
ನವದೆಹಲಿ(ಜೂ.03): ‘ದೇಶದಲ್ಲಿ ಕೊರೋನಾ 2ನೇ ಅಲೆ ಇಳಿಕೆ ಆಗುತ್ತಿದೆ. ಆದರೆ, ಮೂರನೇ ಅಲೆ ಕೂಡ 2ನೇ ಅಲೆಯಷ್ಟೇ ಭೀಕರವಾಗಿರುವ ಸಾಧ್ಯತೆ ಇದೆ’ ಎಂದು ಎಸ್‌ಬಿಐನ ವರದಿಯೊಂದು ತಿಳಿಸಿದೆ. ಆದರೆ ಆರೋಗ್ಯ ಮೂಲಸೌಕರ‍್ಯ ಅಭಿವೃದ್ಧಿಗೊಳಿಸಿ ಲಸಿಕಾಕರಣ ತೀವ್ರಗೊಳಿಸಿದರೆ 2ನೇ ಅಲೆಯಲ್ಲಿ ಉದ್ಭವಿಸಿದ ಭೀಕರತೆ ಸೃಷ್ಟಿಯಾಗದು ಎಂದು ಅದು ಸಲಹೆ ನೀಡಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಘಟಿಸಿದ ಕೊರೋನಾ ವಿದ್ಯಮಾನಗಳ ಪಕಾರ ಈ ವರದಿ ಸಿದ್ಧಪಡಿಸಲಾಗಿದೆ.
ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!
‘ಎಸ್‌ಬಿಐನ ಇಕೋವ್ರಾಪ್’ ವರದಿಯ ಪ್ರಕಾರ, ‘ಕೊರೋನಾ 2ನೇ ಅಲೆ ಹಾಗೂ 3ನೇ ಅಲೆಯ ಮಧ್ಯೆ ಅಂತಹ ವ್ಯತ್ಯಾಸವೇನೂ ಇಲ್ಲ. ಕೊರೋನಾ 3ನೇ ಅಲೆ ಅಂತ್ಯಗೊಳ್ಳಲು 98 ದಿನಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ, ಒಂದು ವೇಳೆ ಈಗಿನಿಂದಲೇ ಉತ್ತಮ ಸಿದ್ಧತೆಯನ್ನು ಮಾಡಿಕೊಂಡರೆ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ’ ಎಂದಿದೆ.
ಪ್ರಮುಖ ದೇಶಗಳಲ್ಲಿ ಕೊರೊನಾ 2ನೇ ಅಲೆ ತಗ್ಗಲು 108 ದಿನಗಳನ್ನು ಹಾಗೂ 3ನೇ ಅಲೆ ಮುಕ್ತಾಯಗೊಳ್ಳಲು 98 ದಿನಗಳನ್ನು ತೆಗೆದುಕೊಂಡಿದೆ. ಮೂರನೇ ಅಲೆ ತುತ್ತತುದಿಯನ್ನು ತಲುಪಿದಾಗ 2ನೇ ಅಲೆಯ 1.8 ಪಟ್ಟು ಅಧಿಕ ಕೇಸ್‌ಗಳು ದಾಖಲಾಗಬಹುದು. 2ನೇ ಅಲೆಯ ವೇಳೆ ದೈನಂದಿನ ಏಕದಿನದಲ್ಲಿ 4.14 ಲಕ್ಷ ಕೇಸ್‌ಗಳು ದಾಖಲಾಗಿದ್ದು, ಗರಿಷ್ಠ ಎನಿಸಿಕೊಂಡಿದೆ. 2ನೇ ಅಲೆಯ ವೇಳೆ ದಾಖಲಾದ 1.7 ಲಕ್ಷ ಸಾವಿನ ಪ್ರಕರಣಗಳಿಗೆ ಹೋಲಿಸಿದರೆ, 3ನೇ ಅಲೆಯ ವೇಳೆ ಸಾವಿನ ಪ್ರಮಾಣವನ್ನು 40,000ಕ್ಕೆ ಇಳಿಸಬಹುದಾಗಿದೆ. ಶೇ.20ರಷ್ಟುಗಂಭೀರ ಪ್ರಕರಣಗಳನ್ನು ಶೇ.5ಕ್ಕೆ ಇಳಿಕೆ ಮಾಡಬಹುದಾಗಿದೆ. ಇದು ಸಾಕಾರಗೊಳ್ಳಬೇಕು ಎಂದರೆ ಈ ನಿಟ್ಟಿನಲ್ಲಿ ಲಸಿಕೆ ಅಭಿಯಾನ ಹಾಗೂ ಆರೋಗ್ಯ ಮೂಲಸೌಕರ್ಯವನ್ನು ತ್ವರಿತಗತಿಯಲ್ಲಿ ವೃದ್ಧಿಸುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಜಪಾನ್ನಲ್ಲಿ 12-15 ವರ್ಷದ ಮಕ್ಕಳಿಗೆ ಫೈಝರ್ ಲಸಿಕೆ!
ಕೇಸು, ಸಾವು ಎಷ್ಟು?
- ಎಸ್‌ಬಿಐ ವರದಿ ಪ್ರಕಾರ 3ನೇ ಅಲೆಯಲ್ಲಿ 2ನೇ ಅಲೆಗಿಂತ ಹೆಚ್ಚು ಕೇಸು ಪತ್ತೆ
- ಸರಿಯಾದ ಸಿದ್ಧತೆ ಮಾಡಿಕೊಂಡರೆ ಸಾವಿನ ಸಂಖ್ಯೆ 40,000ಕ್ಕೆ ತಗ್ಗಿಸಬಹುದು
- ಗಂಭೀರ ಪ್ರಕರಣಗಳ ಸಂಖ್ಯೆಯನ್ನು ಈಗಿನ 20%ನಿಂದ 5%ಗೆ ಇಳಿಸಬಹುದು
- ಲಸಿಕೆ ವೇಗವಾಗಿ ನೀಡಿ, ಆರೋಗ್ಯ ಮೂಲಸೌಕರ‍್ಯ ಹೆಚ್ಚಿಸಿದರೆ ಮಾತ್ರ ಇದು ಸಾಧ್ಯ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