ಸುಪ್ರೀಂ ಚೀಫ್ ಜಸ್ಟೀಸ್ ಜೊತೆ ಇಬ್ಬರು ಮಕ್ಕಳು ಕೋರ್ಟ್‌ಗೆ ಹಾಜರ್, ವಿಶೇಷ ಪ್ರಯತ್ನಕ್ಕೆ ಮೆಚ್ಚುಗೆ!

By Suvarna NewsFirst Published Jan 6, 2023, 7:14 PM IST
Highlights

ಕೋರ್ಟ್‌ಗೆ ಆಗಮಿಸಿದ ಹಿರಿಯ ವಕೀಲರು, ನ್ಯಾಯಮೂರ್ತಿಗಳು ಸೇರಿದಂತೆ ಹಲವರಿಗೆ ಅಚ್ಚರಿ ಕಾದಿತ್ತು. ಕಾರಣ ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಜೊತೆಗೆ ಅವರ ಇಬ್ಬರು ಮಕ್ಕಳು ಕೋರ್ಟ್‌ಗೆ ಹಾಜರಾಗಿದ್ದರು. ಚೀಫ್ ಜಸ್ಟೀಸ್ ಪ್ರಯತ್ನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
 

ನವದೆಹಲಿ(ಜ.06):  ಸುಪ್ರೀಂ ಕೋರ್ಟ್ ಇಂದು ಕೆಲ ವಿಶೇಷತೆಗಳಿಗೆ ಸಾಕ್ಷಿಯಾಗಿತ್ತು. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಕೋರ್ಟ್‌ಗೆ ಹಾಜರಾಗಿದ್ದರು. ಇವರ ಜೊತೆಗೆ ಜಸ್ಟೀಸ್ ಚಂದ್ರಚೂಡ್ ಅವರ ಇಬ್ಬರು ಮಕ್ಕಳು ಸುಪ್ರೀಂ ಕೋರ್ಟ್ ಹಾಲ್‌ನಲ್ಲಿ ಹಾಜರಿದ್ದರು. ಇದು ನ್ಯಾಯಮೂರ್ತಿಗಳು, ಹಿರಿಯ ವಕೀಲರು ಸೇರಿದಂತೆ ಹಲವರಿಗೆ ಅಚ್ಚರಿ ಕಾದಿದೆ. ಚೀಫ್ ಜಸ್ಟೀಸ್ ಆಫ್ ಇಂಡಿಯಾ ಚಂದ್ರಚೂಡ್ ಅವರ 16 ವರ್ಷದ ಮಾಹಿ ಹಾಗೂ 20 ವರ್ಷದ ಪ್ರಿಯಾಂಕ ಇಬ್ಬರು ಕೋರ್ಟ್‌ನಲ್ಲಿ ಹಾಜರಿದ್ದರು. ಜಸ್ಟೀಸ್ ಚಂದ್ರಚೂಡ್ ತಮ್ಮ ಇಬ್ಬರು ಮಕ್ಕಳನ್ನು ಕೋರ್ಟ್‌ಗೆ ಕರೆ ತರಲು ಕಾರಣವಿದೆ. ಕೋರ್ಟ್‌ ಹೇಗೆ ನಡೆಯುತ್ತದೆ? ಕೋರ್ಟ್ ರೂಂ, ತಮ್ಮ ಚೇಂಬರ್ ಹೇಗಿರುತ್ತದೆ? ಅನ್ನೋ ಕುರಿತು ಮಾಹಿತಿ ನೀಡಲು ಮಕ್ಕಳನ್ನು ಕೋರ್ಟ್ ಹಾಲ್‌ಗೆ ಕರೆ ತಂದಿದ್ದರು.

