ಯುವಕರೆಲ್ಲರೂ ಜೊತೆಯಾಗಿ ಸಮೀಪದ ಹರಿಹರನಾಥ ದೇವಸ್ಥಾನಕ್ಕೆ ತೆರಳಿ ಪರಮೇಶ್ವರನಿಗೆ ಜಲಾಭಿಷೇಕ ಮಾಡಲು ಹೊರಟಿದ್ದರು. ಯುವಕರೆಲ್ಲರೂ ಟ್ರಾಕ್ಟರ್ ನಲ್ಲಿ ಡಿಜೆ ಸಿಸ್ಟಮ್ ಇರಿಸಿ ಡ್ಯಾನ್ಸ್ ಮಾಡುತ್ತಾ ದೇವಸ್ಥಾನದತ್ತ ಹೊರಡುತ್ತಿರುವ ಸಂದರ್ಭದಲ್ಲಿ ದುರಂತ ಸಂಭವಿಸಿದೆ.
ಹಾಜಿಪುರ: ಶ್ರಾವಣ ಮಾಸದ ಮೊದಲ ಸೋಮವಾರ ಬಿಹಾರದಲ್ಲಿ ಭೀಕರ ದುರಂತ ಸಂಭವಿಸಿದ್ದು, ವಿದ್ಯುತ್ ಶಾಕ್ ತಗುಲಿ ಎಂಟು ಕನ್ವರ ಯಾತ್ರಿಗಳು ಮೃತರಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಭಾನುವಾರ ರಾತ್ರಿ ಸುಮಾರು 11.30ರ ವೇಳೆಗೆ ಈ ಅವಘಡ ಸಂಭವಿಸಿದೆ. ಕನ್ವರ ಯಾತ್ರಿಗಳ ವಾಹನಕ್ಕೆ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿದ ಪರಿಣಾಮ ಸ್ಥಳದಲ್ಲಿಯೇ 8 ಜನರ ಸಾವು ಆಗಿದೆ. ಅರಕ್ಕೂ ಅಧಿಕ ಜನರು ಗಾಯಗೊಂಡಿದ್ದು, ವಿದ್ಯುತ್ ಶಾಕ್ ತಗಲುತ್ತಿದ್ದಂತೆ ಸ್ಥಳದಲ್ಲಿ ಕೆಲ ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಬಿಹಾರದ ವೈಶಾಲಿ ಜಿಲ್ಲೆಯ ಹಾಜಿಪುರ-ಜಂದ್ಹಾ ರಸ್ತೆಯಲ್ಲಿ ಮ್ಯೂಸಿಕ್ ಸಿಸ್ಟಮ್ (ಡಿಜೆ) ವಾಹನದ ಮೇಲ್ಭಾಗಕ್ಕೆ ವಿದ್ಯುತ್ ತಂತಿ ತಗುಲಿದೆ. ಎಸ್‌ಸಿಡಿಪಿಓ ಓಂಪ್ರಕಾಶ್, ಸ್ಥಳದಲ್ಲಿಯೇ ಎಂಟು ಜನರ ಸಾವು ಆಗಿರೋದನ್ನು ಖಚಿತಪಡಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರೇ ಗಾಯಾಳುಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಮೃತರೆಲ್ಲರೂ ಸುಲ್ತಾನಪುರದ ನಿವಾಸಿಗಳೆಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
undefined
ಶಿವನಿಗೆ ಜಲಾಭಿಷೇಕ ಮಾಡಲು ಹೊರಟಿದ್ದರು!
ಸ್ಥಳೀಯರ ಪ್ರಕಾರ, ಹಾಜಿಪುರ ಇಂಡಸ್ಟ್ರಿಯಲ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಲ್ತಾನಪುರ ಗ್ರಾಮದ ಯುವಕರೆಲ್ಲರೂ ಜೊತೆಯಾಗಿ ಸಮೀಪದ ಹರಿಹರನಾಥ ದೇವಸ್ಥಾನಕ್ಕೆ ತೆರಳಿ ಪರಮೇಶ್ವರನಿಗೆ ಜಲಾಭಿಷೇಕ ಮಾಡಲು ಹೊರಟಿದ್ದರು. ಯುವಕರೆಲ್ಲರೂ ಟ್ರಾಕ್ಟರ್ ನಲ್ಲಿ ಡಿಜೆ ಸಿಸ್ಟಮ್ ಇರಿಸಿ ಡ್ಯಾನ್ಸ್ ಮಾಡುತ್ತಾ ದೇವಸ್ಥಾನದತ್ತ ಹೊರಡುತ್ತಿರುವ ಸಂದರ್ಭದಲ್ಲಿ ದುರಂತ ಸಂಭವಿಸಿದೆ.
