ಶಸ್ತ್ರಾಸ್ತ್ರ ಆಮದು ಪ್ರಮಾಣದಲ್ಲಿ ಭಾರತವೇ ನಂ.1: Arms ಪೂರೈಕೆಯಲ್ಲಿ ರಷ್ಯಾಗೆ ಸಿಂಹಪಾಲು

By Kannadaprabha News  |  First Published Mar 14, 2023, 12:30 PM IST

ಸೋಮವಾರ ಬಿಡುಗಡೆಯಾದ ಈ ವರದಿಯ ಪ್ರಕಾರ 2013-17 ಮತ್ತು 2018-22 ರ ನಡುವಿನ ಅವಧಿಯಲ್ಲಿ ರಷ್ಯಾ ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ. ಆದರೂ, ಭಾರತಕ್ಕೆ ಶಸ್ತ್ರಾಸ್ತ್ರ ಆಮದುಗಳ ಪಾಲು ಶೇಕಡಾ 64 ರಿಂದ 45 ಕ್ಕೆ ಇಳಿಕೆಯಾಗಿದೆ.


ನವದೆಹಲಿ (ಮಾರ್ಚ್‌ 14, 2023): ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾ ಹೆಸರಲ್ಲಿ ಬಹುತೇಕ ಎಲ್ಲವನ್ನು ದೇಶೀಯವಾಗಿಯೇ ಉತ್ಪಾದನೆ ಮಾಡಲು ಮುಂದಾಗಿದ್ದು, ಆಮದು ಕಡಿಮೆ ಮಾಡುತ್ತಿದೆ. ಆತ್ಮ ನಿರ್ಭರತೆ ಹೆಚ್ಚಾಗುತ್ತಿದ್ದರೂ ಶಸ್ತ್ರಾಸ್ತ್ರಗಳ ಆಮದಿನಲ್ಲಿ ಭಾರತ ಈಗಲೂ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಇತ್ತೀಚೆಗೆ ವರದಿಯೊಂದು ಹೇಳುತ್ತಿದೆ. 2013-17 ಮತ್ತು 2018-22 ರ ನಡುವೆ ಶಸ್ತ್ರಾಸ್ತ್ರ ಆಮದು 11 ಪ್ರತಿಶತದಷ್ಟು ಕುಸಿತದ ಹೊರತಾಗಿಯೂ, ಭಾರತವು 2018 ರಿಂದ 2022 ರವರೆಗೆ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರ ಆಮದುದಾರರಾಗಿ ಉಳಿದಿದೆ.  ಸ್ಟಾಕ್‌ಹೋಮ್‌ ಇಂಟರ್‌ನ್ಯಾಷನಲ್‌ ಪೀಸ್ ರೀಸರ್ಚ್ ಇನ್ಸ್ಟಿಟ್ಯೂಟ್ (SIPRI) ಇತ್ತೀಚಿನ ವರದಿಯ ಪ್ರಕಾರ ಭಾರತ ನಂ. 1 ಆಮದುದಾರನಾಗಿದ್ದು, ಸೌದಿ ಅರೇಬಿಯಾ 2ನೇ ಸ್ಥಾನದಲ್ಲಿದೆ ಎಂದು ಮಾಹಿತಿ ತಿಳಿದುಬಂದಿದೆ. 

