ಕೇಂದ್ರದ ಕೃಷಿ ಕಾಯಿದೆ ತಿದ್ದುಪಡಿ ಮಸೂದೆ/ ಇಟಲಿಗೆ ಹಾರಿದ ರಾಹುಲ್ ಗಾಂಧಿ/ ಅಲ್ಲಿಂದಲೇ ದೇಶವನ್ನು ಉಳಿಸಿ ಎಂದು ಟ್ವೀಟ್ / ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಆಹಾರ
ನವದೆಹಲಿ (ಡಿ. 28) ತಮ್ಮ ಪಕ್ಷದ 136 ನೇ ವರ್ಷಾಚರಣೆ ಕಾರ್ಯಕ್ರಮಕ್ಕೂ ಗೈರಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಟಲಿಯಿಂದಲೇ ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸರ್ಕಾರದ ರೈತ ಮಸೂದೆಗಳನ್ನು ವಿರೋಧಿಸಿರುವ ಗಾಂಧಿ 'ರೈತರನ್ನು ಉಳಿಸಿ, ದೇಶವನ್ನು ಉಳಿಸಿ' ಎಂದು ಕರೆ ಕೊಟ್ಟಿದ್ದಾರೆ. ರೈತರು ಆರ್ಥಿಕ ಸ್ವಾವಲಂಬನೆ ಸಾಧಿಸುವವರೆಗೆ ದೇಶ ಆರ್ಥಿಕ ಸ್ವಾವಲಂಬಿಯಾಗಲು ಸಾಧ್ಯವಿಲ್ಲ ಎಂದು ಹಿಂದಿಯಲ್ಲಿ ರಾಹುಲ್ ಟ್ವಿಟ್ ಮಾಡಿ ಹೇಳಿದ್ದಾರೆ.
undefined
ರಾಹುಲ್ ಗೆ ಮೋದಿ ಕೊಟ್ಟಿದ್ದು ಅಂಥಿಂಥ ಟಾಂಗ್ ಅಲ್ಲ
ರಾಹುಲ್ ಮಾತ್ರವಲ್ಲದೆ ಸೋನಿಯಾ ಸಹ ಕಾರ್ಯಕ್ರಮಕ್ಕೆ ಕಾರಣಾಂತರಗಳಿಂದ ಗೈರಾಗಿದ್ದಾರೆ. ರಾಹುಲ್ ಗಾಂಧಿ ರೈತ ಮಸೂದೆಗಳನ್ನು ಹಿಂಪಡೆಯಲು ಒತ್ತಾಯಿಸಿ ರಾಷ್ಟ್ರಪತಿಗಳನ್ನು ಭೇಟಿ ಮಾಡಿದ್ದರು. ನಂತರ ರೈತ ಪ್ರತಿಭಟನೆಗೆ ಬೆಂಬಲ ಎನ್ನುತ್ತಲೇ ಇಟಲಿಗೆ ಪ್ರಯಾಣ ಬೆಳೆಸಿದ್ದರು.
ಹೊರದೇಶದಲ್ಲಿ ಕುಳಿತು ದೇಶವನ್ನು ಉಳಿಸಿ ಎಂದು ರಾಹುಲ್ ಟ್ವೀಟ್ ಮಾಡಿರುವುದು ಟೀಕೆಗೂ ಆಹಾರವಾಗಿದೆ. ಇನ್ನೊಂದು ಕಡೆ ರೈತ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ.
किसान की आत्मनिर्भरता के बिना देश कभी आत्मनिर्भर नहीं बन सकता।
कृषि विरोधी क़ानून वापस लो।
किसान बचाओ, देश बचाओ!