯಿಸಬೇಕು ಮತ್ತು ಸರ್ಕಾರಿ ನೇಮಕದ ವೇಳೆ ಹೆಚ್ಚು ನ್ಯಾಯಯುತವಾದ ಮೀಸಲು ವ್ಯವಸ್ಥೆಗೆ ನೀತಿ ರೂಪಿಸಬೇಕು ಎಂದು ಕೋರಿದ್ದ ಅರ್ಜಿಗೆ ತನ್ನ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ ಈ ಕುರಿತು ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳು, ಸಂವಿಧಾನದ ಮೂಲಭೂತ ಹಕ್ಕುಗಳ ಯಾವುದೇ ಉಲ್ಲಂಘನೆಯನ್ನು ಎತ್ತಿತೋರಿಸುತ್ತಿಲ್ಲ ಎಂದು ಹೇಳಿದೆ.

ಜೊತೆಗೆ ಎಸ್ಸಿ, ಎಸ್ಟಿಗೆ ಕೆನೆಪದರ ನೀತಿ ಅನ್ವಯಿಸುತ್ತದೆ ಎಂದು ಎಲ್ಲಿಯೂ ನಿರ್ದಿಷ್ಟವಾಗಿ ಪ್ರತಿಪಾದಿಸಲಾಗಿಲ್ಲ. ಕೆನೆಪದರದ ಕುರಿತು ಮಾಡಿರುವ ಉಲ್ಲೇಖವು, ಇತರೆ ಹಿಂದುಳಿದ ವರ್ಗ ಮತ್ತು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದ ಮೀಸಲಿಗೆ ಒಳಪಟ್ಟ ಸಾಮಾನ್ಯ ಅವಲೋಕನದಂತಿದೆ ಎಂದು ಕೇಂದ್ರ ಸರ್ಕಾರದ ವಾದಿಸಿದೆ. ಅಲ್ಲದೆ ತನ್ನ ವಾದಕ್ಕೆ ಪೂರಕವಾಗಿ ಅಶೋಕ್‌ ಕುಮಾರ್‌ ಠಾಕೂರ್‌ ಕೇಸಿನಲ್ಲಿ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠವು, ಕೆನೆಪದರ ನೀತಿ ಎಸ್ಸಿ, ಎಸ್ಟಿಗಳಿಗೆ ಅನ್ವಯಿಸುವುದಿಲ್ಲ ಎಂದು ಸ್ಪಷ್ಪಪಡಿಸಿದೆ ಎಂದು ತನ್ನ ಅಫಿಡವಿಟ್‌ನಲ್ಲಿ ಸರ್ಕಾರ ಸ್ಪಷ್ಟಪಡಿಸಿದೆ.

ಕೆನೆಪದರ ಎಂದರೆ?

1992ರಲ್ಲಿ ಸುಪ್ರೀಂಕೋರ್ಟ್‌ ಮಂಡಲ್‌ ತೀರ್ಪಿನಲ್ಲಿ ಹಿಂದುಳಿದ ವರ್ಗಗಳಿಗೆ ಸೇರಿದ ಶ್ರೀಮಂತರನ್ನು ಸರ್ಕಾರಿ ಉದ್ಯೋಗ ಮತ್ತು ಶೈಕ್ಷಣಿಕ ಸಂಸ್ಥೆಗಳ ಪ್ರವೇಶದಿಂದ ಹೊರಗೆ ಇಟ್ಟಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಳೆದ ವರ್ಷ ಮೋದಿ ವಿದೇಶ ಪ್ರವಾಸಕ್ಕೆ ₹180 ಕೋಟಿ ವೆಚ್ಚ
ಪ್ರಧಾನಿ ಮೋದಿ ಮತ್ತೊಂದು ವಿಡಿಯೋ ; ಈ ಬಾರಿ ಮನವಿ ಮಾಡಿದ್ದು ಏನೆಂದರೆ..