ಬೆಳಗ್ಗೆ 10ಗಂಟೆಗೆ ಜಸ್ಟೀಸ್ ಚಂದ್ರಚೂಡ್ ತಮ್ಮ ವಿಶೇಷಚೇತನ ಮಕ್ಕಳಾದ ಮಾಹಿ ಹಾಗೂ ಪ್ರಿಯಾಂಕ ಜೊತೆ ಕೋರ್ಟ್ ಆವರಣ ಪ್ರವೇಶಿಸಿದ್ದಾರೆ. ಸುಪ್ರೀಂ ಕೋರ್ಟ್ ರೂಂ.1ಕ್ಕೆ ತೆರಳಿದ ಜಸ್ಟೀಸ್ ಚಂದ್ರಚೂಡ್, ಮಕ್ಕಳಿಗೆ ಕೋರ್ಟ್‌ನಲ್ಲಿ ವಾದ ವಿವಾದಗಳು ಹೇಗಿರುತ್ತದೆ? ವಕೀರಲು ಎಲ್ಲಿ ಕುಳಿತಿರುತ್ತಾರೆ, ನ್ಯಾಯಾಲಯದ ಕಟಕಟೆ, ಸಾರ್ವಜನಿಕರ ಉಪಸ್ಥಿತಿ ಸೇರಿದಂತೆ ಎಲ್ಲಾ ಮಾಹಿತಿಯನ್ನು ಖುದ್ದಾಗಿ ಜಸ್ಟೀಸ್ ಚಂದ್ರಚೂಡ್ ನೀಡಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಾಧೀಶ, ಕನ್ನಡಿಗ ನ್ಯಾ.ನಜೀರ್‌ ನಿವೃತ್ತಿ

ಕೋರ್ಟ್ ಹಾಲ್‌ನಿಂದ ಬಳಿಕ ಮಕ್ಕಳನ್ನು ತಮ್ಮ ಚೇಂಬರ್‌ಗೆ ಕರೆದುಕೊಂಡ ಹೋದು ಜಸ್ಟೀಸ್ ಚಂದ್ರಚೂಡ್ ಮಾಹಿತಿ ನೀಡಿದರು. ಸುಪ್ರೀಂ ಕೋರ್ಟ್‌ನಲ್ಲಿ ಕೋರ್ಟ್ ಕಲಾಪ ಹೇಗಿರುತ್ತದೆ ಅನ್ನೋ ಮಾಹಿತಿಯನ್ನು ನೀಡಿದ್ದಾರೆ. ಸುಪ್ರೀಂ ಕೋರ್ಟ್ ಒಳಗಡೆ ನೋಡಬೇಕು, ಕೋರ್ಟ್ ವಾದ ವಿವಾದ ಹೇಗಿರುತ್ತದೆ ಅನ್ನೋದನ್ನು ವೀಕ್ಷಿಸಬೇಕು ಎಂದು ಜಸ್ಟೀಸ್ ಚಂದ್ರಚೂಡ್ ಮಕ್ಕಳು ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಕರೆದುಕೊಂಡು ಬಂದು ಮಾಹಿತಿ ನೀಡಿದ್ದರು. ಜಸ್ಟೀಸ್ ಚಂದ್ರಚೂಡ್ ನಡೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಯುವಕನಿದ್ದಾಗ ರೇಡಿಯೋ ಜಾಕಿ ಆಗಿದ್ದೆ: ನ್ಯಾ ಚಂದ್ರಚೂಡ್‌
ಸುಪ್ರೀಂ ಕೋರ್ಚ್‌ ಮುಖ್ಯ ನ್ಯಾಡಿ.ವೈ ಚಂದ್ರಚೂಡ್‌ ಅವರು ತಾವು ಈ ಹಿಂದೆ ರೇಡಿಯೋ ನಿರೂಪಕರಾಗಿ ಕೆಲಸ ಮಾಡಿದ್ದ ಕುತೂಹಲದ ವಿಷಯ ಬಹಿರಂಗಪಡಿಸಿದ್ದಾರೆ. ಮಾರಂಭವೊಂದರಲ್ಲಿ ಮಾತನಾಡಿದ ಅವರು ‘ನನ್ನ 20ನೇ ವಯಸ್ಸಿನಲ್ಲಿ ಆಲ್‌ ಇಂಡಿಯಾ ರೇಡಿಯೋ ಸ್ಟೇಷನ್‌ನಲ್ಲಿ ನಾನು ರೇಡಿಯೋ ಜಾಕಿ ಆಗಿ ಪಾರ್ಚ್‌ ಟೈಮ್‌ ಕೆಲಸ ಮಾಡಿದ್ದೆ. ‘ಪ್ಲೇ ಇಟ್‌ ಕೂಲ್‌’, ‘ಸಂಡೇ ರಿಕ್ವೆಸ್ಟ್‌’, ‘ಡೇಟ್‌ ವಿತ್‌ ಯೂ’ ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದೆ’ ಎಂದರು.

