ಲಕ್ನೋ: ಸಾರ್ವಜನಿಕ ಸ್ಥಳದಲ್ಲಿ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಾ ಟ್ರಾಫಿಕ್ ಜಾಮ್ ಉಂಟು ಮಾಡಿದ್ದಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ತದ್ರೂಪಿ, ಇನ್ಸ್ಟಾಗ್ರಾಮ್ ಸ್ಟಾರ್ ಅಜಮ್ ಅನ್ಸಾರಿಯನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಮಾಡಿದ ಆರೋಪದ ಮೇಲೆ ಸಲ್ಮಾನ್ ಖಾನ್ ಅವರ ತದ್ರೂಪಿ ಅಜಮ್ ಅನ್ಸಾರಿ ಅವರನ್ನು ಲಕ್ನೋದಲ್ಲಿ ಬಂಧಿಸಲಾಗಿದೆ. ಈತ ಲಕ್ನೋದ ಕ್ಲಾಕ್ ಟವರ್ ಮುಂದೆ ಇನ್ಸ್ಟಾಗ್ರಾಮ್ ರೀಲ್ಸ್ ಮಾಡುತ್ತಿದ್ದ.
ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಕೋಟ್ಯಂತರ ಜನ ಅಭಿಮಾನಿಗಳಿದ್ದಾರೆ.. ಕೆಲವು ಅಭಿಮಾನಿಗಳು ಸಲ್ಮಾನ್ ಅವರಂತೆ ಕಾಣಲು ಪ್ರಯತ್ನಿಸಿದರೆ, ಕೆಲವರು ಅವರ ಶೈಲಿಯನ್ನು ನಕಲು ಮಾಡಲು ಪ್ರಯತ್ನಿಸುತ್ತಾರೆ. ಹಾಗೆಯೇ ಇಲ್ಲೊಬ್ಬ ಅಭಿಮಾನಿ ತನ್ನ ಅಭಿಮಾನವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದ್ದು, ಸಲ್ಮಾನ್ ಖಾನ್ ಅವರಂತೆ ನಡುರಸ್ತೆಯಲ್ಲಿ ರೀಲ್ಸ್ ಮಾಡಲು ಹೋಗಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ. ಸಲ್ಮಾನ್ ತದ್ರೂಪಿಯಂತೆ ಕಾಣುವ ಅಜಂ ಅನ್ಸಾರಿ ಅವರನ್ನು ಸಾರ್ವಜನಿಕರ ಪ್ರಯಾಣಕ್ಕೆ ಆಡಚಣೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ (social media) ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಅಜಮ್ ಅನ್ಸಾರಿ (Azam Ansari)ಅವರು ಸಲ್ಮಾನ್ ಖಾನ್ ಅವರ ಹಾಡುಗಳ ಮೇಲೆ ರೀಲ್ ಮಾಡುತ್ತಾರೆ. ಇದರಿಂದಲೇ ಅವರು ಸಾಕಷ್ಟು ಜನಪ್ರಿಯರಾಗಿದ್ದಾರೆ. ವೀಡಿಯೊಗಳಲ್ಲಿ, ಅವರು ಸಲ್ಮಾನ್ ಖಾನ್ ಅವರ ಮ್ಯಾನರಿಸಂ ಅನ್ನು ಕಾಫಿ ಮಾಡುತ್ತಾರೆ. ಅಲ್ಲದೇ ಸಲ್ಮಾನ್ ನಟನೆಯ ಸಾಕಷ್ಟು ಹಾಡುಗಳಿಗೆ ಇವರು ರೀಲ್ಸ್ ಮಾಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ನಟ ಸಲ್ಮಾನ್ ಖಾನ್ ತಡೆದ CRPF ಯೋಧ!
