ಪರಮಶತ್ರು ಚೀನಾ ಜೊತೆಗೆ ಟ್ರಂಪ್ ಸ್ನೇಹ, ಜಿನ್‌ಪಿಂಗ್ ಜೊತೆ ಸೇರಿ ಭಾರತಕ್ಕೆ ಬತ್ತಿ ಇಡ್ತಾನ ಆಪ್ತಮಿತ್ರ ಡೊಲಾಂಡ್?

Published : Jan 24, 2025, 07:01 PM ISTUpdated : Jan 24, 2025, 07:56 PM IST
ಪರಮಶತ್ರು ಚೀನಾ ಜೊತೆಗೆ ಟ್ರಂಪ್ ಸ್ನೇಹ, ಜಿನ್‌ಪಿಂಗ್ ಜೊತೆ ಸೇರಿ ಭಾರತಕ್ಕೆ ಬತ್ತಿ ಇಡ್ತಾನ ಆಪ್ತಮಿತ್ರ ಡೊಲಾಂಡ್?

ಸಾರಾಂಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪರ ಧೋರಣೆ ಮತ್ತು ಭಾರತದ ಮೇಲಿನ ಸುಂಕ ಹೆಚ್ಚಳದ ಎಚ್ಚರಿಕೆ ಭಾರತಕ್ಕೆ ಆತಂಕ ತಂದಿದೆ. ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಟ್ರಂಪ್ ನಿಲುವು ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ಆತಂಕ ಮೂಡಿಸಿದೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ಒಂದರ ಹಿಂದೆ ಒಂದರಂತೆ ಘೋಷಣೆ ಮಾಡುವ ಮೂಲಕ ಭಾರತದ ಆತಂಕ ಹೆಚ್ಚಿಸಿದ್ದಾರೆ. ಮತ್ತೊಂದೆಡೆ ಪರಮ ಶತ್ರುವಿನಂತಿದ್ದ ಚೀನಾದ ಬಗ್ಗೆ ಡೊನಾಲ್ಡ್ ಟ್ರಂಪ್ ಹಾಡಿ ಹೊಗಳಿರುವುದು ಅಚ್ಚರಿ, ಆಘಾತ ಮೂಡಿಸಿದೆ.

ಗುರುವಾರ (ಜನವರಿ 23, 2025) ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಟ್ರಂಪ್, ಚೀನಾಕ್ಕೆ ನಮ್ಮಲ್ಲಿರುವ ದೊಡ್ಡ ಶಕ್ತಿ ಸುಂಕವಾಗಿದೆ, ಆದರೆ ಅವರು (ಚೀನಾ) ಅದನ್ನು ಬಯಸುವುದಿಲ್ಲ ಮತ್ತು ನಾನು ಅದನ್ನು ಬಳಸಲು ಬಯಸುವುದಿಲ್ಲ ಎಂದಿದ್ದಾರೆ ಮುಂದುವರಿದು ಚೀನಾಕ್ಕೆ ಈ ಪ್ರಚಂಡ ಶಕ್ತಿ ಇದೆ ಎಂದು ಟ್ರಂಪ್ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಹಾಡಿಹೊಗಳಿದ್ದಾರೆ. ಈ ಮೂಲಕ ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ಬ್ಯುಸಿನೆಸ್ ವಾರ್ ತಪ್ಪಿಸಲು ಮುಂದಾಗಿರುವದು ಸ್ಪಷ್ಟವಾಗಿದೆ. ಹಿಂದಿನಿಂದಲೂ ಸುಂಕದ ವಿಚಾರವಾಗಿ ಚೀನಾದೊಂದಿಗೆ ಕಟುವಾಗಿ ಹೇಳಿಕೆ ನೀಡುತ್ತಲೇ ಬಂದಿದ್ದ ಟ್ರಂಪಣ್ಣ ಇದೀಗ ಎರಡನೇ ಅವಧಿಗೆ ಅಧಿಕಾರಕ್ಕೆ ಬರುತ್ತಿದ್ದಂತೆ ಚೀನಾದ ಕುರಿತು ಮೃದು ಧೋರಣೆ ತೆಳೆದಿರುವುದು ಜಿನ್‌ಪಿಂಗ್ ಜೊತೆ ಸೇರಿ ಯಾವ ಹೊಸ ಆಟ ಆಡಲಿದ್ದಾರೆ ಎಂಬುದು ಚಿಂತಿಸುವಂತಾಗಿದೆ.

