ಆಪ್‌ ಶಾಸಕರ ಖರೀದಿಸಲು ಬಿಜೆಪಿಯಿಂದ ತಲಾ 25 ಕೋಟಿ ರೂ. ಆಫರ್‌: ಸಿಎಂ ಕೇಜ್ರಿವಾಲ್ ಆರೋಪ

By BK Ashwin  |  First Published Jan 27, 2024, 12:17 PM IST

ಎಎಪಿ ಶಾಸಕರೊಂದಿಗೆ ಬಿಜೆಪಿ ಆಪರೇಷನ್‌ ಕಮಲದ ಪ್ರಯತ್ನ ನಡೆಸುತ್ತಿದ್ದು, ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯನ್ನು ಶೀಘ್ರವಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದೂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. 


ನವದೆಹಲಿ (ಜನವರಿ 27, 2024): ದೆಹಲಿಯಲ್ಲಿ ಮತ್ತೆ ಆಪರೇಷನ್‌ ಕಮಲ ನಡೆಯುತ್ತಿದೆ ಎಂದು ಅಲ್ಲಿನ ಸಿಎಂ ಅರವಿಂದ್ ಕೇಜ್ರಿವಾಲ್‌ ಸ್ಪೋಟಕ ಆರೋಪ ಮಾಡಿದ್ದಾರೆ. ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಬಿಜೆಪಿ 7 ಎಎಪಿ ಶಾಸಕರನ್ನು ತಲಾ ₹ 25 ಕೋಟಿ ನೀಡಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. 

ಅಲ್ಲದೆ, ಎಎಪಿ ಶಾಸಕರೊಂದಿಗೆ ಬಿಜೆಪಿ ಮಾತುಕತೆಯಲ್ಲಿ ತೊಡಗಿದೆ ಮತ್ತು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮನ್ನು ಶೀಘ್ರವಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದೂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಉರುಳಿಸುವ ಕೆಟ್ಟ ಯೋಜನೆಯನ್ನು ಒಳಗೊಂಡಿದೆ ಎಂದೂ ಹೇಳಿದ್ದಾರೆ.

Tap to resize

Latest Videos

I.N.D.I.A Alliance: ಬಿಹಾರದಲ್ಲಿ ನಿತೀಶ್ ಸಿಟ್ಟು.. ಪಂಜಾಬ್‌, ದೆಹಲಿಯಲ್ಲಿ ಕೇಜ್ರಿವಾಲ್ ಕ್ರೋಧ..!

ಇತ್ತೀಚೆಗೆ, ಅವರು [ಬಿಜೆಪಿ] ದೆಹಲಿಯ ನಮ್ಮ 7 ಶಾಸಕರನ್ನು ಸಂಪರ್ಕಿಸಿ - 'ಕೆಲವು ದಿನಗಳ ನಂತರ ನಾವು ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ನಂತರ ನಾವು ಶಾಸಕರನ್ನು ಒಡೆಯುತ್ತೇವೆ. 21 ಶಾಸಕರ ಜೊತೆ ಮಾತುಕತೆ ನಡೆಸಲಾಗಿದೆ.ಇತರರೊಂದಿಗೂ ಮಾತುಕತೆ ನಡೆಸಲಿದ್ದೇವೆ. ಆ ನಂತರ ದೆಹಲಿಯ ಆಮ್ ಆದ್ಮಿ ಸರ್ಕಾರವನ್ನು ಉರುಳಿಸುತ್ತೇವೆ.ನೀವೂ ಬನ್ನಿ. 25 ಕೋಟಿ ರೂ. ನೀಡ್ತೇವೆ. ಜತೆಗೆ ಬಿಜೆಪಿ ಟಿಕೆಟ್‌ ಮೇಲೆ ಚುನಾವಣೆಗೆ ಸ್ಪರ್ಧಿಸುವಿರಿ ಎಂದು ಕೇಸರಿ ಪಕ್ಷ ಆಪರೇಷನ್‌ ಕಮಲ ನಡೆಸುತ್ತಿರುವ ಬಗ್ಗೆ ಸುದೀರ್ಘ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ದೆಹಲಿ ಮುಖ್ಯಮಂತ್ರಿ ಆರೋಪಿಸಿದ್ದಾರೆ.

