ಕೊರೋನಾ ಸೋಂಕಿಂದ ಗುಣಮುಖರಾಗಿ ಪ್ಲಾಸ್ಮಾ ದಾನಗೈದ ಬಿಜೆಪಿ ವಕ್ತಾರ ಸಂಬಿತ್‌!

Published : Jul 07, 2020, 04:34 PM ISTUpdated : Jul 07, 2020, 04:41 PM IST
ಕೊರೋನಾ ಸೋಂಕಿಂದ ಗುಣಮುಖರಾಗಿ ಪ್ಲಾಸ್ಮಾ ದಾನಗೈದ ಬಿಜೆಪಿ ವಕ್ತಾರ ಸಂಬಿತ್‌!

ಸಾರಾಂಶ

ಕೊರೋನಾ ಸೋಂಕಿಂದ ಗುಣಮುಖರಾಗಿ ಪ್ಲಾಸ್ಮಾ ದಾನ ನೀಡಿದ ಸಂಬಿತ್‌| ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವು| ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್‌ ವಿರುದ್ಧದ ರೋಗ ನಿರೋಧಕ ಶಕ್ತಿ ರೂಪುಗೊಂಡಿರುತ್ತದೆ

ನವದೆಹಲಿ(ಜು.07): ಕೊರೋನಾ ಸೋಂಕಿನಿಂದ ಸದ್ಯ ಸಂಪೂರ್ಣ ಗುಣಮುಖರಾಗಿರುವ ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ತಮ್ಮ ಪ್ಲಾಸ್ಮಾ ಕಣಗಳನ್ನು ನೀಡುವ ಮೂಲಕ ಕೊರೋನಾ ವಿರುದ್ಧದ ಹೋರಾಟಕ್ಕೆ ನೆರವಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಬಿತ್‌, ‘ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯು ಸೇವೆಯ ಮಂತ್ರ ಜಪಿಸಿದೆ. ಇದರಿಂದ ಸ್ಫೂರ್ತಿಗೊಂಡು ಪ್ಲಾಸ್ಮಾ ಕಣಗಳನ್ನು ನೀಡಿದ್ದೇನೆ. ಕೊರೋನಾದಿಂದ ಗುಣಮುಖರಾಗುವ ಎಲ್ಲರೂ ಪ್ಲಾಸ್ಮಾ ನೀಡಬೇಕೆಂದು ನಾನು ಕೋರುತ್ತೇನೆ’ ಎಂದಿದ್ದಾರೆ.

ಕೊರೋನಾದಿಂದ ಚೇತರಿಸಿಕೊಂಡ ವ್ಯಕ್ತಿಯಲ್ಲಿ ವೈರಸ್‌ ವಿರುದ್ಧದ ರೋಗ ನಿರೋಧಕ ಶಕ್ತಿ ರೂಪುಗೊಂಡಿರುತ್ತದೆ. ಅಂತಹ ವ್ಯಕ್ತಿಯ ರಕ್ತದಿಂದ ಪ್ಲಾಸ್ಮಾ ಕಣಗಳನ್ನು ಪಡೆದು ಸೋಂಕಿತರು ಅಥವಾ ಸಂಭಾವ್ಯ ಸೋಂಕಿತರಿಗೆ ನೀಡಿದಾಗ ಆತ/ಆಕೆಯಲ್ಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೋನಾ ಸೊಂಕು ಗುಣಮುಖವಾಗುವ ಸಾಧ್ಯತೆ ಹೆಚ್ಚಿರುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India News Live: IPL 2026 - ಪಂಜಾಬ್ ಕಿಂಗ್ಸ್ ಗೆಲ್ಲುತ್ತಿದ್ದಂತೆಯೇ ಪ್ಲೇ-ಆಫ್‌ ರೇಸ್‌ನಿಂದ ಹೊರಬಿದ್ದ ಮತ್ತೊಂದು ತಂಡ!
ಇರಾನ್-ಅಮೇರಿಕಾ ಶಾಂತಿ ಒಪ್ಪಂದದ ವೇಳೆ ವೈಟ್‌ಹೌಸ್‌ ಮೇಲೆ ಗುಂಡಿನದಾಳಿ; ಟೇಬಲ್ ಕೆಳಗೆ ಅಡಗಿಕೊಂಡ ಟ್ರಂಪ್ ಸೇಫ್!