ಇದನ್ನೂ ಓದಿ: ಜನ್ಮಸಿದ್ಧ ಪೌರತ್ವಕ್ಕೆ ಕೊಕ್: ಡೊನಾಲ್ಡ್ ಟ್ರಂಪ್ ಆದೇಶಕ್ಕೆ ಕೋರ್ಟ್‌ ತಾತ್ಕಾಲಿಕ ತಡೆ

ಈ ಹಿಂದೆ ನಡೆದ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ಚೀನಾದ ಮೇಲೆ ಮುಗಿಬಿದ್ದಿದ್ದ ಡೊನಾಲ್ಡ್ ಟ್ರಂಪ್ ಅವರು, ಚೀನಾದ ಮೇಲೆ 60 ಪ್ರತಿಶತ ಭಾರೀ ತೆರಿಗೆ ವಿಧಿಸುವ ಬಗ್ಗೆ ಹಲವು ಬಾರಿ ಮಾತನಾಡಿದ್ದರು. ಆದರೆ ಇದೀಗ ಎರಡನೆ ಬಾರಿಗೆ ಅಮೆರಿಕ ಅಧ್ಯಕ್ಷರಾದ ಹೊತ್ತಿಗೆ ಚೀನಾದ ಕುರಿತು ಡೊನಾಲ್ಡ್ ಟ್ರಂಪ್ ನಿಲುವೇ ಬದಲಾಗಿಹೋಗಿದೆ. ಚೀನಾದ ಮೇಲೆ ಕೇವಲ 10 ಪ್ರತಿಶತ ಸುಂಕವನ್ನು ವಿಧಿಸುವುದಾಗಿ ಹೇಳಿದ್ದಾರೆ.

ಚೀನಾದ ಜೊತೆಗಿನ ಟ್ರಂಪ್ ಅವರ ಈ ನಿರ್ಧಾರವು ಭಾರತಕ್ಕೆ ಇನ್ನಷ್ಟು ಆತಂಕ ಹೆಚ್ಚಿಸಿರಬಹುದು? ಇದಕ್ಕೆ ಇಂಬು ಕೊಡುವಂತೆ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಮೊದಲಿಗೆ ಮಾಡಿದ ಕೆಲಸವೆಂದರೆ ಭಾರತ ಸೇರಿದಂತೆ ಬ್ರಿಕ್ಸ್ ರಾಷ್ಟ್ರಗಳಿಂದ ಬರುವ ಸುಂಕಗಳ ಮೇಲೆ ಶೇ.100 ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದ್ದರು. ಆದರೆ ಅದೇ ಚೀನಾದ ಮೇಲೆ  ಸುಂಕ ವಿಧಿಸುವುದಿಲ್ಲ ಎಂದಿದ್ದಾರೆ. ಆದರೆ ಟ್ರಂಪ್ ಅವರ ಹೇಳಿಕೆಗೆ ಬ್ರಿಕ್ಸ್ ರಾಷ್ಟ್ರಗಳಿಂದ ಇದುವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 

ಮತ್ತೊಂದೆಡೆ ಅಮೆರಿಕದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ಧ ಕ್ರಮ ಕೈಗೊಳ್ಳಲು ಡೊನಾಲ್ಡ್ ಟ್ರಂಪ್ ಮುಂದಾಗಿದ್ದು, ಇದರಲ್ಲಿ ಭಾರತೀಯರೂ ಇದ್ದಾರೆ. ಕಳೆದ ತಿಂಗಳು, ಅಮೆರಿಕದ ವಲಸೆ ಮತ್ತು ಕಸ್ಟಮ್ ಎನ್‌ಫೋರ್ಸ್‌ಮೆಂಟ್ (ಐಸಿಇ) ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ 15 ಲಕ್ಷ ಜನರ ಪಟ್ಟಿಯನ್ನು ಮಾಡಿತ್ತು. ಇವರಲ್ಲಿ 18 ಸಾವಿರ ಮಂದಿ ಭಾರತೀಯರಿದ್ದಾರೆಂಬುದು ಗಮನಿಸಬೇಕು. ಟ್ರಂಪ್ ಆಡಳಿತದ ಕಟ್ಟುನಿಟ್ಟಿನ ಧೋರಣೆಯನ್ನು ಗಮನದಲ್ಲಿಟ್ಟುಕೊಂಡು, ಭಾರತ ಸರ್ಕಾರವು ಈ ಭಾರತೀಯರನ್ನು ಮರಳಿ ಕರೆತರುತ್ತದೆಯೇ? ಕಾದು ನೋಡಬೇಕು.