ಸೋಮವಾರ ಬಿಡುಗಡೆಯಾದ ಈ ವರದಿಯ ಪ್ರಕಾರ 2013-17 ಮತ್ತು 2018-22 ರ ನಡುವಿನ ಅವಧಿಯಲ್ಲಿ ರಷ್ಯಾ ಭಾರತದ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿದೆ. ಆದರೂ, ಭಾರತಕ್ಕೆ ಶಸ್ತ್ರಾಸ್ತ್ರ ಆಮದುಗಳ ಪಾಲು ಶೇಕಡಾ 64 ರಿಂದ 45 ಕ್ಕೆ ಇಳಿಕೆಯಾಗಿದೆ. ಇನ್ನು, 2018-22 ರ ನಡುವೆ ಫ್ರಾನ್ಸ್ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರನಾಗಿ ಹೊರಹೊಮ್ಮಿದ್ದು,  ಭಾರತಕ್ಕೆ ಶೇಕಡ 29 ರಷ್ಟು ಶಸ್ತ್ರಾಸ್ತ್ರ ಪೂರೈಕೆ ಮಾಡುತ್ತಿದ್ದು, ನಂತರದ ಸ್ಥಾನದಲ್ಲಿರುವ ಅಮೆರಿಕ ಶೇಕಡ 11 ರಷ್ಟು ಶಸ್ತ್ರಾಸ್ತ್ರವನ್ನು ಭಾರತಕ್ಕೆ ಪೂರೈಸುತ್ತಿದೆ ಎಂದೂ ವರದಿಯಾಗಿದೆ.

Tap to resize

Latest Videos

ಇದನ್ನು ಓದಿ:: ಮೇಕ್‌ ಇನ್‌ ಇಂಡಿಯಾ ಹೆಸರಲ್ಲಿ ಕಡಿಮೆ ಗುಣಮಟ್ಟದ ಯುದ್ಧ ವಿಮಾನ ಖರೀದಿ? ದೇಶೀಯ ರಕ್ಷಣಾ ಉತ್ಪಾದನೆ ವಿಚಾರದಲ್ಲಿ ಚರ್ಚೆ

2018-22ರ ಅವಧಿಯಲ್ಲಿ ಭಾರತ, ಸೌದಿ ಅರೇಬಿಯಾ, ಕತಾರ್‌, ಆಸ್ಪ್ರೇಲಿಯಾ ಮತ್ತು ಚೀನಾ ಟಾಪ್‌ 5 ಶಸ್ತ್ರಾಸ್ತ್ರ ಆಮದು ದೇಶಗಳಾಗಿದ್ದವು. ಅಮೆರಿಕ, ರಷ್ಯಾ, ಫ್ರಾನ್ಸ್‌, ಚೀನಾ, ಜರ್ಮನಿ ಟಾಪ್‌ 5 ರಫ್ತು ದೇಶಗಳಾಗಿದ್ದವು ಎಂದು ಈ ವರದಿ ಹೇಳಿದೆ. ಶಸ್ತ್ರಾಸ್ತ್ರ ಆಮದಿನಲ್ಲಿ ಪಾಕ್‌ 8ನೇ ಸ್ಥಾನದಲ್ಲಿದೆ ಎಂದೂ ತಿಳಿದುಬಂದಿದೆ. ಪಾಕಿಸ್ತಾನ ಮತ್ತು ಚೀನಾದೊಂದಿಗಿನ ಭಾರತದ ಉದ್ವಿಗ್ನತೆಗಳು ಶಸ್ತ್ರಾಸ್ತ್ರ ಆಮದುಗಳ ಬೇಡಿಕೆಯನ್ನು ಹೆಚ್ಚಿಸುತ್ತವೆ ಎಂದೂ ವರದಿ ಹೇಳಿದೆ.