ಒಂದು ವೀಡಿಯೊದಲ್ಲಿ ಲಕ್ನೋದ ರೂಮಿ ಗೇಟ್‌ನಲ್ಲಿ ಅಜಮ್ ನೃತ್ಯ ಮಾಡುವುದನ್ನು ಕಾಣಬಹುದು, ಅಲ್ಲಿ ಅವರು ನೃತ್ಯ ಮಾಡುವುದನ್ನು ವೀಕ್ಷಿಸಲು ಅಪಾರ ಜನರು ಸೇರಿದ್ದರು. ಏತನ್ಮಧ್ಯೆ, ಅವರು ಟ್ರಾಫಿಕ್ ಮಧ್ಯೆ ನಡೆದುಕೊಂಡು ಸಲ್ಮಾನ್ ಖಾನ್ ಅವರ ಹಾಡಿಗೆ ಲಿಪ್ ಸಿಂಕ್ ಮಾಡುವುದನ್ನು ಸಹ ಕಾಣಬಹುದು. ಭಾನುವಾರ ಇವರು ಲಕ್ನೋದ ಕ್ಲಾಕ್ ಟವರ್‌ನಲ್ಲಿ ಹೀಗೆ ರೀಲ್ಸ್ ಮಾಡುತ್ತಿರಬೇಕಾದರೆ ಅವರ ಮೇಕಿಂಗ್ ವೀಡಿಯೊಗಳನ್ನು ನೋಡಲು ನೂರಾರು ಜನ ಪ್ರೇಕ್ಷಕರು ಜಮಾಯಿಸಿದರು. ಇದರಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹೀಗಾಗಿ ಕೆಲವು ಪ್ರಯಾಣಿಕರು ಅಜಮ್ ವಿರುದ್ಧ ದೂರು ದಾಖಲಿಸಿದ್ದಾರೆ. ಪರಿಣಾಮ ಠಾಕೂರ್‌ಗಂಜ್ ಪೊಲೀಸರು (Thakurganj police) ಅಜಮ್ ವಿರುದ್ಧ ಸೆಕ್ಷನ್ 151 ರ ಅಡಿಯಲ್ಲಿ ಶಾಂತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ.
BB15: ವೇದಿಕೆ ಮೇಲೆ ಕಣ್ಣೀರಿಟ್ಟ ಸಲ್ಮಾನ್ ಖಾನ್, ಶೆಹನಾಜ್ ಗಿಲ್ ವಿಡಿಯೋ ವೈರಲ್!
ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್ ಅವರ ತದ್ರೂಪಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಶಾರೂಕ್ ಖಾನ್‌ನಂತೆಯೇ ಕಾಣುವ ಹೋಲಿಕೆಯಿಂದ ನೆಟ್ಟಿಗರು ಅಚ್ಚರಿಗೊಳಗಾಗುತ್ತಿದ್ದರು. ಇಬ್ರಾಹಿಂ ಖಾದ್ರಿ ಹೆಸರಿನ ಈ ಶಾರೂಕ್ ತದ್ರೂಪಿ ಇನ್‌ಸ್ಟಾಗ್ರಾಮ್‌ನಲ್ಲಿ 125 ಸಾವಿರ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಏತನ್ಮಧ್ಯೆ, ಸಲ್ಮಾನ್ ಖಾನ್ ಅವರ ಚಿತ್ರ ಕಭಿ ಈದ್ ಕಭಿ ದೀಪಾವಳಿ (Kabhi Eid Kabhi Diwali) ಈ ವರ್ಷದ ಡಿಸೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ (Pooja Hegde) ಮತ್ತು ಆಯುಷ್ ಶರ್ಮಾ(Aayush Sharma) ಕೂಡ ನಟಿಸಿದ್ದಾರೆ ಮತ್ತು ಶೆಹ್ನಾಜ್ ಗಿಲ್ (Shehnaaz Gill) ಕೂಡ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.
ಇತ್ತ ಪಠಾನ್ ಚಿತ್ರದ ಮೂಲಕ ಶಾರುಖ್ ಖಾನ್ (Shah Rukh Khan)ಪುನರಾಗಮನ ಮಾಡಲಿದ್ದಾರೆ. ಇದರಲ್ಲಿ ದೀಪಿಕಾ ಪಡುಕೋಣೆ (Deepika Padukone) ಮತ್ತು ಜಾನ್ ಅಬ್ರಹಾಂ (John Abraham) ಕೂಡ ನಟಿಸಿದ್ದಾರೆ. ಇದಲ್ಲದೆ ರಾಜ್‌ಕುಮಾರ್ ಹಿರಾನಿ (Rajkumar Hirani) ಅವರ ನಿರ್ದೇಶನದ ಡಂಕಿ ಚಿತ್ರದಲ್ಲಿ ತಾಪ್ಸಿ ಪನ್ನು (Taapsee Pannu) ಜೊತೆ ನಟಿಸಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