ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿದ್ದ ಎಲ್ಲಾ ಅರ್ಜಿ ತನಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್ !

By Suvarna News  |  First Published Jan 6, 2023, 8:43 PM IST

ಭಾರತದಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವ ಕುರಿತು ಚರ್ಚೆಗಳು ಜೋರಾಗುತ್ತಿದೆ. ಈಗಾಗಲೇ ಹಲವು ಹೈಕೋರ್ಟ್‌ಗಳಲ್ಲಿ ಈ ಕುರಿತು ಅರ್ಜಿಗಳಿವೆ. ಇಂದು ಈ ಎಲ್ಲಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ತನಗೆ ವರ್ಗಾಯಿಸಿಕೊಂಡಿದೆ.


ನವದೆಹಲಿ(ಜ.06): ಭಾರತದಲ್ಲಿ ಸಲಿಂಕ ವಿವಾಹಕ್ಕೆ ಸದ್ಯಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಆದರೆ ಸಲಿಂಗಿಗಳ ವಿವಾಹಕ್ಕೆ ಕಾನೂನಿನ ಮಾನ್ಯತೆ ಬೇಕಿದೆ ಅನ್ನೋ ಅರ್ಜಿ, ಮನವಿಗಳು ಸಾಕಷ್ಟಿವೆ. ದೇಶದ ಬಹುತೇಕ ಹೈಕೋರ್ಟ್‌ಗಳಲ್ಲಿ ಈ ಕುರಿತ ಅರ್ಜಿಗಳು ವಿಚಾರಣೆಯಾಗದೇ ಬಾಕಿ ಉಳಿದಿದೆ. ಇಂದು ಮಹತ್ವದ ಹೆಜ್ಜೆ ಇಟ್ಟ ಸುಪ್ರೀಂ ಕೋರ್ಟ್ ದೇಶದ ವಿವಿಧ ಕೋರ್ಟ್‌ಗಳಲ್ಲಿ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ಕೋರಿ ಹಾಕಿರುವ ಅರ್ಜಿಗಳಲ್ಲಿ ಬಾಕಿ ಉಳಿದಿರುವ ಎಲ್ಲಾ ಮನವಿಗಳನ್ನು ಸುಪ್ರೀಂ ಕೋರ್ಟ್ ತನಗೆ ವರ್ಗಾಯಿಸಿಕೊಂಡಿದೆ.  

ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತ ನ್ಯಾಯಮೂರ್ತಿಗಳಾದ ಪಿ ನರಸಿಂಹ ಹಾಗೂ ಜೆಬಿ ಪರ್ದಿವಾಲ ಅವರಿದ್ದ ಪೀಠ ಈ ಅರ್ಜಿಗಳ ವಿಚಾರಣೆ ನಡೆಸಲಿದೆ. ಈ ಪೀಠ ಜನವರಿ 15ರೊಳಗೆ ಜಂಟಿ ಉತ್ತರ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇಷ್ಟೇ ಅಲ್ಲ ಈ ಎಲ್ಲಾ ಅರ್ಜಿಗಳನ್ನು ಮಾರ್ಚಿ ತಿಂಗಳಲ್ಲಿ ಪಟ್ಟಿಮಾಡಲಾಗುವುದು ಎಂದು ಪೀಠ ಹೇಳಿದೆ. 

Tap to resize

Latest Videos

ಸ್ವ ಇಚ್ಛೆಯಿಂದ ಇಬ್ಬರು ಮಹಿಳೆಯರು ಒಟ್ಟಿಗೆ ಇರಲು ಬಯಸಿದರೆ ತಡೆಯಲಾಗಲ್ಲ: ಹೈಕೋರ್ಟ್

ಮಂಗಳಮುಖಿ, ಲಿಂಗಪರಿವರ್ತಿತ, ಸಲಿಂಗಿ, ದ್ವಿಲಿಂಗಿ, ಅಂತರ್‌ಲಿಂಗ್, lgbtq  ಸೇರಿದಂತೆ ಸಲ್ಲಿಸಿರುವ ಅರ್ಜಿಗಳು ಇದೀಗ ಸುಪ್ರೀಂ ಕೋರ್ಟ್‌ಗೆ ವರ್ಗಾವಣೆ ಆಗಲಿದೆ. ಇವರು ತಮ್ಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡುವಂತೆ ಕೋರಿ ವಿವಿಧ ಹೈಕೋರ್ಟ್‌ಗಳಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.   

