ಪೊಲೀಸರ ಎದುರೇ ಬಿಜೆಪಿ ನಾಯಕಿಯ ಪತಿ ಮೇಲೆ ಮುಖಂಡನಿಂದ ಹಲ್ಲೆ, ರಣಾಂಗಣವಾಯಿತು ಠಾಣೆ!

Published : May 10, 2023, 03:22 PM ISTUpdated : May 10, 2023, 03:23 PM IST
ಪೊಲೀಸರ ಎದುರೇ ಬಿಜೆಪಿ ನಾಯಕಿಯ ಪತಿ ಮೇಲೆ ಮುಖಂಡನಿಂದ ಹಲ್ಲೆ, ರಣಾಂಗಣವಾಯಿತು ಠಾಣೆ!

ಸಾರಾಂಶ

ಪೊಲೀಸ್ ಠಾಣೆ ಎದುರೇ ಮಾರಾಮಾರಿ ನಡೆದಿದೆ. ಪೊಲೀಸರು ಕೈಯಲ್ಲಿ ಗನ್ ಹಿಡಿದು ನಿಂತಿದ್ದರೂ ಕಣ್ಮುಚ್ಚಿ ತೆರೆಯುವುದರೊಳಗೆ ಘಟನೆ ನಡೆದು ಹೋಗಿಗೆ. ಎಸ್‌ಪಿ ಮುಖಂಡ ನೇರವಾಗಿ ಬಿಜೆಪಿ ನಾಯಕಿಯ ಪತಿ ಮೇಲೆ ಹಿಗ್ಗಾ ಮುಗ್ಗಾ ಹಲ್ಲೆ ಮಾಡಿದ್ದಾನೆ. ಇತ್ತ ಮುಖಂಡನ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಘಟನೆಯಿಂದ ಪೊಲೀಸ್ ಠಾಣೆ ರಣಾಂಗಣವಾಗಿದೆ.

ಅಮೇಥಿ(ಮೇ.10):  ಇಬ್ಬರು ನಾಯಕರು ಮುಖಾಮುಖಿಯಾಗಿದ್ದೇ ತಡ ಮಾರಾಮಾರಿ ಶುರುವಾಗಿದೆ. ಪೋಲೀಸ್ ಠಾಣೆ ಎದುರಲ್ಲೇ, ಹಲವು ಪೊಲೀಸರ ಸಮ್ಮುಖದಲ್ಲಿ ಹಲ್ಲೆ ನಡೆದಿದೆ. ಪೊಲೀಸರು ಇಬ್ಬರು ನಾಯಕರನ್ನು ಹಿಡಿದು ಬೆಂಬಲಿಗರನ್ನು ತಡೆಯುವಷ್ಟರಲ್ಲಿ ಸುಸ್ತಾಗಿದ್ದಾರೆ. ಉತ್ತರ ಪ್ರದೇಶದ ಗೌರಿಗಂಜ್ ಕ್ಷೇತ್ರದ ಬಿಜೆಪಿ ನಾಯಕಿ ರಶ್ಮಿಸಿಂಗ್ ಪತಿ ದೀಪಕ್ ಸಿಂಗ್ ಮೇಲೆ ಸಮಾಜವಾದಿ ಪಕ್ಷದ ಮುಖಂಡ ರಾಕೇಶ್ ಪ್ರತಾಪ್ ಸಿಂಗ್ ಹಲ್ಲೆ ನಡೆಸಿದ್ದಾರೆ. ಇತ್ತ ರಾಕೇಶ್ ಪ್ರತಾಪ್ ಸಿಂಗ್ ಬೆಂಬಲಿಗರು ದೀಪಕ್ ಮೇಲೆ ಹಲ್ಲೆ ನಡೆಸಿದ್ದಾರೆ. ಇಬ್ಬರು ನಾಯಕರ ಮಾರಾಮಾರಿಗೆ ಪೊಲೀಸ್ ಠಾಣೆ ಸಾಕ್ಷಿಯಾಗಿದೆ. ಈ ಹಲ್ಲೆ ವಿಡಿಯೋ ವೈರಲ್ ಆಗಿದೆ.

ಸಮಾಜವಾದಿ ಪಾರ್ಟಿ ನಾಯಕ ರಾಕೇಶ್ ಪ್ರತಾಪ್ ಸಿಂಗ್ ಬೆಂಬಲಿಗರ ಮೇಲೆ ದೀಪಕ್ ಸಿಂಗ್ ಹಲ್ಲೆ ನಡೆಸಿದ್ದಾರೆ. ಈ ಕುರಿತು ಪೊಲೀಸರು ಯಾವುದೇ ದೂರು ದಾಖಲಿಸಿಲ್ಲ ಎಂದು ಆರೋಪಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ರಾಕೇಶ್ ಪ್ರತಾಪ್ ಸಿಂಗ್ ಗೌರಿಗಂಜ್ ಪೊಲೀಸ್ ಠಾಣೆ ಎದುರಲ್ಲಿ ಪ್ರತಿಭಟನೆ ನೆಡೆಸಿದ್ದಾರೆ. ಇತ್ತ ರಾಕೇಶ್ ಪ್ರತಾಪ್ ಸಿಂಗ್ ಬೆಂಬಲಿಗರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ದೀಪಕ್ ಸಿಂಗ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. 

