ಮೊನ್ನೆಯಷ್ಟೇ (ಮೇ.8) ವಿಶ್ವ ತಾಯಂದಿರ ದಿನವನ್ನು (World Mothers Day) ಎಲ್ಲೆಡೆ ಆಚರಿಸಲಾಯಿತು. ಅನೇಕರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪ್ರೀತಿಯ ತಾಯಂದಿರ ಫೋಟೋಗಳನ್ನು ಶೇರ್ ಮಾಡುವ ಮೂಲಕ ತಮ್ಮ ತಮ್ಮ ತಾಯಂದಿರಿಗೆ ಕೃತಜ್ಞತೆ ಸಲ್ಲಿಸಿದ್ದರು. ಆದರೆ ಇಲ್ಲೊಂದು ಕಡೆ ತಾಯಿ ಮಗ ಜೋಡಿ ಈ ದಿನವನ್ನು ವಿಭಿನ್ನವಾಗಿ ಆಚರಿಸಿದ್ದಾರೆ. ಹೌದು ಪೈಲಟ್‌ಗಳಾಗಿರುವ ತಾಯಿ ಹಾಗೂ ಮಗ ಒಟ್ಟಿಗೆ ವಿಮಾನ ಹಾರಿಸುವ ಮೂಲಕ ತಾಯಂದಿರ ದಿನದ ಸಂಭ್ರಮವನ್ನು ಹೆಚ್ಚಿಸಿದರು.
ತಾಯಂದಿರ ದಿನದ ಸಂದರ್ಭದಲ್ಲಿ ಇಂಡಿಗೋ ಏರ್‌ಲೈನ್ಸ್‌ನ ಪೈಲಟ್ ತನ್ನ ತಾಯಿಗಾಗಿ ವಿಮಾನದಲ್ಲಿ ಭಾವನಾತ್ಮಕ ಭಾಷಣ ಮಾಡುವ ಮೂಲಕ ತಾಯಂದಿರ ದಿವನ್ನು ವಿಶೇಷವಾಗಿಸಿದರು. ಭಾನುವಾರ (ಮೇ.8) ಈ ತಾಯಿ ಮಗ ಪೈಲಟ್ ಜೋಡಿಗೆ ಸಹ-ಪೈಲಟ್‌ಗಳಾಗಿ ಮೊದಲ ಬಾರಿಗೆ ಒಟ್ಟಿಗೆ ಹಾರುವ ಅವಕಾಶ ಸಿಕ್ಕಿತು. ವೀಡಿಯೋದಲ್ಲಿ, ಅಮನ್ ಠಾಕೂರ್ ಎಂಬ 24 ವರ್ಷದ ಯುವ ಪೈಲಟ್ ಕೈಯಲ್ಲಿ ಹೂಗುಚ್ಛದೊಂದಿಗೆ ವಿಮಾನವನ್ನು ಪ್ರವೇಶಿಸಿ ತನ್ನ ಸಹ ಪೈಲಟ್ ಆಗಿರುವ ತಾಯಿಯ ಬಳಿ ಬಂದು ಹೂಗುಚ್ಛವನ್ನು ನೀಡಿ ಆಕೆಯನ್ನು ಸತ್ಕರಿಸುತ್ತಾನೆ. ನಂತರ ತಾಯಿಯನ್ನು ಉದ್ದೇಶಿಸಿ ಮಾತನಾಡುವ ಆತ ಕಳೆದ 24 ವರ್ಷಗಳಿಂದ ತನ್ನ ತಾಯಿಯೊಂದಿಗೆ ಹೇಗೆ ಪ್ರಯಾಣಿಕನಾಗಿ ಹಾರಾಟ ನಡೆಸುತ್ತಿದೆ. ಆದರೆ ಇಂದು ಅವಳೊಂದಿಗೆ ಸಹ-ಪೈಲಟ್ ಆಗಿ ಹಾರಲು ತುಂಬಾ ಸಂತೋಷವಾಗಿದೆ ಎಂದು ಹೇಳುತ್ತಾನೆ. ಮಗನ ಮಾತಿನಿಂದ ಭಾವುಕಳಾಗುವ ತಾಯಿ ಮಗನನ್ನು ಬಾಚಿ ತಬ್ಬಿಕೊಳ್ಳುತ್ತಾಳೆ.
