ಕೃಷಿ ಮಸೂದೆ ಸೇರಿದಂತೆ ಮಸೂದೆ, ಗೋ ಹತ್ಯೆ, ಲವ್ ಜಿಹಾದ್ ಸೇರಿದಂತೆ ಕೆಲ ಸುಗ್ರೀವಾಜ್ಞೆಗಳು ಭಾರಿ ವಿವಾದ ಹಾಗೂ ಅಷ್ಟೇ ಚರ್ಚೆಗೂ ಒಳಪಟ್ಟಿದೆ. ಇದೀಗ ಮತ್ತೊಂದು ಬಿಲ್ ಮಂಡನೆಯಾಗಿದೆ. ಇದು ಮದರಸಾಗಳನ್ನು ರದ್ದು ಮಾಡಿ, ಸರ್ಕಾರಿ ಶಾಲೆಗಳ್ನಾಗಿ ಪರಿವರ್ತಿಸುವ ಬಿಲ್. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ಅಸ್ಸಾಂ(ಡಿ.28): ದೇಶದಲ್ಲಿ ತಿದ್ದುಪಡಿ ಮೂಲಕ ತಂದಿರುವ ಕೃಷಿ ಮಸೂದೆ ವಿವಾದ, ಪ್ರತಿಭಟನೆ ಇನ್ನೂ ಬಗೆಹರಿದಿಲ್ಲ. ಲವ್ ಜಿಹಾದ್ ಸೇರಿದಂತೆ ಕೆಲ ಮಸೂದೆಗಳು ವಿವಾದಕ್ಕೀಡಾಗಿದೆ. ಇದರ ನಡುವೆ ಮತ್ತೊಂದು ಭಾರಿ ಚರ್ಚೆಗೆ ಒಳಗಾಗುವ ಬಿಲ್ ಮಂಡನೆಯಾಗಿದೆ. ಹೌದು, ಇದು ಸರ್ಕಾರಿ ಮದರಸಾಗಳನ್ನು ರದ್ದು ಮಾಡಿ, ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸುವ ಬಿಲ್.
ಹಾವೇರಿ: ಕೊರೋನಾ ಬಳಿಕ ಸರ್ಕಾರಿ ಶಾಲೆಗಳಿಗೆ ಜೀವಕಳೆ!.
ಈ ಬಿಲ್ ಅಸ್ಸಾಂ ಅಸೆಂಬ್ಲಿಯಲ್ಲಿ ಮಂಡನೆಯಾಗಿದೆ. ಎಪ್ರಿಲ್ 1, 2021ರಿಂದ ಅಸ್ಸಾಂನ ಎಲ್ಲಾ ಸರ್ಕಾರಿ ಮದರಸಾಗಳನ್ನು ರದ್ದು ಮಾಡಿ, ಸರ್ಕಾರಿ ಶಾಲೆಗಳನ್ನಾ ಪರಿವರ್ತಿಸುವ ಅಸ್ಸಾಂ ರಿಪೀಲಿಂಗ್ ಬಿಲ್ 2020 ಇದೀಗ 3 ದಿನದ ಅಸ್ಸಾಂ ಚಳಿಗಾಲದ ಅಧಿವೇಶನದ ಮೊದಲ ದಿನವೇ ಮಂಡನೆಯಾಗಿದೆ.
ಅಸ್ಸಾಂ ಶಿಕ್ಷಣ ಸಚಿವ ಹಿಮಂತ ಬಿಸ್ವಾ ಶರ್ಮಾ ಈ ಬಿಲ್ ಮಂಡಿಸಿದ್ದಾರೆ. ನೂತನ ಬಿಲ್ ಅಸ್ಸಾಂ ಮದರಸಾ ಶಿಕ್ಷಣ (ಪ್ರಾಂತೀಕರಣ) ಕಾಯ್ದೆ, 1995 ಮತ್ತು ಅಸ್ಸಾಂ ಮದರಸಾ ಶಿಕ್ಷಣ (ನೌಕರರ ಸೇವೆಗಳ ಪ್ರಾಂತೀಕರಣ ಮತ್ತು ಮದರಸಾ ಶಿಕ್ಷಣ ಸಂಸ್ಥೆಗಳ ಮರು-ಸಂಘಟನೆ) ಕಾಯ್ದೆ, 2018 ಕಾಯ್ದೆಗಳನ್ನು ರದ್ದುಗೊಳಿಸಲು ಮಸೂದೆಯು ಪ್ರಸ್ತಾಪಿಸಿದೆ.
ಬಿಲ್ ಮಂಡಿಸಿದ ಹಿಮಂತ ಬಿಸ್ವಾ ಶರ್ಮಾ, ಈ ಬಿಲ್ ಖಾಸಗಿ ಮದರಸಾಗಳನ್ನು ನಿಯಂತ್ರಿಸುವ ಹಾಗೂ ರದ್ದುಗೊಳಿಸುವ ಬಿಲ್ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಲ್ಲಾ ಮದರಸಾ ಸಂಸ್ಥೆಗಳನ್ನು ಪ್ರಾಥಮಿಕ, ಉನ್ನತ ಮತ್ತು ಮಾಧ್ಯಮಿಕ ಶಾಲೆಗಳಾಗಿ ಪರಿವರ್ತಿಸಲಾಗುವುದು ಮತ್ತು ಬೋಧನೆ ಮತ್ತು ಬೋಧಕೇತರ ಸಿಬ್ಬಂದಿಗಳ ಸ್ಥಿತಿ, ವೇತನ, ಭತ್ಯೆಗಳು ಮತ್ತು ಸೇವಾ ಪರಿಸ್ಥಿತಿಗಳ ಬದಲಾವಣೆಯಿಲ್ಲ ಎಂದು ಹೇಳಿದ್ದಾರೆ.
ಅಸ್ಸಾಂನಲ್ಲಿ 610 ಸರ್ಕಾರಿ ಮದರಸಾಗಳಿದೆ. ಈ ಮದರಸಾಗಳನ್ನು ಸಾಮಾನ್ಯ ಸರ್ಕಾರಿ ಶಾಲೆಗಳನ್ನಾಗಿ ಪರಿವರ್ತಿಸಿ, ಹಳ್ಳಿ ಹಳ್ಳಿಯಲ್ಲೂ ಎಲ್ಲರಿಗೂ ಶಿಕ್ಷಣ ಒದಗುವಂತೆ ಮಾಡುವ ಉದ್ದೇಶವೇ ಈ ಬಿಲ್ ಎಂದಿದ್ದಾರೆ.