21 ಶಾಸಕರನ್ನು ಸಂಪರ್ಕಿಸುವ ಹೇಳಿಕೆಯ ಹೊರತಾಗಿಯೂ, ಆಪ್‌ಗೆ ಲಭ್ಯವಿರುವ ಮಾಹಿತಿಯು ಕೇವಲ ಏಳು ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಸೂಚಿಸುತ್ತದೆ ಮತ್ತು ಅವರೆಲ್ಲರೂ ಪ್ರಲೋಭನಗೊಳಿಸುವ ಪ್ರಸ್ತಾಪವನ್ನು ದೃಢವಾಗಿ ನಿರಾಕರಿಸಿದ್ದಾರೆ ಎಂದು ಕೇಜ್ರಿವಾಲ್ ಹೇಳಿಕೊಂಡಿದ್ದಾರೆ.

ಬಿಹಾರದಲ್ಲಿ ರಾಜಕೀಯದ ಥ್ರಿಲ್ಲರ್‌, ತಿಂಗಳಿಗೊಮ್ಮೆ ಗೇರ್‌ ಬದಲಿಸುತ್ತಿರುವ ನಿತೀಶ್‌ ಕುಮಾರ್‌!

ಇದರರ್ಥ ಯಾವುದೇ ಮದ್ಯದ ಹಗರಣದ ತನಿಖೆಗಾಗಿ ನನ್ನನ್ನು ಬಂಧಿಸಲಾಗುತ್ತಿಲ್ಲ. ಆದರೆ ಅವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ ಎಂದು ದೆಹಲಿ ಸಿಎಂ ಕೇಜ್ರಿವಾಲ್ ಹೇಳಿದ್ದಾರೆ. ಕಳೆದ 9 ವರ್ಷಗಳಲ್ಲಿ ಅವರು ನಮ್ಮ ಸರ್ಕಾರವನ್ನು ಬೀಳಿಸಲು ಅನೇಕ ಷಡ್ಯಂತ್ರಗಳನ್ನು ಮಾಡಿದರು. ಆದರೆ ಅವರು ಯಾವುದೇ ಯಶಸ್ಸನ್ನು ಪಡೆಯಲಿಲ್ಲ. ದೇವರು ಮತ್ತು ಜನರು ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಾರೆ, ನಮ್ಮ ಎಲ್ಲಾ ಶಾಸಕರು ಸಹ ಬಲವಾಗಿ ಜೊತೆಯಾಗಿದ್ದಾರೆ. ಈ ಬಾರಿಯೂ ಈ ಜನರು ತಮ್ಮ ನೀಚತನದ ಉದ್ದೇಶಗಳನ್ನು ಸಾಧಿಸಲು ವಿಫಲರಾಗುತ್ತಾರೆ ಎಂದೂ ಸಿಎಂ ಅರವಿಂದ್ ಕೇಜ್ರಿವಾಲ್‌ ಪೋಸ್ಟ್‌ ಮಾಡಿದ್ದಾರೆ.

ಎಎಪಿ ಮಾಡುತ್ತಿರುವ ಉತ್ತಮ ಕೆಲಸಗಳ ಹಿನ್ನೆಲೆಯಲ್ಲಿ ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದೂ ದೆಹಲಿ ಸಿಎಂ ಆರೋಪಿಸಿದ್ದಾರೆ.  ಹಲವಾರು ಅಡೆತಡೆಗಳ ಹೊರತಾಗಿಯೂ, ದೆಹಲಿಯ ಜನರು ಎಎಪಿ ಮೇಲೆ ಅಪಾರ ಪ್ರೀತಿಯನ್ನು ಹೊಂದಿದ್ದಾರೆ. ಚುನಾವಣೆಯಲ್ಲಿ ಅವರನ್ನು ಸೋಲಿಸುವುದು ಬಿಜೆಪಿಗೆ ಕಷ್ಟಕರವಾಗಿದೆ ಎಂದೂ ಅರವಿಂದ್‌ ಕೇಜ್ರಿವಾಲ್‌ ಹೇಳಿದರು.

click me!