This is such a heartwarming video. Mother, son fly plane together as pilot and copilot. pic.twitter.com/LIwJdJh4lO
— Anuj Dhar (@anujdhar)ಆ ಯುವ ಪೈಲಟ್ ಮಾಡುವ ಭಾಷಣದ ಸಾರಾಂಶ ಹೀಗಿದೆ ನೋಡಿ, ಮಹಿಳೆಯೇ, ಹುಡುಗರೇ ಮತ್ತು ಹುಡುಗಿಯರೇ, ಇದು ನಿಮ್ಮ ಫಸ್ಟ್ ಆಫೀಸರ್ ಅಮನ್ ಠಾಕೂರ್ (Aman Thakur), ದಯವಿಟ್ಟು ನಾನು ಸ್ವಲ್ಪ ಸಮಯದವರೆಗೆ ನಿಮ್ಮ ಗಮನವನ್ನು ಹೊಂದಬಹುದೇ? ನಮಗೆಲ್ಲರಿಗೂ ತಿಳಿದಿರುವಂತೆ ಇದು ತಾಯಂದಿರ ದಿನ ಎಂಬ ವಿಶೇಷ ದಿನ. ನೀವು ನಿಮ್ಮ ಎಲ್ಲಾ ಪ್ರೀತಿ ಮತ್ತು ಗೌರವಗಳನ್ನು ನಿಮ್ಮ ತಾಯಿಗೆ ನೀಡುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿಯಿದೆ.
ಕೊರೋನಾ ಸಂಕಷ್ಟ: 22,000 ಊಟ ಹಂಚಿದ್ದಾರೆ ಈ ಅಮ್ಮ ಮಗ
ತಾಯಂದಿರ ದಿನದಂದು ನನ್ನ ಅಮ್ಮನಿಗೆ ಒಂದು ಸಣ್ಣ ಗೌರವವನ್ನು ಮಾಡಲು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ 24 ವರ್ಷಗಳು ನಾನು ನನ್ನ ಅಮ್ಮನೊಂದಿಗೆ ವಿವಿಧ ವಿಮಾನಯಾನ ಸಂಸ್ಥೆಗಳಲ್ಲಿ ಮತ್ತು ಇಂಡಿಗೋದಲ್ಲಿ (Indigo Flight) ವಿವಿಧ ವಿಮಾನಗಳಲ್ಲಿ ಪ್ರಯಾಣಿಕನಾಗಿ ಹಾರಿದ್ದೇನೆ. ಆದರೆ ಇಂದು ನನಗೆ ಬಹಳ ವಿಶೇಷವಾದ ದಿನವಾಗಿದೆ. ಏಕೆಂದರೆ ನಾನು ಅವಳೊಂದಿಗೆ ಈ ವಿಮಾನದಲ್ಲಿ ಸಹ-ಪೈಲಟ್ ಆಗಿ ಪ್ರಯಾಣಿಸಲಿದ್ದೇನೆ. ನೀವು ನನಗಾಗಿ ಮಾಡಿದ ಪ್ರತಿಯೊಂದಕ್ಕೂ ಧನ್ಯವಾದಗಳು ಎಂದು ಅವರು ಹೇಳಿದರು.
ಹಾರುವಾಗಲೇ 2 ಪೈಲಟ್‌ಗಳು ಒಂದರಿಂದ ಇನ್ನೊಂದಕ್ಕೆ ಜಂಪ್
ಅನುಜ್ ಧಾರ್ (Anuj Dhar) ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ (Social Media) ಟ್ವಿಟ್ಟರ್‌ನಲ್ಲಿ (Twitter) ಪೋಸ್ಟ್ ಮಾಡಿದ್ದಾರೆ. ಇದೊಂದು ಭಾವುಕವಾದ ಕ್ಷಣ ತಾಯಿ ಮಗ ಪೈಲಟ್(Pilot) ಕೋ ಪೈಲಟ್ (Co-Pilot) ಆಗಿ ವಿಮಾನವನ್ನು ಜೊತೆಯಾಗಿ ಹಾರಿಸುತ್ತಿದ್ದಾರೆ ಎಂದು ಬರೆದಿದ್ದಾರೆ. ಈ ವಿಡಿಯೋವನ್ನು ಸಾವಿರಾರು ಜನ ವೀಕ್ಷಿಸಿದ್ದು, ಈ ತಾಯಿ ಮಗನಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.