ಈಗಾಗಲೇ ಅರ್ಜಿ ಸಲ್ಲಿಸಿರುವ ಅರ್ಜಿದಾರರು ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವಾಗದೇ ಇದ್ದರೆ, ಇವರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿ ಅಹವಾಲು ಸಲ್ಲಿಸಲು ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಎಲ್ಲರೂ ಲಿಖಿತ ಅಹವಾಲು ಸಲ್ಲಿಸಿದ ಬಳಿಕ ಮಾರ್ಚ್ ತಿಂಗಳಲ್ಲಿ ಪಟ್ಟಿ ಮಾಡಲಾಗುತ್ತದೆ. ಬಳಿಕ ಮಾರ್ಚ್ 13 ರಂದು ವಿಚಾರಣೆ ಆರಂಭಿಸುವುದಾಗಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಹೇಳಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ನೋಡೆಲ್ ವಕೀಲೆಯಾಗಿ ಅರಂಧತಿ ಕಾಟ್ಜು ನೇಮಕ ಮಾಡಲಾಗಿದೆ. ಇತ್ತ ಕೇಂದ್ರ ಸರ್ಕಾರದ ಪರ ನೋಡಲ್ ಅಧಿಕಾರಿಯಾಗಿ ನ್ಯಾಯವಾದಿ ಕನು ಅಗರ್ವಾಲ್ ಅವರನ್ನು ನೇಮಕ ಮಾಡಲಾಗಿದೆ. 2018ರಲ್ಲಿ ಸುಪ್ರೀಂ ಕೋರ್ಚ್‌ ಸಲಿಂಗ ರತಿಯನ್ನು ಸಕ್ರಮಗೊಳಿಸಿತ್ತು. ಆದರೆ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ.

Homosexual Wedding: ಬಾಂಗ್ಲಾದೇಶದ ಯುವತಿ-ತಮಿಳುನಾಡಿನ ಹುಡುಗಿಯ ಅದ್ಧೂರಿ ಮದುವೆ

ಸಲಿಂಗ ವಿವಾಹಕ್ಕೆ ಬಿಜೆಪಿ ಸಂಸದ ಸುಶೀಲ್‌ ಮೋದಿ ಪ್ರಬಲ ವಿರೋಧ
ಸಲಿಂಗ ವಿವಾಹಕ್ಕೆ ಕಾನೂನುನ ಮಾನ್ಯತೆ ಸಿಗುವಂತೆ ಮಾಡಲು ಹಲವಾರು ಎಡಪಂಥೀಯ ಹೋರಾಟಗಾರರು ಪ್ರಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಗಳನ್ನು ಸರ್ಕಾರ ಪ್ರಬಲವಾಗಿ ವಿರೋಧಿಸಬೇಕು’ ಎಂದು ಹಿರಿಯ ಬಿಜೆಪಿ ಸಂಸದ ಸುಶೀಲ್‌ ಕುಮಾರ್‌ ಮೋದಿ ಹೇಳಿದ್ದರು. ಸಂಸತ್ತಿನ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಸುಶೀಲ್‌ ಮೋದಿ, ‘ಭಾರತದಲ್ಲಿ ಸಲಿಂಗ ವಿವಾಹ ಅಧಿಕೃತವಲ್ಲ. ಮುಸ್ಲಿಂ ವೈಯಕ್ತಿಕ ಕಾನೂನು ಅಥವಾ ಯಾವುದೇ ರೀತಿ ಧಾರ್ಮಿಕ ಕಾನೂನುಗಳಲ್ಲೂ ಇದಕ್ಕೆ ಅವಕಾಶವನ್ನು ನೀಡಿಲ್ಲ. ದೇಶದ ಸಂಸ್ಕೃತಿಗೆ ಇದು ವಿರುದ್ಧವಾಗಿದೆ. ಹೀಗಾಗಿ ನ್ಯಾಯಾಲಯದಲ್ಲಿ ಕುಳಿತ ಇಬ್ಬರು ನ್ಯಾಯಾಧೀಶರು ಇಂತಹ ಮಹತ್ವದ ಸಾಮಾಜಿಕ ವಿಚಾರಗಳ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಾರದು. ದೇಶದ ಜನರನ್ನು ಪ್ರತಿನಿಧಿಸುವ ಸಂಸತ್ತಿನಲ್ಲಿ ಈ ವಿಚಾರದ ಚರ್ಚೆಗೆ ಅವಕಾಶ ನೀಡಬೇಕು’ ಎಂದು ವಿನಂತಿಸಿಕೊಂಡರು.
 

click me!