ಪರಸ್ಪರ ರಿಂಗ್‌ ಬದಲಾಯಿಸಿಕೊಂಡ ಇಬ್ಬರು ಮಹಿಳಾ ವೈದ್ಯರು, ಗೋವಾದಲ್ಲಿ ಮದುವೆ

By Suvarna News  |  First Published Jan 11, 2022, 9:36 PM IST
  • ನಿಶ್ಚಿತಾರ್ಥ ಮಾಡಿಕೊಂಡ ಸಲಿಂಗಿ ವೈದ್ಯ ಜೋಡಿ
  • ನಾಗಪುರದಲ್ಲಿ ನಿಶ್ಚಿತಾರ್ಥ, ಗೋವಾದಲ್ಲಿ ಮದುವೆ

ನಾಗಪುರ(ಜ.11):  ಇತ್ತೀಚೆಗೆ ಮಹಾರಾಷ್ಟ್ರದ ನಾಗಪುರದಲ್ಲಿ ಮಹಿಳಾ ವೈದ್ಯರಿಬ್ಬರು ಪರಸ್ಪರ ಉಂಗುರ ಬದಲಾಯಿಸಿಕೊಂಡಿದ್ದು, ಗೋವಾದಲ್ಲಿ ವಿವಾಹವಾಗಲಿದ್ದಾರೆ. ಬದ್ಧತೆಯ ಉಂಗುರ ಬದಲಾವಣೆ ಕಾರ್ಯಕ್ರಮ ಎಂದು ಅವರಿದ್ದನ್ನು ಕರೆದಿದ್ದು ಇಬ್ಬರು ಕೊನೆವರೆಗೆ ಜೊತೆಯಾಗಿ ಜೀವಿಸುವ ಶಪಥ ಮಾಡಿದ್ದಾರೆ. ಅವರು ತಮ್ಮ ಮದುವೆಯ ಬಗ್ಗೆಯೂ ಸಿದ್ಧತೆ ನಡೆಸುತ್ತಿದ್ದು, ಗೋವಾದಲ್ಲಿ ಈ ವರ್ಷ ಸಿವಿಲ್ ಯೂನಿಯನ್‌ ಹೆಸರಲ್ಲಿ ಇವರಿಬ್ಬರು ಮದುವೆಯಾಗಲಿದ್ದಾರೆ. 

ವೈದ್ಯೆ ಸುರ್ಭಿ ಮಿತ್ರಾ (Surbhi Mitra) ಮತ್ತು ಪರೋಮಿತಾ ಮುಖರ್ಜಿ(Paromita Mukherjee) ಇವರೇ ಪರಸ್ಪರ ವಿವಾಹವಾಗುತ್ತಿರುವ ಸಲಿಂಗಿ ಜೋಡಿಗಳು. ಇವರು ಇತ್ತೀಚೆಗೆ ನಾಗಪುರದಲ್ಲಿ ತಮ್ಮ ವಿವಾಹ ನಿಶ್ಚಿತಾರ್ಥವನ್ನು ಮಾಡಿಕೊಂಡಿದ್ದರು. ಈ ವೇಳೆ ಇವರಿಬ್ಬರು ತಾವು ಒಟ್ಟಿಗೆ ಜೀವನ ಮಾಡುವುದಾಗಿ ಹೇಳಿದ್ದರು.
ಕೋಲ್ಕತ್ತಾದ (Kolkata) ಮಾನಸಿಕ ಆರೋಗ್ಯ ಸಮ್ಮೇಳನದಲ್ಲಿ ಅವರಿಬ್ಬರೂ ಮೊದಲ ಬಾರಿಗೆ ಭೇಟಿಯಾಗಿದ್ದರು.