ಇದನ್ನೂ ಓದಿ: ಮೇಕ್‌ ಇನ್‌ ಅಮೆರಿಕ ಪಾಲಿಸಿ, ಇಲ್ಲವೇ ಸುಂಕ ಎದುರಿಸಿ: ಡೊನಾಲ್ಡ್ ಟ್ರಂಪ್‌

ಪ್ಯೂ ರಿಸರ್ಚ್ ಪ್ರಕಾರ, ಅಮೆರಿಕದಲ್ಲಿ 7,25,000 ದಾಖಲೆಯಿಲ್ಲದ ಭಾರತೀಯರು ವಾಸಿಸುತ್ತಿದ್ದಾರೆ. ಅವರು ಹಲವಾರು ವರ್ಷಗಳಿಂದ ಅಲ್ಲಿ ವಾಸಿಸುತ್ತಿದ್ದಾರೆ, ಇದರಿಂದ ಅವರು ಒಂದು ದಿನ ಪೌರತ್ವ ಪಡೆಯಬಹುದು ಅಥವಾ ಅವರ ಮಕ್ಕಳು ಅಮೆರಿಕನ್ನರಾಗಬಹುದು ಎಂದು ಭಾವಿಸಿದ್ದರು. ಆದರೆ ಜನ್ಮ ಹಕ್ಕು ಪೌರತ್ವವನ್ನು ಕೊನೆಗೊಳಿಸುವ ಟ್ರಂಪ್ ಘೋಷಣೆ ಭಾರತೀಯರ ಆತಂಕವನ್ನು ಹೆಚ್ಚಿಸಿದೆ. ಜನನದ ಆಧಾರದ ಮೇಲೆ ಪೌರತ್ವ ನೀಡುವ ಹಕ್ಕನ್ನು ಟ್ರಂಪ್ ನಿಷೇಧಿಸಿದ್ದಾರೆ. ಆದಾಗ್ಯೂ, ಫೆಡರಲ್ ನ್ಯಾಯಾಧೀಶರು ತಾತ್ಕಾಲಿಕವಾಗಿ ಅದನ್ನು ಅಸಂವಿಧಾನಿಕ ಎಂದು ಹೇಳಿದ್ದಾರೆ. ಇದೇ ವೇಳೆ ವಲಸಿಗರನ್ನು ವಾಪಸ್ ಕಳುಹಿಸುವ ಕುರಿತು ಮಾತನಾಡಿದಾಗ ಅಲ್ಲಿ ನೆಲೆಸಿರುವ ಭಾರತೀಯರು ಉದ್ವಿಗ್ನಗೊಂಡಿದ್ದರು. ಈಗಾಗಲೇ ಅಕ್ರಮ ಪ್ರವೇಶವನ್ನು ತಡೆಯಲು ಅಮೆರಿಕ-ಮೆಕ್ಸಿಕೊ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯನ್ನು ಘೋಷಿಸುವುದಾಗಿ ಮತ್ತು ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಪ್ರಕ್ರಿಯೆಯನ್ನ ಕೈಗೊಂಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಫೀಸ್‌ ಸಮಯ ಬಳಿಕ ಕರೆ-ಇಮೇಲ್ ಮಾಡಂಗಿಲ್ಲ, ಡಿಸ್‌ಕನೆಕ್ಟ್ ಬಿಲ್ ಲೋಕಸಭೆಯಲ್ಲಿ ಮಂಡನೆ
ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