ಸಾರಿ ಉಟ್ಟ ನಾರಿಯ ಜಬರ್‌ದಸ್ತ್‌ ಡಾನ್ಸ್‌.. ಎರ್ರಾಬಿರ್ರಿ ಸ್ಟೆಪ್‌ಗೆ ಸುತ್ತಲಿದ್ದವರು ಗಾಬರಿ

By Suvarna NewsFirst Published Dec 28, 2021, 3:17 PM IST
Highlights
  • ಸಾರಿ ಉಟ್ಟ ನಾರಿಯ ಸಖತ್‌ ಡಾನ್ಸ್‌
  • ಪಾರ್ಟಿಯೊಂದರ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌
  • ಹೃತಿಕ್‌ ರೋಷನ್ ಬ್ಯಾಂಗ್‌ ಬ್ಯಾಂಗ್‌ ಹಾಡಿಗೆ ಸಖತ್ ಸ್ಟೆಪ್‌

ಮುಂಬೈ(ಡಿ.28): ಡಾನ್ಸ್‌, ಹಾಡು ಮುಂತಾದವುಗಳಿಗೆ ಯಾವುದೇ ಜಾತಿ, ಭಾಷೆ, ವಯಸ್ಸು, ದೇಶದ ಗಡಿಗಳ ಹಂಗಿಲ್ಲ. ನಿಮಗೆ ನೃತ್ಯ ಗೊತ್ತಿದ್ದರೇ ಸಾಕು ಎಲ್ಲಿ ಯಾವ ಹಾಡಿಗೆ ಬೇಕಾದರೂ ನೀವು ಕುಣಿಯಬಹುದು. ಆದರೆ ಕೆಲವು ಹಾಡುಗಳು ಅವುಗಳಿಗೆ ನೀಡಿರುವ ಸಂಗೀತಾ ಇದುವರೆಗೆ ಡಾನ್ಸ್‌ ಮಾಡದವರನ್ನು ಎಗ್ಗು ಸಿಗ್ಗಿಲ್ಲದೇ ಕುಣಿಸುತ್ತವೆ. ಇಲ್ಲಿ ನಾವು ನಿಮಗೆ ತೋರಿಸಲು ಹೊರಟಿರುವ ವಿಡಿಯೋ ಕೂಡ ಅಂತಹದ್ದೇ.

ಬಾಲಿವುಡ್‌ ನಟ ಹೃತಿಕ್ ರೋಷನ್ (Hrithik Roshan) ಅವರ 'ಬ್ಯಾಂಗ್ ಬ್ಯಾಂಗ್' (Bang Bang) ಹಾಡಿಗೆ ಮಹಿಳೆಯೊಬ್ಬರು ಎರ್ರಾಬಿರ್ರಿ ಕುಣಿದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ನಗು, ಖುಷಿ ಅಚ್ಚರಿ ಮೂಡಿಸುತ್ತಿದೆ. ಬಹುಶಃ ಇದು ಪಾರ್ಟಿಯೊಂದರ ದೃಶ್ಯಾವಳಿಯಾಗಿದ್ದು, ವೀಡಿಯೊದಲ್ಲಿ ಮಹಿಳೆ ಕೆಂಪು ಸೀರೆಯನ್ನು ಧರಿಸಿ ಗುಂಪಿನ ಮಧ್ಯೆ ಎದ್ದು ಬಿದ್ದು ಸಖತ್‌ ಎನರ್ಜಿಟಿಕ್‌ ಆಗಿ ಡಾನ್ಸ್‌ ಮಾಡುತ್ತಿದ್ದಾರೆ. ಇವರ ಡಾನ್ಸ್‌ಗೆ ಸುತ್ತಲು ಡಾನ್ಸ್‌  ಮಾಡುತ್ತಿದ್ದವರು ಕೂಡ ಸ್ವಲ್ಪ ಕಾಲ ತಮ್ಮ ಡಾನ್ಸ್‌ ನಿಲ್ಲಿಸಿ ಇವರಿಗೆ ಚಪ್ಪಾಳೆ ತಟ್ಟಿದ್ದಾರೆ. ಮತ್ತೆ  ಕೆಲವರು ಆಶ್ಚರ್ಯದಿಂದ ನೋಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. 

ಡಾನ್ಸ್ ಮಾಡುವವರು ತಮ್ಮನ್ನು ಯಾರೂ ನೋಡುತ್ತಿಲ್ಲ ಎಂದು ಭಾವಿಸಿಕೊಂಡು ಕುಣಿಯಬೇಕು ಎಂಬ ಮಾತು ಡಾನ್ಸ್ ವಲಯದಲ್ಲಿ ಪ್ರಚಲಿತವಿದೆ. ಆದರೆ ಈ ವಿಡಿಯೋ ನೋಡಿದರೆ ಅದು ನಿಜ ಎಂಬುದು ಮತ್ತೆ ಸಾಬೀತಾಗಿದೆ. ಯಾರು ಬೇಕಾದರೂ ನೋಡಲಿ ಡೋಂಟ್‌ಕೇರ್‌ ಎಂಬಂತೆ ಈ ಮಹಿಳೆ ಭರ್ಜರಿಯಾಗಿ ಡಾನ್ಸ್‌ ಮಾಡಿದ್ದಾರೆ. 