ಅಲ್ಲದೇ ‘ಸಂಗೀತದ ಮೇಲಿನ ನನ್ನ ಪ್ರೀತಿ ಇಂದಿಗೂ ಮುಂದುವರಿದಿದೆ. ದಿನವೂ ವಕೀಲರ ಸಂಗೀತ ( ಕೋರ್ಚ್‌ನಲ್ಲಿ ವಕೀಲರ ವಾದ-ಪ್ರತಿವಾದ) ಮುಗಿದ ಬಳಿಕ ನಾನು ಪ್ರತಿ ನಿತ್ಯ ಸಂಗೀತ ಕೇಳುತ್ತೇನೆ’ ಎಂದು ಚಟಾಕಿ ಹಾರಿಸಿದರು.

ಶಾಸಕ, ಸಂಸದರ ಮಾತಿಗೆ ಹೆಚ್ಚುವರಿ ನಿರ್ಬಂಧ ಅಸಾಧ್ಯ: ಸುಪ್ರೀಂಕೋರ್ಟ್‌

ಕೇಸ್‌ ಫೈಲ್‌ ಇಲ್ಲದೇ ವಿಚಾರಣೆಗೆ ಬರುವುದು, ಬ್ಯಾಟ್‌ ಇಲ್ಲದೇ ಸಚಿನ್‌ ತೆಂಡುಲ್ಕರ್‌ ಕ್ರಿಕೆಟ್‌ ಆಡಲು ಬಂದಂತೆ ಎಂದು ಕೇಸ್‌ ಫೈಲ್‌ ಮರೆತು ಬಂದ ವಕೀಲರೊಬ್ಬರಿಗೆ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಪಾಠ ಮಾಡಿದ ಘಟ ನೆ ಶುಕ್ರವಾರ ಸುಪ್ರೀಂ ಕೋರ್ಚ್‌ನಲ್ಲಿ ನಡೆದಿದೆ. ಸಿಜೆಐ ಚಂದ್ರಚೂಡ್‌ ಮತ್ತು ನ್ಯಾ ಹಿಮಾ ಕೊಹ್ಲಿ ಅವರಿದ್ದ ಪೀಠದ ಎದುರು ವಾದ ಮಂಡಿಸಲು ಹಾಜರಾದ ವಕೀಲರೊಬ್ಬರು ತಮ್ಮ ಕೇಸ್‌ ಫೈಲ್‌ ಮರೆತು ಬಂದಿದ್ದರು. ಇದನ್ನು ಗಮನಿಸಿದ ಸಿಜೆಐ, ನೀವು ಗೌನ್‌ ಧರಿಸಿದ್ದೀರಿ ಆದರೆ ಪೇಪರ್‌ ಇಲ್ಲ. ವಕೀಲರೊಬ್ಬರು ಈ ರೀತಿ ಬರುವುದು, ಸಚಿನ್‌ ಬ್ಯಾಟ್‌ ಮರೆತು ಹೋದಂತೆ ಆಗುತ್ತದೆ. ಇದು ಸರಿಯಲ್ಲ. ನಿಮ್ಮ ಕೇಸ್‌ಫೈಲ್‌ ನಿಮ್ಮ ಜೊತೆ ಯಾವಾಗಲೂ ಇರಬೇಕು ಎಂದು ಹೇಳಿದರು.

click me!