
ನವದೆಹಲಿ(ಫೆ.08): ಕೋಮು ಸಾಮರಸ್ಯಕ್ಕಾಗಿ ಅಮೃತ್‌ಸರ್‌ನ ಸ್ವರ್ಣ ಮಂದಿರದ ಆವರಣದಲ್ಲಿ ನಮಾಜ್ ಮಾಡಿದ ಮುಸ್ಲಿಮರ ನಡೆಯನ್ನು ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ ಖಂಡಿಸಿದ್ದಾರೆ.
ಒಂದು ವೇಳೆ ಹಿಂದೂ ಸಮುದಾಯ ಮಸೀದಿ ಆವರಣದಲ್ಲಿ ಯಜ್ಞ ಅಥವಾ ಕೀರ್ತನೆ ಮಾಡಿದರೆ ಅದಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂದು ಪಾತ್ರಾ ಪ್ರಶ್ನಿಸಿದ್ದಾರೆ.
ಕೋಮು ಸೌಹಾರ್ದತೆ ಹೆಸರಲ್ಲಿ ಸ್ವರ್ಣ ಮಂದಿರದ ಮುಂಭಾಗದಲ್ಲಿ ಮುಸಲ್ಮಾನರು ನಮಾಜ್ ಮಾಡುವುದಾದರೆ, ನಾವೂ ಕೂಡ ಮಸೀದಿ ಮುಂಭಾಗದಲ್ಲಿ ಯಜ್ಞ ಮಾಡಬಹುದಲ್ಲವೇ ಎಂದು ಪಾತ್ರಾ ಟ್ವೀಟ್ ಮಾಡಿದ್ದಾರೆ.
ಚೌಕಿದಾರ್ ಚೋರ್ ಹೈ ಎಂದ ಬಿಜೆಪಿ ವಕ್ತಾರ ಸಂಬೀತ್ ಪಾತ್ರಾ!
ಕೋಮು ಸೌಹಾರ್ದತೆ ಹೆಸರಲ್ಲಿ ನಮ್ಮ ಪ್ರಾರ್ಥನಾ ಮಂದಿರಗಳ ಮುಂದೆ ಮುಸ್ಲಿಮರು ನಮಾಜ್ ಮಾಡಬಹದು ಎಂದಾದರೆ, ಅದೇ ಕೋಮು ಸೌಹಾರ್ದತೆಗಾಗಿ ನಾವು ಮಸೀದಿ ಮುಂದೆಯೂ ಯಜ್ಞ ಮಾಡಬಹುದು ಎಂದು ಪಾತ್ರಾ ಹೇಳಿದ್ದಾರೆ.
ದೇಶದಲ್ಲಿ ಕೋಮು ಸೌಹಾರ್ದತೆ ನೆಲೆಸಲೆಂದು ಆಗ್ರಹಿಸಿ ಮುಸ್ಲಿಮರು ಅಮೃತ್‌ಸರ್‌ನಲ್ಲಿರುವ ಸ್ವರ್ಣ ಮಂದಿರದ ಮುಂಭಾಗದಲ್ಲಿ ನಮಾಜ್ ಮಾಡಿ ಗಮನ ಸೆಳೆದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