ಹೃತಿಕ್ ರೋಷನ್ (Hrithik Roshan) ಅವರ 'ಬ್ಯಾಂಗ್ ಬ್ಯಾಂಗ್' ಚಿತ್ರದಲ್ಲಿ ಕತ್ರಿನಾ ಕೈಫ್ ಸಹನಟಿಯಾಗಿ ನಟಿಸಿದ್ದಾರೆ. ಈ ಹಾಡನ್ನು ಬೆನ್ನಿ ದಯಾಳ್ (Benny Dayal) ಮತ್ತು ನೀತಿ ಮೋಹನ್  ( Neeti Mohan)ಹಾಡಿದ್ದಾರೆ. ನಿಸರ್ಗ್ ಮೀಡಿಯಾ ಪ್ರೊಡಕ್ಷನ್ಸ್ (Nisarg Media Productions)ಅವರು ಈ ವಿಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದು,  ನಂತರ ಛಾಯಾಗ್ರಾಹಕ ವೈರಲ್ ಭಯಾನಿ (Viral Bhayani)ಅವರು ಕೂಡ ಈ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. (ದಿಸ್‌ ದಿದಿ ರಾಕ್ಸ್‌) ಈ ಅಕ್ಕ ಮಿಂಚುತ್ತಿದ್ದಾರೆ ಎಂದು ಈ ವಿಡಿಯೋಗೆ ಕ್ಯಾಪ್ಷನ್‌ ಬರೆಯಲಾಗಿದೆ. 

Bride Groom Dance: ಇನ್ಸ್ಟಾಗ್ರಾಮ್‌ನಲ್ಲಿ ವೈರಲ್‌ ಆಯ್ತು ವಧು ವರನ ಜಬರ್‌ದಸ್ತ್‌ ಡಾನ್ಸ್‌

ಈ ವಿಡಿಯೋವನ್ನು ಇದುವರೆಗೆ 65,000ಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ನೆಟ್ಟಿಗರು ಕೂಡ ಮಹಿಳೆಯ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಒಬ್ಬ ವೀಕ್ಷಕರು,  'ವಯಸ್ಸು ಕೇವಲ ಒಂದು ಸಂಖ್ಯೆ' ಮಾತ್ರ ಎಂದು ಬರೆದರೆ, ಇನ್ನೊಬ್ಬರು, ಡಾನ್ಸ್‌ ಮಾಡುವ ಮಹಿಳೆ ಹಾಡಿನ  ಪ್ರತಿಯೊಂದು ಬಿಟ್ ಅನ್ನು ಆನಂದಿಸುವ ರೀತಿಯನ್ನು ಪ್ರೀತಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಈ ಬ್ಯಾಂಗ್ ಬ್ಯಾಂಗ್ ಹಾಡಿಗೆ ಈ ಹಿಂದೆಯು ಅನೇಕರು ಡಾನ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಫೇಮಸ್‌ ಆಗಿದ್ದರು. 

ಬಿಜ್ಲಿ ಬಿಜ್ಲಿ ಹಾಡಿಗೆ ಸೊಂಟ ಬಳುಕಿಸಿದ ಅಪ್ಪ ಮಗಳು... ವಾಹ್ ಎಂದ ನೆಟ್ಟಿಗರು  

ಮೊನ್ನೆಯಷ್ಟೇ ಸ್ಪೈಸ್‌ ಜೆಟ್‌ (SpiceJet Air) ಗಗನಸಖಿಯೊಬ್ಬರು ಧವನಿ ಭಾನುಶಾಲಿ(Dhvani Bhanushali) ಅವರ ಮೆರಾ ಯಾರ್‌(Mera Yaar) ಹಾಡಿಗೆ ಖಾಲಿ ವಿಮಾನದಲ್ಲಿ ಜಬರ್‌ದಸ್ತ್‌ ಆಗಿ ನೃತ್ಯ ಮಾಡಿದ್ದು  ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಹಿಂದೆಯೂ ಈ ಸ್ಪೈಸ್‌ಜೆಟ್‌ ಗಗನಸಖಿ ಉಮಾ ಮೀನಾಕ್ಷಿ (Uma Meenakshi), ನವ್ರೈ ಮಾಜಿ ಹಾಗೂ ಲೇಜಿ ಲಾಡ್‌ ಹಾಡುಗಳಿಗೆ  ನೃತ್ಯ ಮಾಡಿ ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದರು. 

click me!