ಯುಪಿಯಲ್ಲಿ ಉಗ್ರರ ಸೊಂಟ ಮುರಿದಂತೆ, ಕರ್ನಾಟಕದಲ್ಲೂ ಪಿಎಫ್ಐ, ಐಎಸ್ಐ ಹುಟ್ಟಡಗಿಸುತ್ತೇವೆ: ಯೋಗಿ ಆದಿತ್ಯನಾಥ್

ದೀಪಕ್ ಸಿಂಗ್ ನೋಡಿದ ರಾಕೇಶ್ ಪ್ರತಾಪ್ ಸಿಂಗ್‌ ಕೆರಳಿ ಕೆಂಡವಾಗಿದ್ದಾರೆ. ಇಷ್ಟೇ ಅಲ್ಲ, ಬಿಜೆಪಿ ನಾಯಕಿ ಪತಿ ದೀಪಕ್ ಸಿಂಗ್, ಸಮಾಜವಾದಿ ಮುಖಂಡನಿಗೆ ಟಾಂಗ್ ನೀಡಿದ್ದಾರೆ. ಪ್ರತಿಭಟನೆಯನ್ನು ಅಣಕಿಸಿದ್ದಾರೆ. ಇದರಿಂದ ಕೆರಳಿದ ಸಮಾಜವಾದಿ ಪಾರ್ಟಿ ನಾಯಕ ರಾಕೇಶ್ ಪ್ರತಾಪ್ ಸಿಂಗ್, ಪ್ರತಿಭಟನೆಯಲ್ಲಿಂದ ಎದ್ದು ಬಂದು ದೀಪಕ್ ಸಿಂಗ್ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲೇ ರಾಕೇಶ್ ಬೆಂಬಲಿಗರೂ ಆಗಮಿಸಿ ಹಲ್ಲೆ ಮಾಡಿದ್ದಾರೆ. ಪೊಲೀಸರು ಕಣ್ಣ ಎದುರಲ್ಲೇ ಈ ಘಟನೆ ನಡೆದಿದೆ.

 

 

ಪೊಲೀಸರ ಇಬ್ಬರು ನಾಯಕರನ್ನು ಹಿಡಿದು, ಬೆಂಬಲಿಗರನ್ನು ತಡೆಯಲು ಹರಸಾಹಸ ಮಾಡಬೇಕಾಯಿತು. ಒಂದು ಕ್ಷಣ ಪೊಲೀಸ್ ಠಾಣೆ ರಣಾಂಗಣವಾಯಿತು. ಪೊಲೀಸ್ ಹಿರಿಯ ಅಧಿಕಾರಿಗಳು ಸೇರಿದಂತೆ ಹಲವು ಪೊಲೀಸರು ಸ್ಥಳದಲ್ಲಿದ್ದರೂ ಏನೂ ಮಾಡಲಾಗದ ಪರಿಸ್ಥಿತಿ ಎದುರಿಸಿದರು. ರಾಕೇಶ್ ಬೆಂಬಲಿಗರು ಒಬ್ಬರ ಹಿಂದೊಬ್ಬರು ಆಗಮಿಸಿ ಹಲ್ಲೆ ಮಾಡಿದ್ದಾರೆ. 

ಉತ್ತರಪ್ರದೇಶ: ಸಿಎಂ ಯೋಗಿ ಆಡಳಿತದಲ್ಲಿ ಒಟ್ಟು 10900 ಎನ್‌ಕೌಂಟರ್‌!

ಈ ಘಟನೆಯಿಂದ ದೀಪಕ್ ಸಿಂಗ್ ಆಕ್ರೋಶ ಹೆಚ್ಚಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರ ಎದುರೇ ಸಮಾಜವಾದಿ ಪಾರ್ಟಿ ನಾಯಕ ತನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಆತನ ಬೆಂಬಲಿಗರೂ ಹಲ್ಲೆ ಮಾಡಿದ್ದಾರೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾನೆ. ಈ ದೂರಿನಂತೆ ರಾಕೇಶ್ ಹಾಗೂ ಆತನ ಬೆಂಬಲಿಗರ ಮೇಲೆ ಎಫ್ಐಆರ್ ದಾಖಲಾಗಿದೆ.

ಈ ಘಟನೆಯಿಂದ ಗೌರಿಗಂಜ್ ಕ್ಷೇತ್ರದ ಬಿಜೆಪಿ ಘಟಕ ಕೆರಳಿದೆ. ರಾಕೇಶ್ ಪ್ರತಾಪ್ ಸಿಂಗ್ ವಿರುದ್ದ ಕ್ರಮ ಕೈಗೊಳ್ಳಲು ಪ್ರತಿಭಟನೆ ನಡೆಸಿದ್ದಾರೆ. ಸಮಾಜವಾದಿ ಪಾರ್ಟಿ ಗುಂಡೂಗಾರಿ ಈಗ ನಡೆಯುವುದಿಲ್ಲ. ಇದು ಯೋಗಿ ಆಡಳಿತ. ಇಲ್ಲಿ ಮಾಫಿಯಾಗೆ, ಗೂಂಡಾಗಿರಿಗೆ ಅವಕಾಶವಿಲ್ಲ ಎಂದು ಸ್ಥಳೀಯ ಬಿಜೆಪಿ ಘಟಕ ಪ್ರತಿಭಟನೆ ನಡೆಸಿದೆ. ಇದೀಗ ಗೌರಿಗಂಜ್ ಕ್ಷೇತ್ರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತದಲ್ಲಿ ಭರ್ಜರಿ ಹೂಡಿಕೆಯ ಘೋಷಣೆ ಮಾಡಿದ ದೈತ್ಯ ಕಂಪನಿಗಳು
ಗುಜರಾತ್‌ನಲ್ಲೊಂದು ನಿರ್ಭಯಾ ಪ್ರಕರಣ