ಆತ್ಮೀಯ ಗೆಳೆಯರ ಸಮ್ಮಿಲನ, ಸತ್ಯ ನಾದೆಲ್ಲಾ, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಭೇಟಿ!

By Suvarna NewsFirst Published Jan 6, 2023, 8:04 PM IST
Highlights

ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹಾಗೂ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲ ಭೇಟಿಯಾಗಿದ್ದಾರೆ. ಈ ಭೇಟಿ ಹಲವು ಕಾರಣಗಳಿಂದ ವಿಶೇಷವಾಗಿತ್ತು. ಕಾರಣ ಇವರಿಬ್ಬರು ಮಣಿಪಾಲ ಎಂಜಿನೀಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿಗಳು, ಇಷ್ಟೇ ಅಲ್ಲ ಆತ್ಮೀಯ ಗೆಳೆಯರು. ಈ ಕುತೂಹಲದ ಭೇಟಿ ಮಹತ್ವದ ಮಾಹಿತಿ ಇಲ್ಲಿದೆ.

ನವದೆಹಲಿ(ಜ.06): ಮೈಕ್ರೋಸಾಫ್ಟ್ ಸಂಸ್ಥೆಯ ಅಧ್ಯಕ್ಷ ಮತ್ತು ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಸತ್ಯ ನಾದೆಲ್ಲ ಕೆಲ ದಿನಗಳಿಂದ ಭಾರತದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಜೊತೆ ಮಹತ್ವದ ಮಾತುಕತೆ ನಡೆಸಿದ್ದ ಸತ್ಯ ನಾದೆಲ್ಲ ಇಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜೊತೆ ಮಾತುಕತೆ ನಡೆಸಿದ್ದಾರೆ. ರಾಜೀವ್ ಚಂದ್ರಶೇಖರ್ ಜೊತೆಗಿನ ಮಾತುಕತೆಗೂ ಹೆಚ್ಚಾಗಿ ಇದು ಸ್ನೇಹಿತರ ಸಮ್ಮಿಲನವಾಗಿತ್ತು. ಕಾರಣ ಇವರಿಬ್ಬರು ಕಾಲೇಜು ದಿನಗಳಿಂದ ಆತ್ಮೀಯರು. ಒಂದೇ ಕಾಲೇಜಿನಲ್ಲಿ ಎಂಜಿನೀಯರ್ ಪದವಿ ಮುಗಿಸಿದ ವಿದ್ಯಾರ್ಥಿಗಳು. ಈಗ ತಮ್ಮ ತಮ್ಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ದಕ್ಷರಾಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸತ್ಯ ನಾದೆಲ್ಲ ಹಾಗಾ ರಾಜೀವ್ ಚಂದ್ರಶೇಖರ್ ನಡುವಿನ ಭೇಟಿ ಅಧಿಕೃತ ಮಾತುಕತೆಗಿಂತ ಹೆಚ್ಚಾಗಿ ಗೆಳೆಯರ ಸ್ಮಮಿಲನವಾಗಿತ್ತು.

ಭಾರತದಲ್ಲಿ ತಂತ್ರಜ್ಞಾನದ ಬೆಳವಣಿಗೆ, ಜೊತೆಗೆ ಪೂರಕ ವಾತವಾರಣ ಸೃಷ್ಟಿಸಲು ಕೇಂದ್ರ ಸರ್ಕಾರ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಡಿಜಿಟಲ್ ಇಂಡಿಯಾ ಮೂಲಕ ವಿಶ್ವದಲ್ಲೇ ಕ್ರಾಂತಿಯ ಎಲೆ ಎಬ್ಬಿಸಿರುವ ಭಾರತ ಟೆಕ್ ದಿಗ್ಗಜ ಕಂಪನಿಗಳ ಆದ್ಯತೆಯ ರಾಷ್ಟ್ರವಾಗಿದೆ. ಈಗಾಗಲೇ ತಂತ್ರಜ್ಞಾನ ಕ್ಷೇತ್ರದಲ್ಲಿ ಹೂಡಿಕೆ ಹರಿದು ಬರುತ್ತಿದೆ. ಇದರ ಬೆನ್ನಲ್ಲೇ ಸತ್ಯ ನಾದೆಲ್ಲ ಭಾರತದಲ್ಲಿ ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆ ಕುರಿತು ಕೇಂದ್ರ ಸರ್ಕಾರದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಇಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಜೊತೆಗೂ ಮಾತುಕತೆ ನಡೆಸಿದ್ದಾರೆ

ಪ್ರಧಾನಿ ಮೋದಿ ಭೇಟಿ ಮಾಡಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಪ್ರಧಾನಿ ಮೋದಿ ಬೇಟಿಯಾಗಿದ್ದ ಸತ್ಯ ನಾದೆಲ್ಲ
ನಿನ್ನೆ(ಜ.05) ಸತ್ಯ ನಾದೆಲ್ಲ, ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿದ್ದರು. ಈ ವೇಳೆ ಭಾರತದ ತಂತ್ರಜ್ಞಾನ ಬೆಳವಣಿಗೆ ಕುರಿತು ಮಹತ್ವದ ಮಾತುಕತೆ ನಡೆಸಿದ್ದರು. ಬೇಟಿ ಬಳಿಕ ಖುದ್ದು ಮೋದಿ ಮಹತ್ವದ ಮಾಹಿತಿ ಹಂಚಿಕೊಂಡಿದ್ದರು. ತಂತ್ರಜ್ಞಾನ ಮತ್ತು ನಾವೀನ್ಯತೆಗಳಲ್ಲಿ ಭಾರತವು ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆಯ ನೂತನ ಯುಗವನ್ನು ಪ್ರಾರಂಭಿಸುತ್ತಿದೆ ಎಂದು ಮೋದಿ ಹೇಳಿದ್ದರು.  

ಈ ಕುರಿತು ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ,  ಸತ್ಯ ನಾದೆಲ್ಲಾ ಭೇಟಿಯಾಗಿರುವುದಕ್ಕೆ ಸಂತೋಷವಾಗಿದೆ. ಭಾರತವು ಪ್ರಗತಿಪರ ಹೆಜ್ಜೆಗಳ ಮೂಲಕ ತಂತ್ರಜ್ಞಾನ-ನೇತೃತ್ವದ ಬೆಳವಣಿಗೆಯ ನೂತನ ಯುಗವನ್ನು ಪ್ರಾರಂಭಿಸುತ್ತಿದೆ. ನಮ್ಮ ಯುವಕರು ಸಂಪೂರ್ಣ ಗ್ರಹವನ್ನು ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿರುವ ಆಲೋಚನೆ ಹೊಂದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದರು.

click me!