ಮಸೀದಿಗೂ ಮಹಿಳೆಯರ ಪ್ರವೇಶ?: ಶಬರಿಮಲೆ ಕೇಸೊಂದನ್ನೇ ವಿಚಾರಣೆ ನಡೆಸಲು ಸುಪ್ರೀಂ ನಕಾರ

By Kannadaprabha NewsFirst Published Jan 14, 2020, 11:22 AM IST
Highlights

ಶಬರಿಮಲೆ ಕೇಸೊಂದನ್ನೇ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಕಾರ| ಎಲ್ಲ ಧಾರ್ಮಿಕ ಸ್ಥಳಗಳ ಮಹಿಳಾ ತಾರತಮ್ಯದ ಬಗ್ಗೆ ವಿಚಾರಣೆ| ವಿಚಾರಣೆ ನಡೆಸಬೇಕಾದ ವಿಷಯಗಳ ಬಗ್ಗೆ ನಿರ್ಧರಿಸಿ| 3 ವಾರದೊಳಗೆ ವಿಚಾರಣೆಯ ವಿಷಯ ತೀರ್ಮಾನಿಸಿ|  ಜ.17ರಂದು ಸಭೆ ನಡೆಸಲು ವಕೀಲರಿಗೆ 9 ಸದಸ್ಯರ ಪೀಠ ತಾಕೀತು

ನವದೆಹಲಿ[ಜ.14]: ಶಬರಿಮಲೆ ಅಯ್ಯಪ್ಪ ದೇವಾಲಯದಲ್ಲಿ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಇದ್ದ ನಿರ್ಬಂಧದ ವಿವಾದ ಕುರಿತಾದ ಮರುಪರೀಶಲನಾ ಅರ್ಜಿಗಳಷ್ಟನ್ನೇ ವಿಚಾರಣೆಗೆ ಕೈಗೆತ್ತಿಕೊಳ್ಳಲು ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. ಇದರ ಬದಲಾಗಿ ವಿವಾದವನ್ನು ಸವಿಸ್ತಾರ ದೃಷ್ಟಿಕೋನದಿಂದ ನೋಡಲು ನಿರ್ಧರಿಸಿರುವ ಪೀಠ, ದೇಶದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಮಹಿಳೆಯರನ್ನು ಅಸಮಾನ ದೃಷ್ಟಿಯಿಂದ ನೋಡುವ ವಿವಿಧ ವಿವಾದಗಳನ್ನು ಒಟ್ಟಿಗೇ ವಿಚಾರಣೆ ನಡೆಸಲು ತೀರ್ಮಾನಿಸಿದೆ.

ದಾವೂದಿ ಬೊಹ್ರಾ ಮುಸ್ಲಿಮರಲ್ಲಿನ ಮಹಿಳೆಯರ ಯೋನಿ ಛೇದನ, ದೇಶದ ಕೆಲವು ಮಸೀದಿಗಳಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ, ಪಾರ್ಸಿಯೇತರ ವ್ಯಕ್ತಿಯನ್ನು ಮದುವೆಯಾಗಿರುವ ಮಹಿಳಾ ಪಾರ್ಸಿಗಳಿಗೆ ಪಾರ್ಸಿ ಮಂದಿರಗಳಲ್ಲಿ ಪ್ರವೇಶ ನಿರ್ಬಂಧ ವಿಚಾರಗಳನ್ನು ಶಬರಿಮಲೆ ವಿವಾದದ ಜತೆಗೇ ಸೇರಿಸಿ ಸಮಗ್ರ ದೃಷ್ಟಿಕೋನದಿಂದ ವಿಚಾರಣೆ ನಡೆಸಲು ಮುಖ್ಯ ನ್ಯಾಯಾಧೀಶ ನ್ಯಾ| ಎಸ್‌.ಎ. ಬೋಬ್ಡೆ ನಿರ್ಣಯಿಸಿತು.

ಶಬರಿಮಲೆ ಯಾತ್ರೆ ಅಂತಿಮ ಹಂತ, ಮಕರಜ್ಯೋತಿ ದರ್ಶನಕ್ಕೆ ಕ್ಷಣಗಣನೆ!

‘ಕಳೆದ ವರ್ಷ ನವೆಂಬರ್‌ನಲ್ಲಿ ಪಂಚಸದಸ್ಯ ಪೀಠವು ನಮಗೆ ಯಾವ ವಿಷಯಗಳ ಬಗ್ಗೆ ವಿಚಾರಣೆ ನಡೆಸಬೇಕು ಎಂದು ಹೇಳಿದೆಯೋ ಆ ವಿಷಯಗಳನ್ನಷ್ಟೇ ವಿಚಾರಣೆಗೆ ಒಳಪಡಿಸುತ್ತೇವೆ. ಶಬರಿಮಲೆ ಮರುಪರಿಶೀಲನಾ ಅರ್ಜಿಗಳನ್ನು ನಾವು ವಿಚಾರಣೆ ನಡೆಸುತ್ತಿಲ್ಲ’ ಎಂದು ಪೀಠ ಹೇಳಿತು.

ಇದಲ್ಲದೆ, ಯಾವ್ಯಾವ ವಿಷಯಗಳ ಬಗ್ಗೆ ವಿಚಾರಣೆ ನಡೆಸಬೇಕು ಎಂಬುದನ್ನು ನಿರ್ಧರಿಸುವ ದೃಷ್ಟಿಯಿಂದ ಜನವರಿ 17ರಂದು ಈ ಪ್ರಕರಣದ ಸಂಬಂಧಿತ ನಾಲ್ವರು ವಕೀಲರು ಸಭೆ ನಡೆಸಬೇಕು. 3 ವಾರದೊಳಗೆ ವಿಚಾರಣಾ ವಿಷಯಗಳನ್ನು ತೀರ್ಮಾನಿಸಬೇಕು ಎಂದೂ ಕೋರ್ಟ್‌ ಸೂಚಿಸಿತು.

ಕಳೆದ ವರ್ಷ ನ.14ರಂದು ತೀರ್ಪು ನೀಡಿದ್ದ ಪಂಚಸದಸ್ಯ ಪೀಠ, ಶಬರಿಮಲೆ ವಿವಾದವನ್ನು ವಿಸ್ತೃತ ಪೀಠ ವಿಚಾರಣೆ ನಡೆಸಬೇಕು ಎಂದು ಹೇಳಿತ್ತು. ಇದರ ಜತೆಗೆ ದಾವೂದಿ ಬೊಹ್ರಾ ಸಮುದಾಯ, ಮುಸ್ಲಿಂ ಮಸೀದಿಗಳು ಹಾಗೂ ಪಾರ್ಸಿ ಮಂದಿರಗಳಲ್ಲಿನ ಮಹಿಳಾ ತಾರತಮ್ಯದ ಬಗ್ಗೆಯೂ ವಿಚಾರಣೆ ಅಗತ್ಯವಿದೆ ಎಂದು 3:2ರ ಬಹುಮತದ ತೀರ್ಪು ನೀಡಿತ್ತು.

ಶಬರಿಮಲೆಗೆ ಮಹಿಳಾ ಪ್ರವೇಶ ಬೇಡ: ಉಲ್ಟಾ ಹೊಡೆದ ಟಿಡಿಬಿ!

click me!