ಈ ಹಿನ್ನೆಲೆ, 54,000 ರೂ. ವೇತನ ಪಡೆಯುತ್ತಿದ್ದ ಶಾಸಕರು ಇದೀಗ ಅಂದರೆ ಫೆಬ್ರವರಿ 2023 ರಿಂದ ಜಾರಿಗೆ ಬರುವಂತೆ 90,000 ರೂ. ಗಳನ್ನು ಪಡೆಯಲಿದ್ದಾರೆ. ಅಲ್ಲದೇ ಶಾಸಕರಿಗೆ ನೀಡಲಾಗುವ ಕ್ಷೇತ್ರದ ಭತ್ಯೆಯನ್ನು 6,000 ರೂ. .ನಿಂದ 10,000 ರೂ. ಗೆ. ಹೆಚ್ಚಿಸಲಾಗಿದೆ. ಶಾಸಕರ ದೂರವಾಣಿ ಭತ್ಯೆಯನ್ನು 8,000 ರೂ .ನಿಂದ 10,000 ರೂ, ಶಾಸಕರ ಕಾರ್ಯದರ್ಶಿ ಭತ್ಯೆಯನ್ನು 10,000 ರೂ. ನಿಂದ 15,000 ರೂ. ಗೆ ಏರಿಸಲಾಗಿದೆ.
ದೆಹಲಿ (ಮಾರ್ಚ್ 14, 2023): ದೆಹಲಿಯ ಶಾಸಕರಿಗೆ ಈಗ ಸ್ಯಾಲರಿ ಹೈಕ್ ಭಾಗ್ಯ ದೊರೆತಿದೆ. ರಾಷ್ಟ್ರ ರಾಜಧಾನಿಯ ಶಾಸಕರು ಈಗ ಶೇಕಡಾ 67 ರಷ್ಟು ವೇತನ ಹೆಚ್ಚಳವಾಗಿದ್ದು, ಕಳೆದ ವಾರ ವೇತನ ಹೆಚ್ಚಳದ ಕುರಿತು ಸರ್ಕಾರದ ಅಧಿಸೂಚನೆಯನ್ನು ಅಂಗೀಕರಿಸಲಾಗಿದೆ. 12 ವರ್ಷಗಳ ಅಂತರದ ನಂತರ ಈ ಏರಿಕೆಯಾಗಿದೆ ಎಂದು ತಿಳಿದುಬಂದಿದ್ದು, ವೇತನವನ್ನು ಹೆಚ್ಚಿಸುವ ಪ್ರಸ್ತಾವನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಒಪ್ಪಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆ, 54,000 ರೂ. ವೇತನ ಪಡೆಯುತ್ತಿದ್ದ ಶಾಸಕರು ಇದೀಗ ಅಂದರೆ ಫೆಬ್ರವರಿ 2023 ರಿಂದ ಜಾರಿಗೆ ಬರುವಂತೆ 90,000 ರೂ. ಗಳನ್ನು ಪಡೆಯಲಿದ್ದಾರೆ. ಅಲ್ಲದೇ ಶಾಸಕರಿಗೆ ನೀಡಲಾಗುವ ಕ್ಷೇತ್ರದ ಭತ್ಯೆಯನ್ನು 6,000 ರೂ. .ನಿಂದ 10,000 ರೂ. ಗೆ. ಹೆಚ್ಚಿಸಲಾಗಿದೆ. ಶಾಸಕರ ದೂರವಾಣಿ ಭತ್ಯೆಯನ್ನು 8,000 ರೂ .ನಿಂದ 10,000 ರೂ, ಶಾಸಕರ ಕಾರ್ಯದರ್ಶಿ ಭತ್ಯೆಯನ್ನು 10,000 ರೂ. ನಿಂದ 15,000 ರೂ. ಗೆ ಏರಿಸಲಾಗಿದೆ.
ಇದನ್ನು ಓದಿ: ಐಪಿಎಸ್ ಅಧಿಕಾರಿ ಜ್ಯೋತಿ ಜೊತೆ ಪಂಜಾಬ್ ಸಚಿವ ಹರ್ಜೋತ್ ಸಪ್ತಪದಿ: ಮದುವೆಯಾಗಲು ಕ್ಯೂನಲ್ಲಿ ಆಪ್ ಶಾಸಕರು..!
ಇನ್ನು, ಮುಖ್ಯಮಂತ್ರಿ, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕ ಮತ್ತು ನಾಯಕರ ವೇತನ ಮತ್ತು ಭತ್ಯೆಗಳು ವಿರೋಧ ಕೂಡ ಮಾಸಿಕ 72,000 ರೂ.ನಿಂದ ತಿಂಗಳಿಗೆ 1.7 ಲಕ್ಷಕ್ಕೆ ಏರಿದೆ. ಅಂದರೆ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ತಿಂಗಳಿಗೆ 1.7 ಲಕ್ಷ ರೂ. ವೇತನ ಹಾಗೂ ಭತ್ಯೆ ಸಿಗಲಿದೆ.
