
ಲಕ್ನೋ(ಫೆ.08): ಮಾರಣಾಂತಿಕ ಎಕೆ-47 ಬಂದೂಕು ಎಂದರೆ ಎಂತಹವರ ಎದೆಯೂ ನಡುಗುತ್ತದೆ. ಒಂದೇ ಸಮನೆ ಬಾನೆಟ್'ನಿಂದ ಬುಲೆಟ್‌ಗಳ ಸುರಿಮಳೆಯಾಗುತ್ತಿದ್ದರೆ ಎದುರಿಗಿದ್ದವನ ಸಾವು ಖಚಿತ ಎಂದೇ ಅರ್ಥ.
ಆದರೆ ಭಾರತೀಯ ಸೇನೆಯ ಸೈನಿಕರು ಇನ್ನು ಶತ್ರುಗಳ ಎಕೆ-47 ಬಂದೂಕುಗಳಿಗೆ ಹೆದರಬೇಕಿಲ್ಲ. ಕಾರಣ ಭಾರತೀಯ ಸೇನೆ ಮೇಜರ್ ದರ್ಜೆಯ ಅಧಿಕಾರಿಯೊಬ್ಬರು ಎಕೆ-47 ಬಂದೂಕಿನ ಬುಲೆಟ್‌ನ್ನು ತಡೆಯಬಲ್ಲ ಸಾಮರ್ಥ್ಯವುಳ್ಳ ತಲೆಗವಚ ಹಾಗೂ ಜಾಕಟ್'ನ್ನು ಆವಿಷ್ಕರಿಸಿದ್ದಾರೆ.
ಭಾರತೀಯ ಸೇನಾ ಇಂಜಿನಿಯರಿಂಗ್ ಕಾಲೇಜಿನ ಮೇಜರ್ ಅನೂಪ್ ಮಿಶ್ರಾ ಈ ವಿನೂತನ ಜಾಕೆಟ್ ಹಾಗೂ ಹೆಲ್ಮೆಟ್ ಆವಿಷ್ಕರಿಸಿದ್ದು, ಎಕೆ-47 ಸೇರಿದಂತೆ ಸ್ನೈಪರ್ ಬಂದೂಕಿನ ಗುಂಡುಗಳನ್ನೂ ತಡೆಯಬಲ್ಲ ಸಾಮರ್ಥ್ಯ ಹೊಂದಿದೆ.
ಈ ಜಾಕೆಟ್ ಹಾಗೂ ಹ್ಮೆಲೆಟ್ 10 ಮೀಟರ್ ಅಂತರದಿಂದಲೇ ಎಕೆ-47 ಬುಲೆಟ್'ನ್ನು ನಿಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 1.4 ಕೆ.ಜಿ ತೂಕ ಹೊಂದಿದೆ. ಇದೇ ವೇಳೆ ಭಾರತದ ಮೊದಲ ಹಾಗೂ ವಿಶ್ವದ ಅತ್ಯಂತ ಅಗ್ಗದ ಗನ್ ಶೂಟ್ ಲೊಕೇಟರ್'ನ್ನು ಕೂಡ ಸೇನಾ ಇಂಜಿನಿಯರಿಂಗ್ ಕಾಲೇಜು ಆವಿಷ್ಕರಿಸಿದೆ.
400 ಮೀಟರ್ ಗಳ ಅಂತರದಿಂದಲೇ ಬುಲೆಟ್' ಲೊಕೇಷನ್ ಪತ್ತೆ ಮಾಡುವ ಸಾಮರ್ಥ್ಯ ಹೊಂದಿರುವ ಈ ಗನ್ ಶೂಟರ್ ಲೊಕೇಟರ್, ಶತ್ರುಗಳು ಇರುವ ಸ್ಥಳವನ್ನು ಗುರುತಿಸಿ ದಾಳಿ ಮಾಡಲು ಸಹಾಯಕಾರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