ವಯನಾಡಿನಲ್ಲಿ 6 ದಿನಗಳ ಬಳಿಕ ಮಾಲೀಕನ ಪತ್ತೆ ಹಚ್ಚಿದ ನಾಯಿ, ಹೃದಯಸ್ಪರ್ಶಿ ವಿಡಿಯೋ!
ವಿದ್ಯುತ್ ಇಲಾಖೆಯ ವಿರುದ್ಧ ಆಕ್ರೋಶ
ಶ್ರಾವಣ ಮಾಸದ ಮೊದಲ ಸೋಮವಾರವೇ ಇಂತಹ ದುರಂತ ನಡೆಯುತ್ತೆ ಎಂದು ಯಾರೂ ಊಹಿಸಿರಲಿಲ್ಲ. ಈ ದುರಂತಕ್ಕೆ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯವೇ ಕಾರಣವೇ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ಮೊದಲು ಇಂತಹ ಘಟನೆಗಳು ನಡೆದಿದ್ದರೂ, ವಿದ್ಯುತ್ ಇಲಾಖೆ ಯಾವುದೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ. ರಸ್ತೆ ಬದಿ ವಿದ್ಯುತ್ ತಂತಿ ಅಪಾಯಕಾರಿಯಾಗಿ ಬದಲಾಗಿರುವ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರೂ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೇ ನಿರ್ಲಕ್ಷ್ಯ ತೋರಿದ್ದಕ್ಕೆ ಎಂಟು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ದುರಂತಕ್ಕೆ ವಿದ್ಯುತ್ ಇಲಾಖೆಯೇ ಕಾರಣ ಎಂದು ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಸ್ಪಂದಿಸದ ಅಧಿಕಾರಿಗಳು!
ಗ್ರಾಮದ ಯುವಕರು ವಿದ್ಯುತ್ ಶಾಕ್‌ನಿಂದ ಮೃತರಾಗುತ್ತಿದ್ದಂತೆ ಗ್ರಾಮಸ್ಥರು ಆಕ್ರೋಶಿತರಾಗಿದ್ದರು. ಈ ವೇಳೆ ಮಾತನಾಡಿದ ಯುವಕ, ವಿದ್ಯುತ್ ಶಾಕ್ ತಗುಲಿತ್ತಿದ್ದಂತೆ ನಾವು ಸ್ಥಳೀಯ ಅಧಿಕಾರಿಗಳಿಗೆ ಫೋನ್ ಮಾಡಿ ಮಾಹಿತಿ ನೀಡಲಾಯ್ತು. ಆದ್ರೆ ಅಧಿಕಾರಿಗಳು ನಮ್ಮ ಫೋನ್ ಕರೆಯನ್ನು ಕಟ್ ಮಾಡಿದರು. ತುಂಬಾ ಸಮಯದ ಬಳಿಕ ಪ್ರತಿಕ್ರಿಯಿಸಿದ ಅಧಿಕಾರಿಗಳು ಆ ಕೆಲಸ ನಮ್ಮದಲ್ಲ ಎಂದು ಜಾರಿಕೊಂಡರು, ಆನಂತರ ಪೊಲೀಸರಿಗೆ ಕರೆ ಮಾಡುವಂತೆ ಹೇಳುತ್ತಾರೆ ಎಂದು ಯುವಕ ಆಕ್ರೋಶ ಹೊರ ಹಾಕಿದ್ದಾನೆ.
ಅಪ್ಪನ ಕೈಹಿಡಿದೇ ಬೆಳೆದಿದ್ದ ಮಗಳು 'ಕೈ'ಯನನ್ನಷ್ಟೇ ಬಿಟ್ಟು ಹೋದಳು! ವಯನಾಡಿನಲ್ಲಿ ಮನಕಲುಕುವ ಘಟನೆ