ದೆಹಲಿ ಸರ್ಕಾರದ ಕಾನೂನು ಮತ್ತು ನ್ಯಾಯ ಇಲಾಖೆಯು ಶಾಸಕರು ಮತ್ತು ಸಚಿವರ ವೇತನ ಮತ್ತು ಭತ್ಯೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಮಾರ್ಚ್ 9 ರಂದು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಕಳೆದ ವರ್ಷ, ದೆಹಲಿ ವಿಧಾನಸಭೆಯು ಸಚಿವರು, ಶಾಸಕರು ಮತ್ತು ಇತರರ ವೇತನ ಮತ್ತು ಭತ್ಯೆಗಳನ್ನು ಶೇಕಡಾ 66.67 ರಷ್ಟು ಹೆಚ್ಚಿಸಲು ಐದು ಮಸೂದೆಗಳನ್ನು ಅಂಗೀಕರಿಸಿತು. ಇದಕ್ಕೆ ಬಿಜೆಪಿ ಶಾಸಕರಿಂದಲೂ ಬೆಂಬಲ ವ್ಯಕ್ತವಾಗಿತ್ತು. ನಂತರ ಪ್ರಸ್ತಾವನೆಯನ್ನು ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸಲಾಗಿತ್ತು.
ಇದನ್ನೂ ಓದಿ: ದಿಲ್ಲಿ ಅಬಕಾರಿ ಹಗರಣ: ಕೆಸಿಆರ್ ಪುತ್ರಿ ಕವಿತಾಗೆ ಇಡಿ ಶಾಕ್; ನಾಳೆ ವಿಚಾರಣೆಗೆ ಹಾಜರಾಗಲು ಸೂಚನೆ
ಈ ಮಧ್ಯೆ, ಶಾಸಕರ ಮೂಲ ವೇತನವನ್ನು ಮಾಸಿಕ 12,000 ರೂ.ನಿಂದ 30,000 ರೂ.ಗೆ ಹೆಚ್ಚಿಸಲಾಗಿದ್ದು, ಸಚಿವರು, ಸ್ಪೀಕರ್, ಉಪಸಭಾಪತಿ, ಮುಖ್ಯ ಸಚೇತಕ ಮತ್ತು ವಿರೋಧ ಪಕ್ಷದ ನಾಯಕರ ಮೂಲ ವೇತನವನ್ನು 20,000 ರೂ.ನಿಂದ 60,000 ರೂ.ಗೆ ಹೆಚ್ಚಿಸಲಾಗಿದೆ. ಅಲ್ಲದೆ, ಕ್ಷೇತ್ರದ ಭತ್ಯೆ 6,000 ರೂ.ನಿಂದ 10,000 ರೂ. ಗೆ, ದೂರವಾಣಿ ಬಿಲ್ ಭತ್ಯೆ 8,000 ರೂ.ನಿಂದ 10,000 ರೂ.ವರೆಗೆ; ಕಾರ್ಯದರ್ಶಿ ಭತ್ಯೆ 10,000 ರೂ.ನಿಂದ 15,000 ರೂ.ವರೆಗೆ; ಮತ್ತು ಶಾಸಕರ ಪ್ರಯಾಣ ಭತ್ಯೆ 50 ಸಾವಿರದಿಂದ 1 ಲಕ್ಷ ರೂ. ಗೆ ಹೆಚ್ಚಳವಾಗಿದೆ. ಹಾಗೆ, ದಿನಭತ್ಯೆಯನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಿಸಲಾಗಿದೆ. ದೆಹಲಿಯ ಹೆಚ್ಚಿನ ಶಾಸಕರು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (ಎಎಪಿ) ಗೆ ಸೇರಿದವರು ಎಂಬುದು ಸಹ ಗಮನಿಸಬೇಕಾದ ಅಂಶ.
2015 ರಲ್ಲಿ, ಎಎಪಿ ಸರ್ಕಾರವು ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ಶಾಸಕರ ವೇತನವನ್ನು ತಿಂಗಳಿಗೆ ಸುಮಾರು 2.10 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲು ಪ್ರಸ್ತಾಪಿಸಿ ಕೇಂದ್ರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತ್ತು, ಆದರೆ ಅದನ್ನು ತಿರಸ್ಕರಿಸಲಾಗಿತ್ತು.