"ಒಟ್ಟು ಜಾಗತಿಕ ಶಸ್ತ್ರಾಸ್ತ್ರ ಆಮದುಗಳಲ್ಲಿ ಶೇಕಡಾ 11 ರಷ್ಟು ಪಾಲನ್ನು ಹೊಂದಿರುವ ಭಾರತವು 2018-22 ರಲ್ಲಿ ವಿಶ್ವದ ಅತಿದೊಡ್ಡ ಶಸ್ತ್ರಾಸ್ತ್ರಗಳ ಆಮದುದಾರನಾಗಿದ್ದು, 1993-2022 ರ ಅವಧಿಗೆ ನಂ. 1 ಸ್ಥಾನವನ್ನು ಹೊಂದಿದೆ" ಎಂದು ವರದಿ ಹೇಳಿದೆ. ಆದರೂ, ಶಸ್ತ್ರಾಸ್ತ್ರ ಆಮದುಗಳಲ್ಲಿ ಶೇಕಡಾ 11 ರಷ್ಟು ಕುಸಿತವು ಭಾರತದ ನಿಧಾನ ಮತ್ತು ಸಂಕೀರ್ಣ ಶಸ್ತ್ರಾಸ್ತ್ರ ಸಂಗ್ರಹಣೆ ಪ್ರಕ್ರಿಯೆ ಮತ್ತು ಅದರ ಶಸ್ತ್ರಾಸ್ತ್ರ ಪೂರೈಕೆದಾರರನ್ನು ವೈವಿಧ್ಯಗೊಳಿಸುವ ಪ್ರಯತ್ನಗಳು ಸೇರಿದಂತೆ ಹಲವಾರು ಅಂಶಗಳಿಗೆ ಕಾರಣವಾಗಿದೆ ಎಂದು ಅದು ಹೇಳಿದೆ.

ಇದನ್ನೂ ಓದಿ: ಎಚ್‌ಎಎಲ್‌ ವಿಮಾನದ ಮೇಲಿಂದ ನಾಪತ್ತೆ ಆಗಿದ್ದ ಹನುಮನ ಚಿತ್ರ ಕೊನೆಯ ದಿನ ಪ್ರತ್ಯಕ್ಷ

ರಷ್ಯಾ ಮತ್ತು ಫ್ರಾನ್ಸ್‌ನ ಹೊರತಾಗಿ, ಭಾರತವು ಈ ಐದು ವರ್ಷಗಳ ಅವಧಿಯಲ್ಲಿ ಇಸ್ರೇಲ್, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾದಿಂದಲೂ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡಿದೆ.

200 ಬ್ರಹ್ಮೋಸ್‌ ಕ್ಷಿಪಣಿ ಖರೀದಿಗೆ ಕೇಂದ್ರದಿಂದ 15,000 ಕೋಟಿ ಡೀಲ್‌
ಭಾರತೀಯ ಸೇನೆಗೆ ಅಗತ್ವವಾದ 200 ಬ್ರಹ್ಮೋಸ್‌ ಕ್ಷಿಪಣಿಗಳನ್ನು ಖರೀದಿಸುವ ಸಂಬಂಧ ರಕ್ಷಣಾ ಸಚಿವಾಲಯವು ಶೀಘ್ರವೇ 15,000 ಕೋಟಿ ರೂ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. ಮೊದಲಿಗೆ ಈ ಪ್ರಸ್ತಾವನೆಯನ್ನು ಸಚಿವ ರಾಜನಾಥ್‌ ಸಿಂಗ್‌ ಅವರ ನೇತೃತ್ವದ ರಕ್ಷಣಾ ಖರೀದಿ ಮಂಡಳಿಗೆ ಮಂಡಿಸಲಾಗುವುದು. ಅಲ್ಲಿ ಅನುಮೋದನೆ ದೊರೆತ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೇಟ್‌ ರಕ್ಷಣಾ ಸಮಿತಿಯಲ್ಲಿ ಅಂತಿಮ ಅನುಮತಿ ಪಡೆಯಲು ಕಳುಹಿಸಲಾಗುತ್ತದೆ. ಪ್ರಸ್ತುತ ಭಾರತದ 10 ಯುದ್ಧ ನೌಕೆಗಳಲ್ಲಿ ಬ್ರಹ್ಮೋಸ್‌ ಅಳವಡಿಸಲಾಗಿದೆ.

ಇದನ್ನೂ ಓದಿ: ವಿನೂತನ ಸೂಪರ್‌ಸಾನಿಕ್ ಜೆಟ್ ಟ್ರೈನರ್ ವಿನ್ಯಾಸ ಪ್ರದರ್ಶಿಸಿದ ಎಚ್‌ಎಎಲ್‌

click me!