ಉತ್ತರ ಪ್ರದೇಶ ಪಠ್ಯದಲ್ಲಿ ಸಿಖ್ ಗುರುಗಳ ತ್ಯಾಗ ಮತ್ತು ಬಲಿದಾನ

By Suvarna News  |  First Published Dec 28, 2020, 10:46 PM IST

ಉತ್ತರ ಪ್ರದೇಶದ ಪಠ್ಯದಲ್ಲಿ ಮಹತ್ವದ ಬದಲಾವಣೆ/ ಸಿಖ್ ಗುರುಗಳ ಚರಿತ್ರೆ ಸೇರಿಸಲು ನಿರ್ಧಾರ/ ನಿರ್ಧಾರ ಘೋಷಿಸಿದ ಯೋಗಿ ಆದಿತ್ಯನಾಥ್/ ತ್ಯಾಗ ಮತ್ತು ಬಲಿದಾನಗಳನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು


ಲಕ್ನೋ(ಡಿ.  28)  ಉತ್ತರ ಪ್ರದೇಶದ ಶಾಲಾ ಪಠ್ಯದಲ್ಲಿ ಸಿಖ್ ಗುರುಗಳ ಚರಿತ್ರೆಯನ್ನು ಸೇರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ.
 
ಸಾಹಿಬ್ಜಾದಾ ದಿವಾಸ್ ಪ್ರಯುಕ್ತ ತಮ್ಮ ನಿವಾಸದಲ್ಲಿ ನಡೆದ ಗುರ್ಬಾನಿ ಕೀರ್ತನ್​ದಲ್ಲಿ ಮಾತನಾಡಿದ ಆದಿತ್ಯನಾಥ್, ಸಿಖ್ ಗುರು ಗೋಬಿಂದ್ ಸಿಂಗ್ ಅವರ  ಜೀವನ ಶಾಲಾ ಪಠ್ಯಕ್ಕೆ ಸೇರಿಸಲಾಗುವುದು ಎಂದು ತಿಳಿಸಿದ್ದಾರೆ.

ಮದರಸಾಗಳನ್ನು ಸರ್ಕಾರಿ ಶಾಲೆಯಾಗಿ ಪರಿವರ್ತಿಸುವ ಬಿಲ್ ಮಂಡನೆ

Latest Videos

undefined

ಸಿಖ್ ಗುರುಗಳ ತ್ಯಾಗ ಮತ್ತು ಬಲಿದಾನಗಳನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ. ಡಿಸೆಂಬರ್ 27 ಅನ್ನು ಪ್ರತಿ ವರ್ಷ ಎಲ್ಲಾ ಶಾಲೆಗಳಲ್ಲಿ ಸಾಹಿಬ್ಜಾದಾ ದಿವಾ ಎಂದು ಆಚರಿಸಲಾಗುತ್ತದೆ. ಇದು ಗೌರವ ಸಲ್ಲಿಸುವ ದಿನವಾಗಿರಲಿದೆ ಎಂದು ತಿಳಿಸಿದ್ದಾರೆ.

ಬಾಬಾ ಅಜಿತ್ ಸಿಂಗ್, ಬಾಬಾ ಜುಹಾರ್ ಸಿಂಗ್, ಬಾಬಾ ಜೋರಾವರ್ ಸಿಂಗ್  ಮತ್ತು ಬಾಬಾ ಪತೇಹ್ ಸಿಂಗ್ ಅವರ ಜೀವನ ಪ್ರತಿಯೊಬ್ಬರು ಅವರಿಯಬೇಕು ಎಂದು ತಿಳಿಸಿದರು. 
ಉಪ ಮುಖ್ಯಮಂತ್ರಿಗಳಾದ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಮತ್ತು ಸಂಪುಟ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

 

click me!