Tap to resize

Latest Videos

ಮೊದಲ ಭೇಟಿ, ಪ್ರಣಯ ವಿವಾಹದ ಬಗ್ಗೆ ಮನ ಬಿಚ್ಚಿ ಮಾತಾಡಿದ ಸಲಿಂಗಿ ಜೋಡಿ

ಈ ಸಮಯದಲ್ಲಿ ಅವರು ಮೊಬೈಲ್‌ ಸಂಖ್ಯೆಯನ್ನು ವಿನಿಮಯ ಮಾಡಿಕೊಂಡಿದ್ದರು ಮತ್ತು ಆನ್‌ಲೈನ್‌ನಲ್ಲಿ ಮಾತನಾಡಲು ಪ್ರಾರಂಭಿಸಿದರು. ಶೀಘ್ರದಲ್ಲೇ ಅವರ ಸಂಬಂಧವು ಅರಳಿತು. ಮಾಧ್ಯಮಗಳೊಂದಿಗೆ ಈ ಬಗ್ಗೆ ಮಾತನಾಡಿದ ಪರೋಮಿತಾ ಮುಖರ್ಜಿ, ನನ್ನ ಲೈಂಗಿಕ ದೃಷ್ಟಿಕೋನದ ಬಗ್ಗೆ ನನ್ನ ತಂದೆಗೆ 2013 ರಿಂದಲೂ ತಿಳಿದಿತ್ತು. ನಾನು ಇತ್ತೀಚೆಗೆ ನನ್ನ ತಾಯಿಗೆ ಹೇಳಿದಾಗ, ಅವರು ಆಘಾತಕ್ಕೊಳಗಾಗಿದ್ದರು. ಆದರೆ ನಂತರ, ನಾನು ಸಂತೋಷವಾಗಿರಬೇಕೆಂದು ಅವಳು ಬಯಸಿದ್ದರಿಂದ ಅವಳು ಒಪ್ಪಿಕೊಂಡಳು. ಅದೃಷ್ಟವಶಾತ್ ಮನೆಯವರಿಂದ ಯಾವುದೇ ವಿರೋಧ ಎದುರಿಸಲಿಲ್ಲ ಎಂದು ವೃತ್ತಿಯಲ್ಲಿ ಮನೋವೈದ್ಯೆಯಾಗಿರುವ ಸುರಭಿ ಮಿತ್ರಾ ಹೇಳಿದ್ದಾರೆ. 

ಮೊದಲ ಸಲಿಂಗಿ ಜೋಡಿ ವಿವಾಹಕ್ಕೆ ಸಾಕ್ಷಿಯಾದ ಹೈದರಾಬಾದ್‌

ಭಾರತದಲ್ಲಿ ಸಲಿಂಗಿ ವಿವಾಹವನ್ನು ಕಾನೂನುಬದ್ಧವಾಗಿ ಗುರುತಿಸಲಾಗಿಲ್ಲವಾದರೂ, ಅನೇಕ ಸಲಿಂಗಿ ದಂಪತಿಗಳು ತಮ್ಮ ಪ್ರೀತಿಪಾತ್ರರೊಂದಿಗಿನ  ಬದುಕುವುದನ್ನು ಇದರಿಂದ ತಡೆಯಲಾಗದು.  ಇತ್ತೀಚೆಗೆ ಸಲಿಂಗಿ ಜೋಡಿಯೊಂದು ಹೈದರಾಬಾದ್‌ನಲ್ಲಿ ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.  ಈ ಜೋಡಿ ತಮ್ಮ ಮೊದಲ ಭೇಟಿಯಿಂದ ಹಿಡಿದು ಕುಟುಂಬವನ್ನು ಒಪ್ಪಿಸಿ ಮದುವೆಯಾಗುವವರೆಗಿನ ಚಿತ್ರಣದವರೆಗಿನ ತಮ್ಮ ಜೀವನದ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಸ್ತುತ ಭಾರತದಲ್ಲಿ ಸಲಿಂಗಿ ವಿವಾಹಕ್ಕೆ ಕಾನೂನಿನ ಮಾನ್ಯತೆ ಇಲ್ಲ. ಆದರೆ ಕಾನೂನಿನ ಮಾನ್ಯತೆಯ ಅಗತ್ಯವಿಲ್ಲ ಎಂದು ಈ ಜೋಡಿ ಹೇಳಿದೆ.

click me!